ದಾಂಡೇಲಿ: ಕರ್ನಾಟಕ ವಿದ್ಯುತ್ ನಿಗಮದ ನಲವತ್ತೆಂಟನೇ ಸಂಸ್ಥಾಪನಾ ದಿನಾಚರಣಾ ಕಾರ್ಯಕ್ರಮವು ಅಂಬಿಕಾನಗರದ ಅಂಬೇಡ್ಕರ ಸಭಾಭವನದಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾನಗರ ಕರ್ನಾಟಕ ವಿದ್ಯುತ್ ನಿಗಮದ ಮುಖ್ಯ ಅಭಿಯಂತರಾದ ಕೆ.ವಿ. ವೆಂಕಟಾಚಲಾಪತಿಯವರು ಕರ್ನಾಟಕ ವಿದ್ಯುತ್ ನಿಗಮ ಈ ದೇಶದ ಆಸ್ತಿಯಾಗಿದೆ. ವಿದ್ಯುತ್ ಪೂರೈಕೆಯಲ್ಲಿ ಈ ದೇಶಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ಕರ್ನಾಟಕ ವಿದ್ಯುತ್ ನಿಗಮ ಹತ್ತಾರು ಯೋಜನೆಗಳ ಮೂಲಕ ಗಮನ ಸೆಳೆದಿದೆ. ಕತ್ತಲೆಯ ಸಮಾಜಕ್ಕೆ ಬೆಳಕು ನೀಡುವ ಕಾರ್ಯ ನಿಗಮದ್ದಾಗಿದ್ದು ನಿಗಮದಲ್ಲಿ ಕಾರ್ಯ ನಿರ್ವಹಿಸುವುದೇ ಒಂದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ನಿಗಮದ ಪ್ರಗತಿಯಲ್ಲಿ ದುಡಿದ ಮಹನೀಯರನ್ನು ಸ್ಮರಿಸಿದರು.

RELATED ARTICLES  ಭಟ್ಕಳ ಶಾಸಕ ಮಂಕಾಳ ವೈದ್ಯರಿಗೆ ಓಪನ್ ಚಾಲೆಂಜ್ ನೀಡಿದ ಇನಾಯತುಲ್ಲಾ ಶಾಬಾಂದ್ರಿ!

ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಮುಖ್ಯ ಅಂಬಿಯಂತರರಾದ ಎಂ.ವಿ. ಅಪ್ಪಿನಬಾವಿಯವರು ನಿಗಮದಲ್ಲಿ ತಾವು ನಿರ್ವಹಿಸಿದ ಕಾರ್ಯಗಳ ಬಗ್ಗೆ ತಿಳಿಸಿ ಕನಾಟಕ ವಿದ್ಯುತ್ ನಿಗಮ ನಡೆದು ಬಂದ ದಾರಿ ಮತ್ತು ಸಾದನೆ ನಿಜಕ್ಕೂ ಹುಬ್ಬೇರಿಸುವಂತದ್ದಾಗಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಹಿರಿಯ ಸಾಹಾಯಕ ಜಿ.ಎಸ್. ಚಂದ್ರಪ್ಪರವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕವಿನಿ ಅಧಿಕ್ಷಕ ಅಭಿಯಂತರರಾದ ಟಿ.ಪಿ. ಓಂಪ್ರಕಾಶ, ಎಂ.ಎಸ್. ಕೂಡ್ಲಣ್ಣವರ, ವೈದ್ಯಕೀಯ ಅಧೀಕ್ಷಕಿ ವಿ.ಟಿ . ಭಾನು ಮುಂತಾದವರಿದ್ದರು.

RELATED ARTICLES  ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಸಿಲಿಂಡರ್ ವಶಕ್ಕೆ

25 ವರ್ಷಗಳ ಕಾಲ ನಿಗಮದಲ್ಲಿ ಸೇವೆ ಸಲ್ಲಿಸಿದ ಉದ್ಯೋಗಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥಾಪನಾ ದಿನಾಚರಣೆಯ ಭಾಗವಾಗಿ, ನಿಗಮದ ಉದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿವಿದ ಸ್ಪರ್ದಾ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಿಸಿದರು.

ಮಾನವ ಸಂಪನ್ಮೂಲ ವಿಭಾಗದ ನಾಗವೇಣಮ್ಮ ಸ್ವಾಗತಿಸಿದರು. ಶ್ರೀಪಾದ ಹೆಗಡೆ, ಆರ್.ಆರ್.ಭಟ್ಟ ಅತಿಥಿಗಳನ್ನು ಪರಿಚಯಿಸಿದರು. ಕೊನೆಯಲ್ಲಿ ಮನರಂಜನಾ ಕಾರ್ಯಕ್ರಮ ನಡೆಯಿತು.

26ದಾಂಡೇಲಿ5- ಕೆ.ಪಿ.ಸಿ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಕರ್ನಾಟಕ ವಿದ್ಯುತ್ ನಿಗಮದ ಮುಖ್ಯ ಅಭಿಯಂತರಾದ ಕೆ.ವಿ. ವೆಂಕಟಾಚಲಾಪತಿಯವರು ಮಾತನಾಡುತ್ತಿರುವುದು.