ಕುಮಟಾ : ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನವರು ಪ್ರತಿವರ್ಷವೂ ನೀಡುವ ಶಿಷ್ಯವೇತನ-ಹಾಗೂ ಸಜ್ಜನಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಯಮಿಗಳು ಸಾಹಿತಿಗಳು ಅದ ಶ್ರೀ ರಾಮು ಕಿಣಿ ಶಿರಸಿ ಉದ್ಘಾಟಿಸಿದರು. ಅವರು ಮಾತನಾಡಿ ಎಲ್ಲಾ ವಿದ್ಯಾರ್ಥಿ ಸಜ್ಜನಿಗಳಂತೆ ಬಾಳಿ ದೇಶದ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಒಯ್ಯ ಬೇಕಾದ ಜವಾಬ್ದಾರಿ ನಿಮ್ಮದು ಎಂದು ಮಾರ್ಮಿಕವಾಗಿ ನುಡಿದರು, ಭಿನ್ನ ಭಿನ್ನ ಹುದ್ದೆಗಳಿಗೆ ಸೇರಿ ಆದರ್ಶ ಶಿಸ್ತು ಪ್ರಾಮಾಣಿಕತೆ ಮೈಗೂಡಿಸಿಕೊಂಡು ದೇಶದ ಘನತೆ ಗೌರವ ಹೆಚ್ಚಿಸಿ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಠಲ ನಾಯಕ ಅವರು ಒಳ್ಳೆಯ ಆಚಾರ – ವಿಚಾರ ಗಳನ್ನು ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ಬಾಳಿ ಎಂದು ಶುಭ ಹಾರೈಸಿದರು.

RELATED ARTICLES  ಹೊಲನಗದ್ದೆಯಲ್ಲಿ ಕುಮಟಾ ತಾಲೂಕಾ ಮಟ್ಟದ ಯೋಗ ದಿನಾಚರಣೆ.

ಈ ಸಮಾರಂಭದಲ್ಲಿ ಕೊಂಕಣ ಸಂಸ್ಥೆಯವರು ಹಾಗೂ ದಾನಿಗಳಿಂದ ಅರ್ಹ ಬಡ ವಿದ್ಯಾರ್ಥಿಗಳಿಗೆ ಸುಮಾರು 9 ಲಕ್ಷ ರೂಪಾಯಿಗಳ ವಿದ್ಯಾರ್ಥಿವೇತನ ನೀಡಿ ಅವರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಇದಾಗಿತ್ತು ಅಲ್ಲದೇ ಭಾರತೀಯ ಸಂಸ್ಕ್ರತಿಯನ್ನು ಜೀವ ಸಹಿತವಾಗಿ ಇಡುವ ಮುಂದಿನ ದಿನದಲ್ಲಿ ಸಜ್ಜನಿಯಂತೆ ಬಾಳಬಹುದಾದ ಆಯ್ದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ದಿ. ಶೈಲ ಮಂಜುನಾಥ ಶ್ಯಾನಬಾಗ ಇವರ ಹೆಸರಲ್ಲಿ ಸ್ವಾತಿ ಬಾಳಗಿ ಸೇರಿದಂತೆ 12 ವಿದ್ಯಾರ್ಥಿನಿಯರನ್ನು ಸಜ್ಜನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ಮುರಳಿಧರ ಪ್ರಭು ಪ್ರಾಸ್ತಾವಿಕ ಮಾತುಗಳಾನ್ನಾಡಿದರು..

RELATED ARTICLES  ರೇಣುಕಾ ಹೆಗಡೆಯವರಿಗೆ ಬೀಳ್ಕೊಡುಗೆ.

ವೇದಿಕೆಯಲ್ಲಿ ಶ್ರೀ ಎಸ್.ಜಿ.ನಾಯಕ, ಟ್ರಸ್ಟಿಗಳಾದ ಶ್ರೀ ರಮೇಶ ಪ್ರಭು, ರಾಮನಾಥ ಕಿಣಿ, ಶ್ರೀ ಎಂ.ಎಂ, ಹೆಗಡೆ, ಬಾಡ, ಶ್ರೀ ಡಿ.ಡಿ.ಕಾಮತ್ ಸಲಹೆಗಾರರಾದ ಶ್ರೀಮತಿ ಲೀಲಾವತಿ ನಾಯಕ ಹಾಗೂ ಆರ್.ಎಚ್.ದೇಶಭಂಡಾರಿ, ಪ್ರಾಚಾರ್ಯ ಸುಲೋಚನಾ ರಾವ್ ಮುಖ್ಯಾಧ್ಯಾಪಕರಾದ ಶ್ರೀಮತಿ ಸುಮಾ ಪ್ರಭು, ಶ್ರೀಮತಿ ಸುಜಾತ ನಾಯ್ಕ, ಶ್ರೀಮತಿ ಸಾವಿತ್ರಿ ಹೆಗಡೆ ಉಪಸ್ಥಿತರಿದ್ದರು. ಶಿಕ್ಷಕಿ ಅನಿತಾ ಪಟಗಾರ, ಸುನೀತಾ ಅವರು ನಿರೂಪಿಸಿದರು. ಮುಖ್ಯಾಧ್ಯಾಪಕರಾದ ಶ್ರೀ ಸುಮಾ ಪ್ರಭು ಧನ್ಯವಾದ ಸಮರ್ಪಿಸಿದರೆ, ತೇಜಸ್ವಿನಿ ಸಂಗಡಿಗರು ಪ್ರಾರ್ಥಿಸಿದರು.