ಕುಮಟಾ : ನೆಲ್ಲಿಕೇರಿ ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು, ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ, ಹೊನ್ನಾವರ ವಲಯ ಅರಣ್ಯ ಇಲಾಖೆ ಮತ್ತು ಕುಮಟಾ ಉಪ ವಲಯ ಅರಣ್ಯ ಇಲಾಖಾ ವತಿಯಿಂದ ಎರ್ಪಡಿಸಿದ ಗೇರುಸೊಪ್ಪಾ ಸಿಂಗಳಿಕಾ ಪ್ರಕೃತಿ ಶಿಬಿರಕ್ಕೆ ತೆರಳಿದ್ದರು.
ಮುಂಜಾನೆ ಚಿತ್ತಗಿ ಟ್ರೀ ಪಾರ್ಕನಲ್ಲಿ ಕುಮಟಾ ವಲಯ ಅರಣ್ಯಾಧಿಕಾರಿಗಳಾದ ಶ್ರೀ ವರದ ರಘುನಾಥ ಅವರು ಹಸಿರು ಬಾವುಟವನ್ನು ತೋರಿಸುವುದರ ಮೂಲಕ ಚಾಲನೆ ನೀಡಿ, ಮಾಸೂರು ಸಮೀಪ ಮ್ಯಾಂಗ್ರೋ ಕಾಡನ್ನು ಪರಿಚಸಿ, ಉಪ್ಪು ನೀರು ಹಾಗೂ ಸಿಹಿ ನೀರಿನ ಪ್ರದೇಶದಲ್ಲಿ ಸಮುದ್ರದ ಉಬ್ಬರ – ಇಳಿತವಾದ ಬೆಳೆಯುವ ಕ್ಯಾಂಡಿಲಿಯಾ, ಸೊನರೇಶಿಯಾ ಮುಂತಾದ ಸಸ್ಯ ಪ್ರಭೇದಗಳನ್ನು ಪರಿಚಯಿಸಿ, ಯಾರೂ ಉಳುಮೆ ಮಾಡದಿದ್ದರೂ ನೈಸರ್ಗಿಕವಾಗಿ ಕೆಸರಿನಲ್ಲಿ ಸಿಕ್ಕಿ ಬೆಳೆಯುತ್ತವೆ. ಇಂತಹ ಕಾಂಡ್ಲ ಸಸ್ಯಗಳಿರುವಲ್ಲಿ ಮೀನು, ಏಡಿ ಮುಂತಾದ ಜಲಚರಗಳಿಗೆ ಅನುಕೂಲವಾದ ಪ್ರದೇಶವಾಗಿದ್ದು, ಸುನಾಮಿ ಮುಂತಾದ ಪ್ರಕೃತಿ ವಿಕೋಪಗಳನ್ನು ತಡೆಯುವುದಲ್ಲದೇ ಅನೇಕ ಪಕ್ಷಿಗಳಿಗೂ ಆಶ್ರಯ ತಾಣವಾಗಿವೆ ಎಂದರು.
ನಂತರ ಹೊನ್ನಾವರ ಇಕೋಬೀಚ್, ಅಪ್ಪರಕೊಂಡ ಅರಣ್ಯ ಇಲಾಖೆಯ ಹೊನ್ನಾವರದ ಸಸ್ಯಪಾಲನಾ ಕ್ಷೇತ್ರದಲ್ಲಿ ವಿವಿಧ ಜಾತಿಯ ಕಾಡು ಸಸ್ಯಗಳನ್ನು ಬೆಳೆಸುವ ವಿಧಾನವನ್ನು ವಿವರಿಸಿದರು.
