ಕುಮಟಾ : ಶಾಲೆಯ ಆವಾರದಲ್ಲಿ ಚಿಟ್ಟೆ ಹಿಡಿಯಲು ಯತ್ನಿಸುತ್ತಿದ್ದ ವಿದ್ಯಾರ್ಥಿಯ ಮೇಲೆ ಶಿಕ್ಷಕಿ ತನ್ನ ಪ್ರತಾಪ ತೋರಿದ ಘಟನೆ ಇದೀಗ ಕುಮಟಾ ಪೋಲೀಸ್ ಠಾಣೆಯ ಮೆಟ್ಟಿಲೇರಿದೆ.
ತನ್ನ ಮಗ ಶಾಲಾ ಆವಾರದಲ್ಲಿ ಚಿಟ್ಟೆಯೊಂದನ್ನ ಹಿಡಿಯುತ್ತಿದ್ದಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ಶಾಲಾ ಶಿಕ್ಷಕಿ ಕಾಲಿಗೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಅಲ್ಲದೆ ಮುಖದ ಮೇಲೆ ಹೊಡೆದ ರಬಸಕ್ಕೆ ಹಲ್ಲು ಉದುರಿ ಹೋಗಿವೆ ಎಂದು ಪಾಲಕರು ದೂರು ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಶಾಲಾ ಮುಖ್ಯ ಶಿಕ್ಷಕಿಯಲ್ಲಿ ದೂರು ನೀಡಿದಾಗ ಆಡಳಿತ ಮಂಡಳಿಯವರೊಂದಿಗೆ ಮಾತಾನಾಡುವಂತೆ ಉಡಾಫೆ ಉತ್ತರ ನೀಡಿದ್ದಾರೆ. ಆಡಳಿತ ಮಂಡಳಿಗೆ ದೂರುಸಲ್ಲಿಸಿದಾಗ ಅವಾಚ್ಚ ಶಬ್ದದಿಂದ ನಿಂದಿಸಿದ್ದಾರೆ ಎಂದು ಶಾಲಾ ಶಿಕ್ಷಕಿ. ಶಾಲಾ ಮುಖ್ಯಾದ್ಯಾಪಕಿ. ಶಾಲಾ ಆಡಳಿತ ಮಂಡಳಿಯವರ ಮೇಲೆ ಕುಮಟಾ ಪೊಲೀಸ ಠಾಣೆಯಲ್ಲಿ ಹಲ್ಲೆಗೊಳಗಾದ “ವಿದ್ಯಾರ್ಥಿಯ ಪಾಲಕ ಚಂದಾವರದ ಅಜಗರ ಅಲಿ ಅಬ್ದುಲ್ ಖಾಸಿಂ ಕೋಟೆಬಾಗಿಲ ಅವರು ದೂರು ದಾಖಲಿಸಿದ್ದಾರೆ.
ಹಲ್ಲೆಗೊಳಗಾದ “ವಿದ್ಯಾರ್ಥಿ ಕುಮಟಾ ಪಟ್ಟಣದ ಹೆಡ್ ಬಂದರ ರಸ್ತೆಯಲ್ಲಿರುವ ಶಶಿಹಿತ್ತಲ ಸಮೀಪದ ಐಡಿಯಲ್ ಸ್ಕೂಲಿನಲ್ಲಿ ಮೂರನೆ ತಗತಿಯಲ್ಲಿ ಓದುತ್ತಿರುವ ಹಸನ್ ಇಯಾದ್ ಅಜಗರಲಿ ಕೋಟೆಬಾಗಿಲ್ ಎನ್ನಲಾಗಿದೆ.
ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲೆಗೊಂಡಿದ್ದು ತನಿಖೆ ಮುಂದುವರಿದಿದೆ.ತನಿಖೆಯ ನಂತರ ಪೂರ್ಣ ವಿವರ ಹೊರಬರಲಿದೆ.