ಕಾರವಾರ: ಗ್ರಾಮ ಪಂಚಾಯತ್​​​, ಎಸ್​ಡಿಎಮ್​ಸಿ ಸದಸ್ಯರು ಹಾಗೂ ಗ್ರಾಮದ ಜನರ ಕಾಳಜಿಯಿಂದ ಒಂದು ಕನ್ನಡ ಶಾಲೆ ಇಂದು ಸುತ್ತಲಿನ ಶಾಲೆಗಳಿಗೆ ಮಾದರಿಯಾಗಿದೆ.

ಕನ್ನಡ ಶಾಲೆಗಳು ಅಂದ್ರೆ ಅಸಡ್ಡೆ ತೋರಿಸುತ್ತಿದ್ದ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಈ ಶಾಲೆ ಅಂದ್ರೆ ಈಗ ಅಚ್ಚುಮೆಚ್ಚು, ಈ ಶಾಲೆ ಶಿಸ್ತು, ಕಲಿಕಾ ವಿಧಾನ, ಹಾಗೂ ವಿಭಿನ್ನ ಪೇಂಟಿಂಗ್​ನಿಂದ ಈಗ ಎಲ್ಲರ ಚಿತ್ತ ತನ್ನತ್ತ ತಿರುಗಿಸಿಕೊಂಡಿದೆ.

ರೈಲಿನ ಮಾದರಿಯ ಶಾಲೆ, ದುಂಡು ಮೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಸ್ವಚ್ಚಂದವಾಗಿ ಆಡುತ್ತಿರುವ ಮಕ್ಕಳು, ಈ ದೃಶ್ಯಗಳು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮೂಡಶಿರಾಲಿ ಗ್ರಾಮದಲ್ಲಿ.

RELATED ARTICLES  ಆತ್ಮಹತ್ಯೆಗೆ ಶರಣಾದ ವ್ಯಕ್ತಿ..!

ಹೌದು ಈ ಎಲ್ಲಾ ದೃಶ್ಯಗಳನ್ನ ನೋಡಿದರೆ ಇದು ಕಾನ್ವೆಂಟ್ ಶಾಲೆ ಅನಿಸುತ್ತೆ. ಆದರೆ, ಇದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಅಂದ ಹಾಗೆ ಈ ಶಾಲೆ ಎಲ್ಲರ ಚಿತ್ತ ತನ್ನತ್ತ ತಿರುಗುವಂತೆ ಮಾಡಿದ್ದು ವಿಭಿನ್ನವಾದ ಪೇಂಟಿಂಗ್​ನಿಂದ. ರೈಲು ಮಾದರಿಯಲ್ಲಿ ಕಾಣುವ ಈ ಶಾಲೆಯು ಮಕ್ಕಳನ್ನು ತನ್ನತ್ತ ಕೈಬೀಸಿ ಆಕರ್ಷಿಸುತ್ತಿದೆ.

RELATED ARTICLES  ಸ್ನಾನ ಮಾಡುವ ವೀಡಿಯೋ ಬೇಕೆಂದು ಮಹಿಳೆಯನ್ನು ಪೀಡಿಸುತ್ತಿದ್ದ ವ್ಯಕ್ತಿ..?

ಬರಿ ರೈಲು ಮಾದರಿಗೆ ಅಷ್ಟೆ ಅಲ್ಲದೇ ಈ ಶಾಲೆ ಶಿಸ್ತು, ಸ್ಮಾರ್ಟ್ ಕ್ಲಾಸ್, ವಿಭಿನ್ನ ಕಲಿಕಾ ವಿಧಾನದಲ್ಲೂ ಒಂದು ಕೈ ಮೇಲಿದೆ. ವಿದ್ಯಾರ್ಥಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಸುತ್ತಲಿನ ಜನರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸಲು ಮನಸ್ಸು ಮಾಡುತ್ತಿದ್ದಾರೆ. ಮಕ್ಕಳು ಹಿಂದಿಗಿಂತಲೂ ಈಗ ಶಾಲೆಗೆ ಬರಲು ಉತ್ಸುಕರಾಗಿದ್ದು, ಶಾಲೆಗೆ ಬರುವಾಗ ಮತ್ತು ಹೋಗುವಾಗ ರೈಲಿನಲ್ಲಿ ಹೋದಂತೆ ಭಾಸವಾಗುತ್ತಿದೆ ಎಂದು ಖುಷಿಯಾಗಿದ್ದಾರೆ.