ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸ್ಥಾಪನೆಯಾಗಿ ಇಪ್ಪತ್ತೈದು ವರುಷಗಳು ಸಂದಿವೆ ಈ ಇಪ್ಪತ್ತೈದು ವರ್ಷಗಳ ಶಿಕ್ಷಣಯಾನದಲ್ಲಿ ಕೊಂಕಣ ಸಂಸ್ಥೆ ರಂಗದಾಸ ಶಾನಭಾಗ ಹೆಗಡೇಕರ ಬಾಲಮಂದಿರ ,ಸರಸ್ವತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆ,ಕೊಲಾಬಾ ವಿಠೋಬಾ ಶಾನಭಾಗ ಕಲಬಾಗಕರ ಪ್ರೌಢಶಾಲೆ ಎಸ್ ಎಂ ಶಾನಭಾಗ ಶಿಕ್ಷಕರ ತರಬೇತಿ ಕೇಂದ್ರ. ಬಿ ಕೆ ಭಂಡಾರಕರರ ಸರಸ್ವತಿ ಪದವಿಪೂರ್ವ ಕಾಲೇಜು. ಸರಸ್ವತಿ ಮಾಳಪ್ಪ ಕಾಮತ ಕೃಷಿ ಮತ್ತು ಕೌಶಲ್ಯಾಭಿವೃದ್ಧಿ ಸಂಸ್ಥೆ, ಜಾನಕಿ ಪ್ರಭು ಪ್ರತಿಭಾ ಚೈತನ್ಯ ಕೇಂದ್ರ ಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳು ಪಠ್ಯ ಶಿಕ್ಷಣದೊಂದಿಗೆ ಪಠ್ಯೇತರ ಶಿಕ್ಷಣವನ್ನು ಸಮರ್ಪಕವಾಗಿ ಪಡೆಯುವಂತೆ ಮಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಸಂಸ್ಥೆಯಲ್ಲಿ 1600ಕ್ಕೂ ಅಧಿಕ ವಿಧ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದು ಸಂಸ್ಕಾರಯುತ ಶಿಕ್ಷಣ ಸಂಸ್ಥೆಯ ಹೆಗ್ಗುರುತಾಗಿದೆ.

ಸಂಸ್ಥೆಯ ಬೆಳ್ಳಿಹಬ್ಬದ ಮುಖ್ಯ ಕಾರ್ಯಕ್ರಮವು ಡಿಸೆಂಬರ್ 22 ರಿಂದ 25 ರ ತನಕ ನಾಲ್ಕುದಿನಗಳ ಪರ್ಯಂತ ನೆರವೇರಲಿದ್ದು ಇದನ್ನು ಕೇವಲ ನಮ್ಮ ಸಂಸ್ಥೆಯ ಸಾಧನೆಯ ಪ್ರದರ್ಶನವಾಗದೆ ಉತ್ತರ ಕನ್ನಡ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆಯಾಗಬೇಕೆಂಬ ಬಯಕೆಯಿಂದ ವೈವಿದ್ಯಮಯ ಕಾರ್ಯಕ್ರಮಗಳನ್ನು ಸಂಸ್ಥೆ ಸಂಯೋಜಿಸಿದೆ. ಇದರಲ್ಲಿ ಒಂದು “ಕೊಂಕಣ ಭೂಷಣ” ವಿದ್ಯಾರ್ಥಿ ಪ್ರಶಸ್ತಿ.

RELATED ARTICLES  ಈ ನಾಲ್ಕು ತಾಲೂಕುಗಳಿಗೆ ನಾಳೆಯೂ ರಜೆ

ಭವಿಷ್ಯದ ಪ್ರಜೆಗಳಾದ ಇಂದಿನ ವಿದ್ಯಾರ್ಥಿಗಳಲ್ಲಿ ಇರುವ ಅದಮ್ಯ ಚೈತನ್ಯವನ್ನು ಗುರುತಿಸಿ ಗೌರವಿಸಿ ಅವರನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದ್ದು ಈ ದಿಸೆಯಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ಹಂತದಿಂದ ಪಿಯುಸಿ ವರೆಗಿನ ವಯೋಮಾನದ ಬಾಲಕ ಬಾಲಕಿಯರು ಸಮಾಜ ಮುಖಿವ್ಯಕ್ತಿತ್ವವನ್ನು ಹೊಂದಿದ್ದು.ವಿದ್ಯೆ,ಲಲಿತಕಲೆ ಸಾಂಸ್ಕೃತಿಕ ಚಟುವಟಿಕೆ,ವೈಜ್ಞಾನಿಕ ಸಂಶೋಧನೆ/ಆವಿಷ್ಕಾರ,ಕ್ರೀಡಾಕ್ಷೇತ್ರ ಹಾಗೂ ಧೈರ್ಯ ಸಾಹಸ. ಮತ್ತಿತರ ಕ್ಷೇತ್ರಗಳಲ್ಲಿ ಉದಯೋನ್ಮುಖರಾಗಿ ಹೊರಹೊಮ್ಮುತ್ತಿರುವ ಹತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಆಯ್ಕೆಮಾಡಿ ಅವರಿಗೆ ನಮ್ಮ ರಜತಮಹೋತ್ಸವ ಕಾರ್ಯಕ್ರಮದ ಬ್ರಹತ್ ವೇದಿಕೆಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಲು ಸಂಸ್ಥೆ ತೀರ್ಮಾನಿಸಿದೆ.

RELATED ARTICLES  ಉಪನ್ಯಾಸ ಹಾಗೂ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ.

ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ದಿವಂಗತ ಶ್ರೀ ಕಾಶೀನಾಥ ನಾಯಕ ರವರು ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಮಾನ ಆಸಕ್ತಿ ಹೊಂದಿರಬೇಕೆಂದು ಪ್ರತಿಪಾದಿಸಿದವರಾಗಿದ್ದು ಅವರ ಸ್ಮರಣಾರ್ಥ ಈ ಪುರಸ್ಕಾರಕಾರ್ಯಕ್ರಮವನ್ನು ಆಯೋಜಿಸಿದೆ. ಈ ಪುರಸ್ಕಾರವು ಪ್ರಶಸ್ತಿ ಫಲಕದೊಂದಿಗೆ ನಗದು ರೂ 2500 ಹೊಂದಿರುತ್ತದೆ.

ಕಾರಣ ರಾಜ್ಯ ಅಥವಾ ರಾಷ್ಟ್ರಮಟ್ಟದ ಸಾಧನೆ ಮಾಡಿರುವ ಶಾಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪಿಯುಸಿ ವಯೋಮಾನದೊಳಗಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದಾಗಿದೆ ಆಥವಾ ಯಾವುದೇ ಸಂಸ್ಥೆಯವರು ವಿದ್ಯಾರ್ಥಿ/ವಿದ್ಯಾರ್ಥಿನಿಯ ಹೆಸರು ಹಾಗೂ ಅವರು ಹೊಂದಿರುವ ವಿಶೇಷ ಅರ್ಹತೆಗಳ ಮಾಹಿತಿಯನ್ನು ಡಿಸೆಂಬರ್ 15ರ ಒಳಗಾಗಿ ಸಂಸ್ಥೆಯ ವಿಳಾಸಕ್ಕೆ ಶಿಫಾರಸ್ಸು ಮಾಡುವಂತೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ವಿಠಲ್ ಆರ್ ನಾಯಕ ಹಾಗೂ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.