ಹುಬ್ಬಳ್ಳಿ: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾದ ದಿನವೇ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹುಬ್ಬಳ್ಳಿಯಲ್ಲಿ ಭವಿಷ್ಯ ನುಡಿದರು.ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆಪರೇಶನ್ ಕಮಲ ಮಾಡುವುದೇ ಬೇಡ. ಮೈತ್ರಿ ಸರ್ಕಾರದ ಜೊತೆಗಾರರು ತಾವೇ ತಾವೇ ಕಚ್ಚಾಡಿ ಸರ್ಕಾರ ಬೀಳಿಸಲಿದ್ದಾರೆಂದರು.ಸಂಪುಟ ವಿಸ್ತರಣೆ ದಿನವೇ ಸರ್ಕಾರ ಬೀಳುವುದು ಖಚಿತ ಎಂದ ಅವರು ಮಂತ್ರಿಗಿರಿಗಾಗಿ ಲಾಬಿ ನಡೆಸಿರುವವರಿಂದ ಅದು ಸಿಗದೆ ಹೋದರೆ ಸರ್ಕಾರ ಉರುಳಿಸಲಿದ್ದಾರೆ. ಅದಕ್ಕಾಗಿ ಕಾದು ನೋಡಿ ಎಂದರು.ಅಧಿಕಾರ ಲಾಲಸೆಯಿಂದ ಕಾಂಗ್ರೆಸ್ ಜೆಡಿ(ಎಸ್) ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಸರ್ಕಾರ ಇದೇನಾ? ಎಂಬುದೇ ಅನುಮಾನ ಮೂಡುತ್ತಿದೆ ಎಂದು ಜರಿದರು.

RELATED ARTICLES  ಪ್ರವಾಹ ಪರಿಸ್ಥಿತಿ ನಿರ್ವಹಿಸಲು ರಾಜ್ಯ ಸರ್ಕಾರದಿಂದ 195 ಕೋಟಿ ಬಿಡುಗಡೆ.

ಅಧಿಕಾರಕ್ಕಾಗಿ ಕಾಂಗ್ರೆಸ್- ಜೆಡಿಎಸ್ ಎಲ್ಲ ಸಿದ್ಧಾಂತ ಗಾಳಿಗೆ ತೂರಿ ಹೊಂದಾಣಿಕೆ ಮಾಡಿಕೊಂಡಿವೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿ(ಎಸ್) ನಿಂದ ಹೀನಾಯವಾಗಿ ಸೋಲುಂಡ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಯಾವ ಮುಖ ಇಟ್ಟುಕೊಂಡು ಈ ಹೊಂದಾಣಿಕೆಗೆ ಒಪ್ಪೀದರೋ? ನನಗೆ ಇಂದಿಗೂ ಅರ್ಥವಾಗುತ್ತಿಲ್ಲ ಎಂದು ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.ಸಿದ್ಧರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ ಈ ಹೊಂದಾಣಿಕೆಗೆ ಮುಂದಾಗುತ್ತಿದ್ದಿಲ್ಲ ಎಂದು ಟೀಕಿಸಿದ ಅವರು ಆಪಾದಿಸಿದರು.ಕಾಂಗ್ರೆಸ್‌ಗೆ ಇಂತಹ ದುಸ್ಥಿತಿ ಎಂದೂ ಬಂದಿರಲಿಲ್ಲ. ಇಂದು ಅದರ ಪರಿಸ್ಥಿತಿ ಕಂಡು ಆಯ್ಯೋ ಎನಿಸುತ್ತದೆ ಎಂದು ಅವರು ಹಾಸ್ಯ ಮಾಡಿದರು.ಕೇವಲ ದೇವೇಗೌಡ-ರೇವಣ್ಣನವರದ್ದೆ ಕಾರುಬಾರಿನ ಈ ಸರ್ಕಾರ ಒಂದು ಸರ್ಕಾರವೇನ್ರೀ? ಎಂದು ಪ್ರಶ್ನಿಸಿದ ಅರು ಯಾವ ಭಾಷೆಯಲ್ಲಿ ಹೇಳಬೇಕು ತಿಳಿಯುತ್ತಿಲ್ಲ ಎಂದರು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 11-03-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?