ಮಧ್ಯಾಹ್ನ ಗೇರುಸೊಪ್ಪಾ ಸಿಂಗಳಿಕಾ ಪಾರ್ಕಿನಲ್ಲಿ ನಡೆದ ಪ್ರಕೃತಿ ಶಿಬಿರದಲ್ಲಿ ದಾವಣಗೆರೆ ಕಾರ್ಡಿಯಾ ಸಂಸ್ಥೆಯ ಡಾ. ಜಿ.ಟಿ. ಸುದರ್ಶನ ಅವರು ಸಂಪನ್ಮೂಲ ವೃಕ್ತಿಗಳಾಗಿ ಆಗಮಿಸಿ ಶಿಬಿರಾರ್ಥಿಗಳೀಗೆ ಜೀವವೈವಿದ್ಯತೆ ಮತ್ತು ಹವಾಮಾನ ಬದಲಾವಣೆ ವಿಷಯದ ಕುರಿತು ವಿದ್ಯುನ್‍ಮಾನ ಸಾಧನೆಗಳ ಮೂಲಕ ಉಪನ್ಯಾಸಗೈಯುತ್ತಾ, ಅರಣ್ಯವು ಜನಸಾಮಾನ್ಯರಿಗೆ ಜೀವನ ಸೌಲಭ್ಯ ಅಕ್ಷಯ ಪಾತ್ರೆಯಾಗಿದೆ, ಕಲಾವಿದರಿಗೆ ಪ್ರಕೃತಿಯ ಆರಾಧನಾ ತಾಣ, ವಿಜ್ಞಾನಿಗಳಿಗೆ ಅಸಂಖ್ಯಾತ ಜೀವಸಂಕುಲಗಳ ಅಧ್ಯಯನ ಕೇಂದ್ರ, ಅದ್ಯಾತ್ಮಕ ಸಾಧಕರಿಗೆ ಭಗವಂತನ ಲಿಲಾವೈಚಿತ್ಯವಾಗಿದ್ದು ಸರ್ವರ ದೃಷ್ಠಿಯಿಂದ ಅರಣ್ಯವು ಜೀವವೈವಿದ್ಯತೆಯ ಸಂರಕ್ಷಣಾ ತಾಣವಾಗಿದೆ ರಂಬುದನ್ನು ವಿವರಿಸಿದರು. ಮಾನವನಿಗೆ ಮಾತ್ರವಲ್ಲದೇ ಸಕಲ ಜೀವ ಸಂಕುಲಗಳಿಗೆ ಅರಣ್ಯ ಹೇಗೆ ಉಪಕಾರಿಯಾಗಿದೆ ಎಂಬುದನ್ನು ವಿವರಿಸಿ, ಪ್ರಕೃತಿಯಲ್ಲಿ ಹೆಚ್ಚೆಚ್ಚು ಗಿಡ-ಮರಗಳನ್ನು ಬೆಳೆಸಿಎಂದರು.
ಕಾರ್ಯಕ್ರಮದಲ್ಲಿ ಹೊನ್ನಾವರವಲಯ ಅರಣ್ಯ ಸಂರಕ್ಷಣಾಧಿಕಾರಿ ಶ್ರಿ ಪ್ರವೀಣ ಬಸ್ರೂರು ಅವರು ಅಧ್ಯಕ್ಷತೆವಹಿಸಿ ಮನುಷ್ಯನ ಕೊಳ್ಳುಬಾಕುತನವೇ ಅರಣ್ಯ ನಾಶಕ್ಕೆ ಕಾರಣವಾಗಿದೆ ಎಂಬುದನ್ನು ಚಟುವಟಿಕೆ ಮೂಲಕ ತಿಳಿಹೇಳಿದರು. ಯಾವುದೇ ಜೀವಿಯ ಮೇಲೆ ಹಾನಿಯುಂಟಾದರೆ ಅದು ಎಲ್ಲರ ಮೇಲೆ ಹೇಗೆ ಪರಿಣಾಮ ಬಿರುತ್ತದೆ ಎಂಬುದನ್ನು ಸಹ ಚಟುವಟಿಕೆ ಆಧಾರದ ಮೇಲೆ ವಿವರಿಸಿದರು.
ಮರುದಿನ ಮುಂಜಾನೆ ಗೇರುಸೂಪ್ಪಾ ಪಾರೆಷ್ಟವಾಚರ (ಅರಣ್ಯಕಾವಲುಗಾರ) ಶ್ರೀ ನರೇಶ ವಿ. ನಾಯ್ಕ. ಅವರ ಮಾರ್ಗದರ್ಶನದಲ್ಲಿ ಸಿಂಗಳಿಕಾ ವನಪ್ರದೇಶದಲ್ಲಿರುವ ಪಕ್ಷಿಪ್ರಭೇದಗಳನ್ನು ಹಾಗೂ ವೃಕ್ಷ ಪ್ರಬೇಧಗಳನ್ನು ಸ್ವತಃ ಶಬಿರಾರ್ಥಿಗಳನ್ನು ವನಪ್ರದೇಶಕ್ಕೆ ಕರೆದುಯ್ದು ಪರಿಚಯಿಸಿದರು, ಈ ಪ್ರದೇಶದಲ್ಲಿರುವ ಪ್ರಾಣ ಪ್ರಭೇದಗಳನ್ನು ಶಿಬಿರಾರ್ಥಿಗಳು ಕೇಳಿ ತಿಳಿದು ಕೊಳ್ಳುತ್ತಾ ಗೇರುಸೊಪ್ಪಾ ಪ್ರಸಿದ್ಧ ಚತುಮುಖ ಬನದಿಗೆ ಬೇಟಿಯಿತ್ತರು, ಮಧ್ಯಾಹ್ನದವರಿಗೆ ನಡೆದ ಚಾರಣ ಶಿಬಿರಾರ್ಥಿಗಳಿಗೆ ಪ್ರಕೃತಿಯ ಜ್ಞಾನದ ಜೊತೆಗೆ ಮುದನೀಡಿತು.
