ಗೋಕರ್ಣ: ಇಲ್ಲಿನ ಕಡಲ ತೀರದ ಯಾವ-ಯಾವ ವಸತಿಗೃಹಗಳು ಅಧಿಕೃತ, ಎಷ್ಟು ಅನಧಿಕೃತವಾಗಿದೆ ಎಂಬ ವಿವರವನ್ನು ಸಲ್ಲಿಸುವಂತೆ ಗ್ರಾ.ಪಂ ಅಧಿಕಾರಿಗಳಿಗೆ ಜಿ. ಪಂ. ಮುಖ್ಯಕಾರ್ಯದರ್ಶಿ ರೋಷನ್ ಸೂಚನೆ ನೀಡಿದ್ದಾರೆ. ಅನೇಕ ಅನಧಿಕೃತ ವಸತಿಗೃಹಗಳು ಇರಬಹುದೆಂಬ ಜನತೆಯ ಹೇಳಿಕೆಗೆ ಸ್ಪಂದಿಸಿದ ಅವರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಹಲವು ವರ್ಷಗಳಿಂದ ನಾಲಾ ಹೊಲಸು ನೀರಿನಿಂದ ತುಂಬಿದೆ. ಊರಿನ ಎಲ್ಲಾ ವಸತಿಗೃಹಗಳಿಂದ, ಮನೆಯಿಂದ ತ್ಯಾಜ್ಯ ನೀರನ್ನು ಚರಂಡಿಗೆ ಬಿಡುತ್ತಿದ್ದು, ಇವೆಲ್ಲವೂ ಸಂಗಮನಾಲಾಕ್ಕೆ ಸೇರಿ ನಂತರ ಸಮುದ್ರ ಸೇರುತ್ತದೆ. ಮಳೆಗಾಲದ ಸಮಯದಲ್ಲಿ ನೀರು ಸರಾಗವಾಗಿ ಸಮುದ್ರ ಸೇರಿದರೆ ಬೇಸಿಗೆಯಲ್ಲಿ ನೀರು ಹರಿದು ಹೋಗದೆ ಅಲ್ಲೆ ನಿಂತು ಹೊಲಸು ವಾಸನೆ ಬರುತ್ತಿದ್ದು, ರೋಗರುಜಿನಗಳ ತಾಣವಾಗಿದೆ ಎಂಬ ಜನತೆಯ ಮಾತಿಗೆ ಸ್ಫಂದಿಸಿದ ಅವರು
ಮುಂದಿನ ದಿನಗಳಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಅಲ್ಲಿನ ತ್ಯಾಜ್ಯ ನೀರು ಯಾವ ರೀತಿಯಲ್ಲಿ ಬಿಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು ಎನ್ನಲಾಗಿದೆ.

RELATED ARTICLES  ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತ ಇವರ ಮಾರ್ಗದರ್ಶನದಲ್ಲಿ 16ನೇ ವರ್ಷದ ಮಕ್ಕಳ ಯಕ್ಷಗಾನ ತರಬೇತಿ ಶಿಬಿರ ಏ.15ರಿಂದ

ಇಲ್ಲಿಯ ಸ್ಥಿತಿಯಿಂದ ಬೇಸತ್ತ ಸ್ಥಳೀಯ ನಿವಾಸಿಗಳು ತಮಗೆ ವಾಸಮಾಡುಲು ಕಷ್ಟವಾಗುತ್ತದೆ ಎಂದು ಹಲವಾರು ಬಾರಿ ಅಳಲು ತೋಡಿಕೊಂಡಿದ್ದರು. ಇದರಂತೆ ಇಲ್ಲಿನ ಆರೋಗ್ಯ ಇಲಾಖೆ ಸಹ ಲಿಖಿತವಾಗಿ ತಿಳಿಸಿತ್ತು. ಅದರಂತೆ ಕುಮಟಾ ಸಭೆ ಮುಗಿಸಿ ಸಂಜೆ ಬಂದ ಅಧಿಕಾರಿಗಳು ವಿವಿಧ ಕಡೆ ವೀಕ್ಷಿಸಿದರು ಎನ್ನಲಾಗಿದೆ. ಅಧಿಕಾರಿಗಳ ಮುಂದಿನ‌ ನಡೆಯ ಬಗ್ಗೆ ಕದು ನೋಡಬೇಕಾಗಿದೆ.

RELATED ARTICLES  ಮನುಷ್ಯನ ವ್ಯಕ್ತಿತ್ವಕ್ಕೆ ಸಂಸ್ಕಾರ, ಸಂಸ್ಕೃತಿ ಅಗತ್ಯ: ಕೃಷ್ಣ ಭಟ್ಟ ನಾಯಕನಕೆರೆ