ಕಾರವಾರ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ 2019 ಜ.4,5 ಮತ್ತು 6 ರಂದು ನಡೆಯಲಿರುವ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳ ಹೆಸರನ್ನು ನೋಂದಾಯಿಸಿಕೊಳ್ಳಲು ರೂ.250 ನಿಗದಿಮಾಡಲಾಗಿದೆ. ಪ್ರತಿನಿಧಿಯಾಗಬಯಸುವವರು ಹೆಸರು ನೋಂದಣ ಮಾಡಿಸಲು 2018 ಡಿ. 15 ಕೊನೆಯ ದಿನವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

RELATED ARTICLES  ರೋಗ ನಿರೋಧಕ ಶಕ್ತಿಗೆ ಪರಂಗಿಹಣ್ಣು

ಆಸಕ್ತರು ಹೆಸರು ನೋಂದಾಯಿಸಿ ರಸೀದಿ ಪಡೆಯಲು ಅಥವಾ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅರವಿಂದ ಕರ್ಕಿಕೋಡಿ, ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜೆ.ಎಂ.ಎಫ್.ಸಿ ಕೋರ್ಟ್ ರಸ್ತೆ, ಕೋರ್ಟ್ ಪಕ್ಕ ಕುಮಟಾ, ಮೊಬೈಲ್ ಸಂಖ್ಯೆ : 9448438472 ಸಂಪರ್ಕಿಸಲು ಕೋರಲಾಗಿದೆ.

RELATED ARTICLES  ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಅಡಿಯಲ್ಲಿ ಶಿರಸಿಯಲ್ಲಿ ನಡೆಯುತ್ತಿದೆ ವಿವಿಧ ಕೋರ್ಸಗಳು.