ಹೊನ್ನಾವರ: ಸಾಮಾಜಿಕ ಪರಿಶೋಧನೆಯಿಂದ ನರೇಗಾ ಯೋಜನೆಯಲ್ಲಿ ಸ್ಪಷ್ಟತೆ ಕಾಣುವಂತಾಗಿದ್ದು, ಇದರಿಂದ ಪಾರದರ್ಶಕತೆ ಕಾಣಲು ಸಾಧ್ಯವಾದಂತಾಗಿದೆ ಎಂದು ತಾಲೂಕಾ ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ನುಡಿದರು. ಅವರು ಹೊನ್ನಾವರ ತಾಲೂಕಿನ ಮೇಲಿನ ಇಡಗುಂಜಿ ಪಂಚಾಯತಿಯಲ್ಲಿ ಇಂದು ನಡೆದ 2018-19ನೇ ಸಾಲಿನ ಎರಡನೇ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪಂಚಾಯತ ರಾಜ್ ವಿಭಾಗದಲ್ಲಿ ಸಾಕಷ್ಟು ಯೋಜನೆಗಳು ಬಂದಿದ್ದರೂ ಸಹ ಉದ್ಯೋಗ ಖಾತ್ರಿ ಯೋಜನೆಯಷ್ಟು ವ್ಯಾಪಕವಾದ ಮತ್ತು ಜನಾನುರಾಗಿಯಾದ ಜನಪ್ರೀಯವಾದ ಯಾವ ಯೋಜನೆಗಳು ಬಂದಿರಲಿಲ್ಲ ಇದು ಗ್ರಾಮೀಣ ಜನರ ಬದುಕಿನಲ್ಲಿ ಹೊಸ ಆಶಾ ಕಿರಣ ಮೂಡಿಸದ ಯೋಜನೆಯಾಗಿದೆ ಎಂದರು. ಒಂದೆರಡು ಜನಗಳಿಗೆ ತಾಂತ್ರಿಕ ಕಾರಣಗಳಿಂದ ಕೂಲಿ ವಿಳಂಭವಾದ ಮಾತ್ರಕ್ಕೆ ಯೋಜನೆಯನ್ನೇ ದೂಷಿಸುವುದು ಅರ್ಥಹೀನ ಗ್ರಾಮೀಣ ಜನರೇ ಹೇಳುವಂತೆ ಕೆಲಸವಿಲ್ಲದೇ ಕಂಗಾಲಾದ ಬಡಜನರ ಪಾಲಿಗೆ ಖಾತ್ರಿ ಯೋಜನೆ ಹೊಸ ಚೈತನ್ಯ ಮೂಡಿಸಿದೆ ಎಂದರು. ಇಲ್ಲಿನ ಮೊಳಕೋಡ ಗ್ರಾಮಕ್ಕೆ ಬೇಟಿ ನೀಡಿದ್ದು ಇಲ್ಲಿನ ಜನರು ಒಂದಾಗಿ ಖಾತ್ರಿ ಯೋಜನೆಯಲ್ಲಿ ಕೈ ಜೋಡಿಸಿದರೆ ದೊಡ್ಡ ಪ್ರಮಾಣದಲ್ಲಿ ಹೊಳೆಗೆ ಸೈಡ್ ಪಿಚಿಂಗ್ ನಿರ್ಮಿಸಿಕೊಂಡು ಈ ಪ್ರದೇಶದ ಜಮೀನಿನ ರಕ್ಷಣೆ ಮಾಡಿಕೊಳ್ಳಬಹುದು ಎಮಬ ಸಲಹೆ ನೀಡಿದರು. ಇದಕ್ಕೆ ಗ್ರಾಮ ಸಭಾ ಸದಸ್ಯರ ಸಹಮತ ವ್ಯಕ್ತವಾಯಿತು. ನಂತರ ಸಾಮಾಝಿಕ ಪರಿಶೋಧನಾ ವರದಿಯನ್ನು ಮಂಡಿಸಿ ಸಭೆಯ ತೀರ್ಮಾನಕ್ಕೆ ಬಿಡಲಾಯಿತು.

RELATED ARTICLES  ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಯೋಜನೆಯ ನಿಯಮದಂತೆ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವಪ್ಪ ಮಾತನಾಡಿ ತಮ್ಮ ಇಲಾಖೆಯಲ್ಲಿ ಸೌಲಭ್ಯಗಳ ಬಗ್ಗೆ ತಿಳಿಸಿ ಕೊಟ್ಟಿಗೆ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು.

RELATED ARTICLES  ಎಂ.ವಿ.ಶಾನಭಾಗ ಬುರ್ಡೇಕರ: ಕೆ.ಇ.ಸೊಸೈಟಿ ಶ್ರದ್ಧಾಂಜಲಿ

ಈ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಿಗೆ ಯೋಜನೆಯ ಬಗೆಗಿನ ಅನೇಕ ಗೊಂದಲಗಳ ಬಗ್ಗೆ ಪ್ರಶ್ನಿಸಲು ಅವಕಾಶ ಕಲ್ಪಿಸಲಾಯಿತು.
ಪಂಚಾಯತ ಅಭಿವೃದ್ಧಿ ಅಧಿಕಾರಿ ಸೋಮ ಮೇಸ್ತರವರು ಎಲ್ಲರನ್ನೂ ಸ್ವಾಗತಿಸಿ ಹಿಂದಿನ ಸಭೆಯ ನಡಾವಳಿ ಓದಿ, ಅನುಪಾಲನ ವರದಿಯನ್ನು ಮಂಡಿಸಿದರು.
ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷೆ ಬೇಬಿ ನಾಯ್ಕ, ಉಪಾಧ್ಯಕ್ಷ ಗಣಪತಿ ಹರಿಯಪ್ಪ ನಾಯ್ಕ ಮತ್ತು ತಾಂತ್ರಿ ಸಹಾಯಕ ಮನೋಜಕುಮಾರ ಉಪಸ್ಥಿತರಿದ್ದರು.