ನವದೆಹಲಿ: ಸಾರ್ವಜನಿಕ ಹಣವನ್ನು ದೋಚಿ ಪರಾರಿಯಾಗಿದ್ದ ವಿಜಯ್ ಮಲ್ಯ ಶೇ.100ರಷ್ಟು ಸಾಲವನ್ನು ಮರು ಪಾವತಿ ಮಾಡುತ್ತೇನೆ ಎಂದು ಸರಣಿ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.

ಯುಪಿಎ ಅವಧಿಯ ಹೆಲಿಕಾಪ್ಟರ್ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ನನ್ನು ಸಿಬಿಐ ಭಾರತಕ್ಕೆ ಕರೆತರುತ್ತಿದ್ದಂತೆ, ಇತ್ತ ಸಾರ್ವಜನಿಕ ಬ್ಯಾಂಕ್ ಗಳಿಗೆ ವಂಚಿಸಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಈಗ ಎಚ್ಚೆತ್ತುಕೊಂಡಿದ್ದಾರೆ.

ಟ್ವೀಟ್ ನಲ್ಲಿ:

“ನಾನು ಸಾರ್ವಜನಿಕರ ಹಣವನ್ನು ದೋಚಿ ಪರಾರಿಯಾಗಿದ್ದೇನೆ ಎಂದು ರಾಜಕಾರಣಿಗಳು ಹಾಗೂ ಮಾಧ್ಯಮಗಳು ನನ್ನ ವಿರುದ್ಧ ಜೋರಾಗಿ ಮಾತನಾಡುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಕರಣವಿರುವಾಗಲೇ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ.
ಕಿಂಗ್ ಫಿಶರ್ ಅದ್ಭುತ ವಿಮಾನಯಾನ ಸಂಸ್ಥೆಯಾಗಿದೆ. ಆದರೆ ವಿಮಾನಕ್ಕೆ ಬಳಸುವ ಇಂಧನದ ಬೆಲೆಯು ಪ್ರತಿ ಬ್ಯಾರೆಲ್ ಗೆ 140 ಅಮೆರಿಕನ್ ಡಾಲರ್ ಹೆಚ್ಚಾಯಿತು. ಇದನ್ನು ಸಂಸ್ಥೆ ಎದುರಿಸುವಲ್ಲಿ ವಿಫಲವಾಯಿತು. ಇದರಿಂದಾಗಿ ಬ್ಯಾಂಕ್ ಹಣವೆಲ್ಲವೂ ಅಲ್ಲಿ ಹೋಗಿದೆ. ನಾನು ಶೇಕಡಾ 100ರಷ್ಟು ಹಣ ಮರು ಪಾವತಿ ಮಾಡಲು ಸಿದ್ಧವಾಗಿದ್ದೇನೆ ದಯವಿಟ್ಟು ಸ್ವೀಕರಿಸಿ.

RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು? ದಿನಾಂಕ 19/10/2018 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ.

ಕಳೆದ ಮೂರು ದಶಕಗಳಿಂದ ಕಿಂಗ್ ಫಿಶರ್ ಮದ್ಯದ ಕಂಪನಿ ಉತ್ತಮ ಪ್ರಗತಿಯಲ್ಲಿದೆ. ಆದರೆ ವಿಮಾನ ಯಾನದಿಂದ ನಷ್ಟಕ್ಕೆ ಒಳಗಾಗಬೇಕಾಯಿತು. ಅನೇಕ ರಾಜ್ಯಗಳ ಪ್ರಗತಿಗೆ ಹಣವನ್ನು ನೀಡಿರುವೆ. ಎಂದಿಗೂ ಬ್ಯಾಂಕ್ ಗೆ ಮೋಸ ಮಾಡುವುದಿಲ್ಲ ಎಲ್ಲ ಹಣವನ್ನು ಪಾವತಿ ಮಾಡುತ್ತೇನೆ.
ದೇಶ ತೊರೆದು ಬಂದಿರುವುದಕ್ಕೆ ನಾನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತೇನೆ. ನಾನು ಜನರ ಹಣವನ್ನು ಮರುಪಾವತಿ ಮಾಡಲು ಯತ್ನಿಸುತ್ತಿರುವೆ. ದಯವಿಟ್ಟು ಅದನ್ನು ಸ್ವೀಕರಿಸಿ” ಎಂದು ಟ್ವೀಟ್ ಮಾಡಿದ್ದಾರೆ.

RELATED ARTICLES  ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ,ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿ.

ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ಲಂಡನ್ ಗೆ ಪರಾರಿಯಾಗಿರುವ ಮದ್ಯದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಲಂಡನ್ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಡಿಸೆಂಬರ್ 10 ರಂದು ತೀರ್ಪು ಪ್ರಕಟವಾಗಲಿದೆ. ತೀರ್ಪು ಪ್ರಕಟವಾಗಲು 5 ದಿನ ಬಾಕಿ ಇರುವಾಗ ಮಲ್ಯ ತಾನು ಪಡೆದ ಎಲ್ಲ ಸಾಲವನ್ನು ಮರಳಿ ಪಾವತಿಸುತ್ತೇನೆ ಎಂದು ಅಚ್ಚರಿಯ ಎಂಬಂತೆ ಟ್ವೀಟ್ ಮಾಡಿದ್ದಾರೆ.