ಕುಮಟಾ: ಸ್ವಸ್ತಿ ಪ್ರಕಾಶನ ಹಾಗೂ ಸ್ವಸ್ತಿ ಬಳಗ ಕುಮಟಾದ ಸಹಯೋಗದಲ್ಲಿ ತಮ್ಮ ಐದನೇ ವರ್ಷದ ಕಾರ್ಯಕ್ರಮದ ನಿಮಿತ್ತ ” ಸ್ವಸ್ತಿ ಸಂಭ್ರಮ- 2018″ ಎನ್ನುವ ವಿಶೇಷ ಕಾರ್ಯಕ್ರಮವನ್ನು ಡಿಸೆಂಬರ್ 9 ಭಾನುವಾರದದಂದು ಕುಮಟಾದ ಗಿಬ್ ಪ್ರೌಢಶಾಲೆಯ ಆವಾರದಲ್ಲಿರುವ ರಾಜೇಂದ್ರ ಪ್ರಸಾದ್ ಸಭಾ ಭವನ ದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ನಿಮಿತ್ತ ಕರಕುಶಲ ವಸ್ತು ಪ್ರದರ್ಶನ, ಕವಿ ಸಮಯ ಹಾಗೂ ಶ್ರೀಮತಿ ಪ್ರಿಯಾ ಭಟ್ ಅವರ ” ನಾನೊಂದು ಹುಚ್ಚು ಹೊಳೆ” ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮವು ಸೇರಿದಂತೆ ಬೆಳಿಗ್ಗೆ ಹತ್ತರಿಂದ ಸಂಜೆ ಐದರ ವರೆಗೂ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಶ್ರೀ ಜಿ.ಡಿ. ಭಟ್ ಕೆಕ್ಕಾರು(ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು) ಡಾ. ಶ್ರೀಧರ್ ಬಳಗಾರ್(ಉಪನ್ಯಾಸಕರು,ಕಮಲಾ ಬಾಳಿಗಾ ಮಹಾ ವಿದ್ಯಾಲಯ ಕುಮಟಾ) ಶ್ರೀ ಕೆ.ಎನ್. ವೆಂಕಟಗಿರಿ(ಪತ್ರಕರ್ತರು ಸಾಗರ) ಹಾಗೂ ಶ್ರೀ ಉಮೇಶ್ ಮುಂಡಳ್ಳಿ(ಗೌರವ ಕೋಶಾಧ್ಯಕ್ಷರು ಜಿ.ಕ.ಸ.ಪ. ಉತ್ತರ ಕನ್ನಡ) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಅನೇಕ ಕರ ಕುಶಲ ಕಲಾವಿದರು ಹಾಗೂ ಕವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

RELATED ARTICLES  ಕುಮಟಾ ಕಾಗಲ ಮೂಲದಅಮೇರಿಕಾ ನಿವಾಸಿ ಡಾ.ನಾಗೇಶ ರೇವಣಕರ್ ನಿಧನ.

“ಸ್ವಸ್ತಿ ಪ್ರಕಾಶನ”ವು ಕಲೆ ಸಂಸ್ಕೃತಿ, ಸಾಹಿತ್ಯವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈಗ ಐದು ವರುಷಗಳಿಂದ ಪ್ರತೀ ವರ್ಷವೂ ” ನಮ್ಮಿಂದ ನಿಮಗೆ ಕನ್ನಡವು ಮನೆಮನೆಗೆ” ಎಂಬ ಧ್ಯೇಯದೊಂದಿಗೆ ಕನ್ನಡ ಸಾಹಿತ್ಯದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ರಾಜ್ಯ ಮಟ್ಟದ ಕಥಾ ಸಂಕಲನ ಸ್ಪಧರ್ೆ ಕಾದಂಬರಿ ಸ್ಪಧರ್ೆಗಳನ್ನು ನಡೆಸಿ ಬಹುಮಾನಿತ ಕೃತಿಗಳನ್ನು ಪ್ರಕಟಿಸಿದೆ. ಈ ವರ್ಷ ಶ್ರೀಮತಿ ಪ್ರಿಯಾ ಭಟ್ ಅವರ ” ನಾನೊಂದು ಹುಚ್ಚು ಹೊಳೆ” ಕಥಾ ಸಂಕಲನವೂ ಇದೇ ದಿನ ಮಧ್ಯಾಹ್ನ 2.30 ಕ್ಕೆ ಲೋಕಾರ್ಪಣೆಗೊಳ್ಳಲಿದ್ದು ಸಾಹಿತ್ಯಾಸಕ್ತರು ಕಲಾವಿದರು ಕವಿಗಳು ಎಲ್ಲರೂ ಸೇರುವ ಕನ್ನಡದ ಹಬ್ಬ ಇದಾಗಿದ್ದು ಸಾರ್ವಜನಿಕರು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.

RELATED ARTICLES  ಭಟ್ಕಳಕ್ಕೆ ಆಗಮಿಸಿದ ಶೋಭಾ ಕರಂದ್ಲಾಜೆ ಮೃತನ ಕುಟುಂಬಕ್ಕೆ ಸಾಂತ್ವಾನ.