ಭಟ್ಕಳ: ಜಿಲ್ಲಾ ಪಚಾಯತ ಉತ್ತರಕನ್ನಡ, ಕನ್ನಡ ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಾಗೂ ವೆಂಕಟೇಶ್ವರ ಯುವಕ ಸಂಘ, ಕನ್ನಡ ಸಾಹಿತ್ಯ ಪರಿಷತ್, ಭುವನೇಶ್ವರಿ ಕನ್ನಡ ಸಂಘ ಹಾಗೂ ನೇತಾಜಿ ಸ್ಪೋಟ್ರ್ಸ ಕ್ಲಬ್ ಇವರ ಸಹಕಾರದೊಂದಿಗೆ ಸಾಂಸ್ಕøತಿಕ ಸೌರಭ ಕಾರ್ಯಕ್ರಮವು ಭಟ್ಕಳದ ನಿಚ್ಚಲ ಮಕ್ಕಿ ತಿರುಮಲ ವೆಂಕಟರಮಣ ಸಭಾ ಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಸುನೀಲ ನಾಯ್ಕ ಮಾತನಾಡಿ ಸಾಂಸ್ಕøತಿಕ ಸೌರಭ ಕಾರ್ಯಕ್ರಮವು ಜಿಲ್ಲೆಯ ವಿವಿಧ ಜಾನಪದ ಹಾಗೂ ಲಲಿತ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಹಾಗೆಯೇ ನಮ್ಮ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸಹಕಾರಿ. ಈ ನೆಲೆಯಲ್ಲಿ ಭಟ್ಕಳದಲ್ಲಿ ಸಾಂಸ್ಕøತಿಕ ಸೌರಭ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದರಲ್ಲದೇ ಇನ್ನು ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಇಂಥ ಕಾರ್ಯಕ್ರಮಗಳನ್ನು ಆಯೋಜಿಸಲು ಎಲ್ಲರ ಸಹಕಾರ ಕೋರಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥತರಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ನಮ್ಮ ನೆಲದ ಸಂಸ್ಕøತಿ ಪರಂಪರೆಯನ್ನು ಬಿಂಬಿಸುವ ದೇಸಿ ಕಲಾಪ್ರಕಾರಗಳನ್ನು ಯುವಪೀಳಿಗೆಗೆ ಪರಿಚಯಿಸುವುದಷ್ಟೇ ಅಲ್ಲದೇ ಅದನ್ನು ಮುಂದಿನವರಿಗೆ ದಾಟಿಸಲು ಸಾಂಸ್ಕøತಿಕ ಸೌರಭ ಕಾರ್ಯಕ್ರಮ ಸಹಕಾರಿ.

RELATED ARTICLES  ಉತ್ತರಕನ್ನಡ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರಿ ಸಂಘದ ಚುನಾವಣೆ : ಕವಲಕ್ಕಿ ರವಿ ಕೆ. ಶೆಟ್ಟಿ ಹಾಗೂ ಅವರ ಬೆಂಬಲಿಗರಿಗೆ ಗೆಲುವು

