ಹೊನ್ನಾವರ; ಗ್ರಾಮಾಭಿವ್ರದ್ದಿ ಯೋಜನೆ ಹಡಿನಬಾಳ ವಿಭಾಗದ ವತಿಯಿಂದ ಕವಲಕ್ಕಿ ಸುಬ್ರಹ್ಮಣ್ಯ ಕಾಲೇಜಿನಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಸ್.ಜಿ.ಭಟ್ಟ್ ಗ್ರಾಮಾಭಿವ್ರದ್ದಿ ಯೋಜನೆ ಗ್ರಾಮೀಣ ಜನರ ಆಶಾ ಕಿರಣ.ಯುವ ಸಮುದಾಯ ದುಶ್ಚಟದ ಪರಣಾಮದ ಬಗ್ಗೆ ಜಾಗ್ರತಿವಹಿಸುವುದು ಅಗತ್ಯ. ಆ ನಿಟ್ಟಿನಲ್ಲಿ ಸಂಭದಿಸಿದ ಕಾಲೇಜಿನಲ್ಲಿ ವಿದ್ಯಾರ್ಥಿ ಸಮುದಾಯದ ಮಧ್ಯೆ ಆಚರಿಸುವುದು ನಿಜಕ್ಕೂ ಪ್ರಶಂಸನೀಯವಾಗಿದೆ. ಯುವ ಸಮುದಾಯದ ಗುಟಾಕ, ಸಿಗರೇಟು ದಾಸರಾಗುತ್ತಿರುವುದು ನಿಜಕ್ಕು ಕಳವಳಕಾರಿ.ಇದರಿಂದ ಆಗುವ ಪರಿಣಾಮದ ಬಗ್ಗೆ ಜಾಗ್ರತಿ ಮೂಡಿಸುವುದು. ಇಂತಹ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಪ್ರತಿಜ್ಞಾವಿಧಿ ಬೊದಿಸಿದರು.
ಕಾಲೇಜಿನ ಶಿಕ್ಷಕರಾದ ಶ್ರೀ ಅಶೋಕ ಅನಿಸಿಕೆ ವ್ಯಕ್ತಪಡಿಸಿದರು. ಯೋಜನೆ ಮೆಲ್ವಚಾರಕರಾದ ಶ್ರೀ ಸುಭಾಷ ಯೊಜನೆ ಕಾರ್ಯಕ್ರಮದ ಬಗ್ಗೆ ವಿವರಿಸಿದರು ವೇದಿಕೆಯಲ್ಲಿ ಸ್ದಳಿಯ ಸೇವಾಪ್ರತಿನಿಧಿ ವಿದ್ಯಾ ಉಪಸ್ದಿತರಿದ್ದರು.ಕಾಲೇಜಿನ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ದಿತರಿದ್ದರು.