ಸಿದ್ದಾಪುರ: ಕಾನಸೂರು ಸಮೀಪದ ನಾಣಿಕಟ್ಟಾ ಬಳಿ ಇರುವ ಮಾಳದಮನೆ ಕುಡುವಳ್ಳಿ ಮೋರಿ ಸಮೀಪ ಯಾರೋ ಕಿಡಿಗೇಡಿಗಳು ಹುಲ್ಲಿನ ಗೊಣವೆಗೆ ಬೆಂಕಿ ಇಟ್ಟಿದ್ದು ಸುಮಾರು 40 ಸಾವಿರ ರೂಪಾಯಿಗಳ ಹುಲ್ಲು ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ನಡೆದಿದೆ.

RELATED ARTICLES  ಬೊಲೆರೋದಲ್ಲಿ ಕೋಣಗಳನ್ನು ಸಾಗಾಟ : ಮೂವರು ಅರೆಸ್ಟ್.

ಸುರನಕೇರಿಯ ಶಾಂತಾರಾಮ ರಾಮಕೃಷ್ಣ ಹೆಗಡೆ ಅವರಿಗೆ ಸೇರಿದ ಸುಮಾರು 1.5 ಎಕರೆ ಗದ್ದೆಯ ಹುಲ್ಲನ್ನು ಸರಿದು ಗೊಣವೆ ಮಾಡಿ ಇಡಲಾಗಿತ್ತು. ಆದರೇ ಯಾರೋ ಕಿಡಿಗೇಡಿಗಳು ಗೊಣವೆಗೆ ರಾತ್ರಿ ಬೆಂಕಿಯನ್ನು ಇಟ್ಟಿದ್ದು ಸುಮಾರು 1500 ಸೂಡು ಹುಲ್ಲು ಸಂಪೂರ್ಣವಾಗಿ ಸುಟ್ಟಿದ್ದು 40 ಸಾವಿರ ರೂಪಾಯಿಗಳ ಅಂದಾಜು ಹಾನಿ ಆಗಿರಬಹುದೆಂದು ಅಂದಾಜಿಸಲಾಗಿದೆ. ಈಗಾಗಲೇ ಸ್ಥಳಕ್ಕೆ ಸಿದ್ದಾಪುರ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES  ಉತ್ತರ ಕನ್ನಡದವರು ಬುದ್ದಿವಂತರು ಅವರಿಗೆ ನಾವು ಹೇಳಿಕೊಡುವುದು ಏನೂ ಇಲ್ಲ : ಸಿ.ಎಂ ಸಿದ್ದರಾಮಯ್ಯ.