ಕುಮಟಾ : ತಾಲೂಕಿನ ಕೂಜಳ್ಳಿ ಪಂ. ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ತಾಲೂಕಿನ ಕೂಜಳ್ಳಿ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಡಿ.9ರಂದು ಪುಣ್ಯಸ್ಮರಣೆ-2018 ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರದಮದ ಅಂಗವಾಗಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ವಿವಿಧ ಕಲಾವಿದರಿಂದ ಸ್ವರ ನಮನ ಹಾಗೂ ಮುಂಬಯಿಯ ಪಂ. ದೀನಕರ ಪಣಶಿಕರ್ ಅವರಿಗೆ ಷಡಕ್ಷರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಉದ್ಘಾಟನೆ ಹಾಗೂ ಸಭೆ : ಬೆಳಿಗ್ಗೆ 9ರಿಂದ ರಾತ್ರಿ 10ರ ವರೆಗೂ ಸಂತ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ವಿದ್ವಾನ ವಿಶ್ವೇಶ್ವರ ಭಟ್ ಕೂಜಳ್ಳಿ ಹಾಗೂ ಸ್ವರ ಸಂಗಮದ ಅಧ್ಯಕ್ಷ ಸುಬ್ರಾಯ ಭಟ್ ಕಾರ್ಯಕ್ರಮಕ್ಕೆ ಚಾಲನೆನೀಡಲಿದ್ದಾರೆ. ಸಂಜೆ 5ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಪಂ. ಷಡಕ್ಷರಿ ಗವಾಯಿ ಅಕಾಡೆಮಿ ಅಧ್ಯಕ್ಷ ವಸಂತರಾವ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಲ್ಲೂರು ದೇವಸ್ಥಾನದ ಪ್ರಧಾನ ಆರ್ಚಕ ಗೋವಿಂದ ಅಡಿಗಳು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಅಶೋಕ ಹುಗ್ಗಣ್ಣವರ್, ಬೆಂಗಳೂರು ಬಿಎನ್‍ಬಿ ನಿರ್ದೇಶಕ ಆನಂದ ವಿ.ಭಟ್ಟ, ಅಲ್ಟ್ರಾಟೆಕ್ ಸಿಮೆಂಟಿನ ಮಾರ್ಕೆಟಿಂಗ್ ಹಗೂ ಆಪರೇಶನ್ ಮುಖ್ಯಸ್ಥ ಸುಬ್ರಹ್ಮಣ್ಯ ಹೆಗಡೆ, ಹೃದ್ರೋಗ ತಜ್ಞ ಹೊನ್ನಾವರದ ಡಾ.ಆಶಿಕ್ ಹೆಗಡೆ, ಹೊನ್ನಾವರದ ಸೇಫ್ ಸ್ಟಾರ್ ಸೊಲ್ಯುಶನ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಜಿ.ಜಿ.ಶಂಕರ, ಸಿದ್ದಾಪುರ ಹವ್ಯಕ ಮಂಡಲದ ಮಾತೃ ವಿಭಾಗದ ವೀಣಾ ಪ್ರಭಾಕರ ಭಟ್ಟ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

RELATED ARTICLES  ಕುಮಟಾ ಸರಣಿ ಕಳ್ಳತನ ಆರೋಪಿ ಅಂದರ್.

ಸಂಗೀತ ಕಾರ್ಯಕ್ರಮ : ಬೆಳಿಗ್ಗೆ 9ರಿಂದ ಸಂಗೀತ ಕಾರ್ಯಕ್ರಮ ಆರಂಭವಾಗಲಿದ್ದು, ಖ್ಯಾತ ಹಿಂದೂಸ್ಥಾನೀ ಗಾಯಕ ಪಂ.ಪರಮೇಶ್ವರ ಹೆಗಡೆ ಅವರ ಗಾಯನದಿಂದ ಸಂಗೀತ ಕಾರ್ಯಕ್ರಮ ಆರಂಭವಾಗಲಿದೆ. ನಂತರ ಖ್ಯಾತ ಕೊಳಲು ವಾದಕ ಮುಂಬೈನ ಪಂ.ನಿತ್ಯಾನಂದ ಹಳದೀಪುರ ಅವರಿಂದ ಕೊಳಲು ವಾದನವಿದೆ. ನಂತರ ಬೆಂಗಳೂರಿನ ವಿದುಷಿ ಪ್ರತಿಮಾ ಅತ್ರೇಯ (ಗಾಯನ), ಶಶಿಕಲಾ ಭಟ್ಟ (ಗಾಯನ) ಕಛೇರಿಯಿದೆ. ನಂತರ ಖ್ಯಾತ ಹಿಂದೂಸ್ಥಾನೀ ಗಾಯಕ ಪಂ.ದಿನಕರ ಪಣಶಿಕರ ಅವರಿಗೆ ಪಂ.ಷಡಕ್ಷರಿ ಗವಾಯಿಗಳ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆ ನಂತರದಲ್ಲಿ ಪಂ.ಪಣಶಿಕರ ಅವರಿಂದ ಗಾಯನ ಕಾರ್ಯಕ್ರಮವಿದೆ.ನಂತರದಲ್ಲಿ ಗೌರೀಶ ಯಾಜಿ ಅವರಿಂದ ಹಾರ್ಮೋನಿಯಂ ಸೋಲೋ ಇದೆ. ಇವರಿಗೆ ಹಾರ್ಮೋನಿಯಂನಲ್ಲಿ ಸುರೇಶ ಭಟ್ ಕಡತೋಕಾ, ಪ್ರಕಾಶ ಹೆಗಡೆ ಯಡಳ್ಳಿ ಹಾಗೂ ಭರತ ಹೆಗಡೆ ಹೆಬ್ಬಲಸು ಸಾಥ್ ನೀಡಲಿದ್ದಾರೆ. ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಕಲಭಾಗ, ಪೆÇ್ರ.ಎನ್‍ಜಿ.ಅನಂತಮೂರ್ತಿ, ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ, ಗಣಪತಿ ಹೆಗಡೆ ಹರಿಕೇರಿ, ಗುರುರಾಜ ಹೆಗಡೆ ಆಡುಕಳ, ಅಕ್ಷಯ ಭಟ್ ಅಂಸಳ್ಳಿ ಸಾಥ್ ನೀಡಲಿದ್ದಾರೆ.

