ತುಮಕೂರು: ಶ್ರೀ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಆಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಂದು ಶ್ರೀಗಳನ್ನು ಚೆನ್ನೈಗೆ ಶಿಫ್ಟ್ ಮಾಡಲಾಗಿದೆ.
ಹೀಗಾಗಿ ಶ್ರೀಗಳನ್ನು ತುಮಕೂರಿನ ಸಿದ್ದಗಂಗಾ ಮಠದಿಂದ ರಸ್ತೆಮಾರ್ಗವಾಗಿ ಬೆಂಗಳೂರಿನ ಹೆಚ್ಎ ಎಲ್ ವಿಮಾನ ನಿಲ್ದಾಣಕ್ಕೆ ಕರೆ ತಂದು, ಬೆಂಗಳೂರಿನಿಂದ ಏರ್ ಅಂಬುಲೆನ್ಸ್ ಮೂಲಕ ಚೆನ್ನೈಗೆ ಕರೆದೊಯ್ಯಲಾಗುತ್ತಿದೆ. ವಿಶೇಷ ಏರ್ ಅಂಬುಲೆನ್ಸ್ ಮೂಲಕ ಚೆನ್ನೈನಲ್ಲಿರುವ ಪ್ರತಿಷ್ಠಿತ ರೆಲಾ ವೈದ್ಯಕೀಯ ಸಂಸ್ಥೆಗೆ ಕರೆದೊಯ್ಯಲಾಗುತ್ತದೆ ಎಂದು ತಿಳಿದುಬಂದಿದೆ.

RELATED ARTICLES  ಅಧಿವೇಶನ ಬಿಟ್ಟು ಎಲ್ ಬಿ ಕಾಲೇಜಿಗೆ ಬಂದಿದ್ಯಾಕೆ ಹರತಾಳು ಹಾಲಪ್ಪ...?

ಸ್ವಾಮೀಜಿಗಳಿಗೆ ಈಗಾಗ್ಲೇ 5 ಸ್ಟಂಟ್ ಅಳವಡಿಸಲಾಗಿದ್ದು, ಮತ್ತೆ ಸ್ಟಂಟ್ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಚೆನ್ನೈನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಶ್ರೀಗಳಿಗೆ ಭಾರತದ ಖ್ಯಾತ ಲಿವರ್ ಸ್ಪೆಷಲಿಸ್ಟ್ ಡಾ. ಮೊಹಮ್ಮದ್ ರೇಲಾ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಸತ್ಕಾರ್ಯಗಳೇ ಸುಖನಿದ್ದೆಯ ಗುಟ್ಟು: ರಾಘವೇಶ್ವರ ಸ್ವಾಮೀಜಿ