ಹೊನ್ನಾವರ : ಶಿವಮೊಗ್ಗ ಜಿಲ್ಲೆಯ ಗ್ಯಾಲಗರ್ ಕಂಪನಿಯ ನೌಕರರು ಕಂಪನಿಯ ವತಿಯಿಂದ ಒಂದು ದಿನದ ಪ್ರವಾಸಕ್ಕೆ ಆಗಮಿಸಿದ್ದರು.ಆದರೆ ಈ ಸಂದರ್ಭದಲ್ಲಿ ಯುವಕ ಭದ್ರಾವತಿ ಮೂಲದ ರಘುವೀರ್ ಕಡಿಯಪ್ಪ ಸಮುದ್ರ ಪಾಲಾದ ಘಟನೆ
ಹೊನ್ನಾವರ ತಾಲೂಕಿನ ಅಪ್ಸರಕೊಂಡದಲ್ಲಿ ನಡೆದಿದೆ.
ಶಿವಮೊಗ್ಗ ದಿಂದ ಕಂಪನಿ ಆಯೋಜಿಸಿದ್ದ ಪ್ರವಾಸಕ್ಕೆ ಕರಾವಳಿ ಭಾಗಕ್ಕೆ ಬಂದಿದ್ದ ಈತ
ಸಮುದ್ರ ವೀಕ್ಷಣೆ ಬಳಿಕ ಸ್ನೇಹಿತರೆಲ್ಲರೂ ಬಸ್ಸನ್ನು ಹತ್ತಲು ತೆರಳಿದಾಗ ಪುನಃ ಈತ ಸಮುದ್ರದ ನೀರಿಗೆ ಇಳಿದಿದ್ದಾನೆ ಎಂದು ತಿಳಿದುದಿದೆ.
ಅಲೆಯ ರಭಸಕ್ಕೆ ನೀರಿನಲ್ಲಿ ಕೊಚ್ಚಿಹೋಗಿ ಮುಳುಗಿದ್ದು, ಜೊತೆಯಲ್ಲಿದ್ದವರು ದೊಡ್ಡದಾಗಿ ಕಿರುಚಿದಾಗ ಗ್ರಾಮಸ್ಥರಿಗೆ ವಿಷಯ ತಿಳಿದು ಗ್ರಾಮದವರಾದ ಯುವಕನ್ನು ರಕ್ಷಿಸಲು ನೀರಿಗೆ ದುಮಿಕಿದರೂ ರಕ್ಷಣೆ ಮಾಡಲಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.