ಹೊನ್ನಾವರ : ಕುಡಿದ ಮತ್ತಿನಲ್ಲಿ ಮಾನಸಿಕ ಸ್ದಿತಿ ಕಳೆದುಕೊಂಡು ಮಗನೇ ತಂದೆಯಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ

ಈ ಘಟನೆ ನಡೆದದ್ದು ಹೊನ್ನಾವರ ತಾಲೊಕಿನ ಅರೇಅಂಗಡಿಯಲ್ಲಿ. ವ್ಯಾಪಕ ಮಧ್ಯ ಮಾರಟ ನಡೆಯುತ್ತಿದ್ದುದನ್ನು ಸಾರ್ವಜನಿಕರು ಈ ಹಿಂದೆ ಅಭಕಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇಲ್ಲಿ ಪರಿಸ್ದಿತಿ ಹತೋಟಿ ಇರಲಿಲ್ಲ. ತಂದೆ ಅಶೋಕ ಹುಲಸ್ವಾರ ವಯಸ್ಸು ೫೫ ಕೂಲಿ ಕೆಲಸ ಮಾಡಿ ಮಗನಿಂದ ಬೇರೆ ಮನೆ ಮಾಡಿ ತನ್ನ ಸಂಸಾರ ನಡೆಸುತ್ತಿದ್ದ. ಆದರೆ ಮಗನಾದ ಈಶ್ವರ ಈತನು ಮಧ್ಯದ ದಾಸನಾಗಿ ಮಾನಸಿಕ ಹಿಡಿತ ಕಳೆದುಕೊಂಡು ಸ್ವಲ್ಪ ದಿನದ ಹಿಂದೆ ತನ್ನ ಹೆಂಡತಿ ಪ್ರೇಮಾಳ ಮೇಲೆ ಹಲ್ಲೆ ನಡೆಸಿದ್ದ. ಪತ್ನಿ ಬೇರೆ ಊರಿನಲ್ಲಿ ಈಗ ವಾಸವಾಗಿದ್ದಾಳೆ. ಕುಡಿತದ ಅಮಲಿನಿಂದ ನಿನ್ನೆ ಸಂಜೆ ೫-೪೫ ಸುಮಾರಿಗೆ ಮಗನಾದ ಈಶ್ವರ ತಂದೆಯ ಮೇಲೆ ತಲೆಗೆ ಬಲವಾಗಿ ಹೊಡೆದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೋಲೀಸರು ಆರೊಪಿಯನ್ನು ಬಂಧಿಸಿದ್ದಾರೆ.

RELATED ARTICLES  ಟೆಂಪೋ ಪಲ್ಟಿಯಾಗಿ ಕಾಲೇಜು ವಿದ್ಯಾರ್ಥಿನಿ ಸಾವು.