ಮಧ್ಯಾಹ್ನ ನಡೆದ ಪ್ರಕೃತಿ ಶಿಬಿರದ ಸಮಾರೊಪ ಸಮಾರಂಭದಲ್ಲಿ ಶಿಬಿರಾರ್ಥಿಗಳಾದ ಕು. ಜಯರಾಮ ನಾಯ್ಕ, ದಿವ್ಯಾ ಡಿ. ನಾಯಕ, ಜಗದೀಶ ಪಟಗಾರ, ದಿವ್ಯಾ ಆಚಾರಿ ಮುಂತಾದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕುಮಟಾ ಸಹಾಯಕ ಅರಣ್ಯಾಧಿಕಾರಿಗಳಾದ ಶ್ರೀ ವರದ ರಂಗನಾಥ ಅತಿಥಿಗಳಾಗಿ ಪಾಲ್ಗೊಂಡು ಶಿಬಿರದಲ್ಲಿ ಪಡೆದುಕೊಂಡು ಅನುಭವವನ್ನು ಜೀವನದಲ್ಲಿ ಅಳವಡಿಸಿಕೊಂಡು ಅರಣ್ಯ ಸಂರಕ್ಷಕ ಯೋಧರಾಗಿ, ಅರಣ್ಯರಾಯಭಾರಿಗಳಾಗಿ ಎಂದರೂ. ಕಾಲೇಜಿನ ಹಿರಿಯ ಇತಿಹಾಸ ಉಪನ್ಯಾಸ ಶ್ರೀ ವಿವೇಕಾನಂದ ಕೆ. ನಾಯಕ. ಮಾತನಾಡಿ ನಾವು ಸ್ವತಃ ಅರಣ್ಯಕ್ಕೆ ಬಂದು ಕಾಡಿನ ವೈವಿದ್ಯತೆಯ ಪ್ರಾಯೋಗಿಕ ಜ್ಞಾನ ಪಡೆದುಕೊಂಡಿದ್ದೇವೆ ಎಂದರು. ಅಧ್ಯಕ್ಷತೆಯನ್ನು ಹೊನ್ನಾವರದ ವಲಯ ಅರಣ್ಯಾಧಿಕಾರಿ ಶ್ರೀ ನಂದೀಶ್ ವಹಿಸಿ ಈ ಭೂಮಿಗೆ ಪ್ರತಿ ವರ್ಷ 300ಮೀಲಿಯನ್ ಪ್ಲಾಸ್ಟಿಕ್ ತ್ಯಾಜ್ಯ ಸೇರುತ್ತಿದ್ದು ಇದೇ ರೀತಿ ಮುಂದುವರಿದರೆ ಭೂಮಿ ಅಪಾಯದ ಅಂಚಿಗೆ ತೆರಳುವುದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕರಾದ ಶ್ರೀಮತಿ ಸಂಯುಕ್ತಾ ನಾಯಕ, ಕನ್ನಡ ಭಾಷಾ ಉಪನ್ಯಾಸಕರಾದ ಶ್ರೀಮತಿ ಲತಾ ನಾಯ್ಕ, ಗಣ ತಶಾಸ್ತ್ರ ಉಪನ್ಯಾಸಕರಾದ ಕು. ಪುನೀತಾ ಕೆ. ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀ ನಾಗೇಶ ಹರಿಕಂತ್ರ, ಉಪನ್ಯಾಸಕ ಶ್ರೀ ದತ್ತಾತ್ರೇಯ ನಾಯ್ಕ ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಅರಣ್ಯಾಧಿಕಾರಿ ಶ್ರೀ ಅಜಯ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಕಾಲೇಜಿನ ಸಂಸ್ಕøತ ಉಪನ್ಯಾಸಕ ಹಾಗೂ ಎನ್. ಎಸ್.ಎಸ್. ಯೋಜನಾಧಿಕಾರಿ ಶ್ರೀ ಗಣೇಶ ಭಟ್ಟ ಸರ್ವರನ್ನು ವಂದಿಸಿ ಶಿಬಿರಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.