RELATED ARTICLES  ರತ್ನಾಕರರಿಗೆ ನಾಳೆ ನಿತ್ಯೋತ್ಸವ ಪ್ರಶಸ್ತಿ ಪ್ರದಾನ.

4kmt2a

ಪ್ರಶಸ್ಥಿ ಪ್ರದಾನ : ಪಂ.ದಿನಕರ ಪಣಶಿಕರ ಅವರಿಗೆ ಗವಾಯಿ ಪ್ರಶಸ್ಥಿ ಪ್ರಾದಾನ ಮಾಡಳಾಗುವುದು. ಪಂ.ಪಣಶಿಕರ ಅವರ ತಾತ ಹಾಗೂ ತಂದೆ ಸಂಸ್ಕøತ ಪಂಡಿತರಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಪಂ.ದಿನಕರರು ತಮ್ಮ 15ನೇ ವಯಸ್ಸಿನಲ್ಲಿಯೇ ಸಂಗೀತಾಭ್ಯಸವನ್ನು ಪ್ರಾರಂಭಿಸಿ, ಬಾಂಬೆ ವಿಶ್ವವಿದ್ಯಾಲಯದಲ್ಲಿ ಶಿಷ್ಯವೇತನ ಪುರಸ್ಕಾರವನ್ನು 1976ರಲ್ಲಿ ಪಡೆದರು. ಜೈಪುರ-ಅತ್ರೌಲಿ ಘರಾಣೆಯ ಪಂ.ನಿವೃತಿ ಬುವಾರ ಶಿಷ್ಯರಾದರು. 1983ರಲ್ಲಿ ಪಂ.ಗಜಾನನ ರಾವ್ ಜೋಶಿ ಹಾಗೂ ಪಂ.ಮಾಣಿಕರಾವ್ ಠಾಕೂರದಾಸ್ ಬಳಿ ತಮ್ಮ ಅಭ್ಯಾಸ ಮುಂದುವರೆಸಿದರು. ಇವರೆಲ್ಲರ ಮಾರ್ಗದರ್ಶನದಲ್ಲಿ ಅತೀ ವಿರಳ ಹಾಗೂ ಕ್ಲಿಷ್ಟ ರಾಗಗಳನ್ನು ಕರಗತ ಮಾಡಿಕೊಂಡ ಇವರು ಇಂದು ತಮ್ಮನ್ನು ರಾಗಗಳ ಖಜಾನೆ ಎಂದೇ ಗುರುತಿಸಿಕೊಂಡಿದ್ದಾರೆ. 1979ರಲ್ಲಿ ಎರ್ಸ್‍ವೈಲ್ ಸಂಗೀತ ರಿಸರ್ಚ್ ಅಕಾಡೆಮಿಯು ಘರಾಣಾ ಸಂಗೀತದ ಸಂರಕ್ಷಣೆ ಹಾಗೂ ಪೆÇೀಷಣೆಗಾಗಿ ಪ್ರತಿಷ್ಠಿತ ಸ್ಕಾಲರ್ ಶಿಪ್ ನೀಡಿ ಇವರನ್ನು ಪುರಸ್ಕರಿಸಿದೆ. ಈ ಪುರಸ್ಕಾರ ಪಡೆದವರಲ್ಲಿ ಇವರು ಮೊದಲಿಗರಾಗಿದ್ದಾರೆ.