ಈ ನೆಲೆಯಲ್ಲಿ ಜಿಲ್ಲೆಯ ಕಲಾಪ್ರಕಾರಗಳಿಗೆ, ಕಲಾವಿದರುಗಳಿಗೆ ವೇದಿಕೆಯನ್ನೊದಗಿಸುವ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಾರ್ಯ ಶ್ಲಾಗನೀಯ ಎಂದು ನುಡಿದರಲ್ಲದೇ ಇಂತಹ ಅಪರೂಪದ ಕಾರ್ಯಕ್ರಮವನ್ನು ಭಟ್ಕಳದಲ್ಲಿ ಆಯೋಜಿಸಲು ಕಾರಣರಾದ ಶಾಸಕ ಸುನೀಲ ನಾಯ್ಕ ಅವರನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಇಂದಿನ ಪೀಳಿಗೆಗೆ ನಮ್ಮ ನೆಲದ ಸಂಸ್ಕøತಿ ಪರಂಪರೆ ಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪರಿಚಯಿಸುವ ಮೂಲಕ ಮನಸನ್ನು ಅರಳಿಸಿ ಸಂಸ್ಕಾರವಂತರನ್ನಾಗಿ ಮಾಡಬೇಕಿದೆ ಎಂದು ನುಡಿದರು. ವೇದಿಕೆಯಲ್ಲಿ ಉಪಸ್ತಿತರಿದ್ದ ಭಾಜಪಾ ತಾಲೂಕಾಧ್ಯಕ್ಷ ರಾಜೇಶ ನಾಯ್ಕ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಗಣಪತಿ ಬಿ.ನಾಯ್ಕ, ಕುಮಾರ ಹೆಬಳೆ, ಗುರುಮಠದ ಉಪಾಧ್ಯಕ್ಷ ಮೋಹನ ನಾಯ್ಕ, ನೇತಾಜಿ ಸ್ಪೋಟ್ರ್ಸ ಕ್ಲಬ್ ನ ಬಾಲಚಂದ್ರ ಮಹಾಲೆ ವೆಂಕಟೇಶ್ವರ ಯುವಕ ಸಂಘದ ಕಾರ್ಯದರ್ಶಿ ಪಾಂಡುರಂಗ ನಾಯ್ಕ ಉಪಸ್ಥಿತರಿದ್ದರು. ಕನ್ನಡ ಸಂಸ್ಕøತ ಇಲಾಖೆಯ ಸಹಾಯಕ ನಿರ್ದೇಶಕ ಹಿಮಂತರಾಜು ಎಲ್ಲರನ್ನು ಸ್ವಾಗತಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು.

RELATED ARTICLES  ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿಗಳ ಸಾಧನೆ.

ಕಾರ್ಯಕ್ರಮವನ್ನು ಶಿಕ್ಷಕ ಪರಮೇಶ್ವರ ನಾಯ್ಕ, ಮಂಜುನಾಥ ನಾಯ್ಕ ಹಾಗೂ ಶಿಕ್ಷಕಿ ಯಶೋಧಾ ನಾಯ್ಕ ನಿರ್ವಹಿಸಿದರು. ದಿ ನ್ಯೂ ಇಂಗ್ಲೀಷ ಪ.ಪೂ.ಕಾಲೇಜಿನ ವಿಧ್ಯಾರ್ಥಿನಿಯರು ನಾಡಗೀತೆ ಹಾಗೂ ಸ್ವಾಗತ ಗೀತೆ ಹಾಡಿದರೆ ಶ್ರೀಕಾಂತ ನಾಯ್ಕ ಆಸರಕೇರಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಬಿ.ಎಂ.ಭಜಂತ್ರಿ ಮುಂಡಗೋಡು ಇವರಿಂದ ಶಾಸ್ತ್ರೀಯ ವಾದ್ಯ ಸಂಗೀತ, ವಿಶ್ವೇಶ್ವರ ಭಟ್ ಖರವಾ ಇವರಿಂದ ಶಾಸ್ತ್ರೀಯ ಸಂಗೀತ, ಗಾನಶ್ರೀ ಕಲಾ ತಂಡ ಇವರಿಂದ ಸುಗಮ ಸಂಗೀತ, ನಯನ ನೃತ್ಯ ನಿಕೇತನ ಇವರಿಂದ ಸಮೂಹ ನೃತ್ಯ, ಮಹಾಗಣಪತಿ ಕಲಾತಂಡ ಇವರಿಂದ ಡೊಳ್ಳು ಕುಣಿತ ,ದೀಪಾ ಕಂಬಾರ ತಂಡ ಇವರಿಂದ ಜಾನಪದ ನೃತ್ಯ, ಶಿರಸಿಯ ನಾರಾಯಣ ದಾಸ ಇವರಿಂದ ಹರಿಕಥೆ, ಹಾಗೂ ಚನ್ನಪಟ್ಟಣ ಮಾರುತಿ ಯಕ್ಕಷಗಾನ ಮಂಢಳಿಯಿಂದ ಲಂಕಾದಹನ ಯಕ್ಷಗಾನ ಕಾರ್ಯಕ್ರಮವು ಕಲಾಭಿಮಾನಿಗಳ ಮನರಂಜಿಸಿ ಎಲ್ಲರ ಪೃಶಂಸೆಗೆ ಪಾತ್ರವಾಯಿತು.