ಅಂಕೋಲಾ : ತಾಲೂಕಿನ ಅವರ್ಸಾ ಗ್ರಾ.ಪಂ ವ್ಯಾಪ್ತಿಯ ಲಕ್ಷ್ಮಿರಾಯಣ ದೇವಾಲಯದಿಂದ ದಂಡೆಬಾಗ ಹೋಗುವ ರಸ್ತೆಯ ದುರಸ್ತಿಗೆ ಆಗ್ರಹಿಸಿ ರಸ್ತೆಯಲ್ಲಿ ಉಳುಮೆಮಾಡಿ ಸಸಿನೆಟ್ಟಟು ವಿನೂತನ ಪ್ರತಿಭಟನೆ ಮಾಡಲಾಯಿತು.

“ರಸ್ತೆಯ ದುರಸ್ತಿಗೆ ಆಗ್ರಹಿಸಿ ಸ್ಥಳೀಯ ಶಾಸಕ ಸತೀಶ್ ಸೈಲ್ ಅವರ ಗಮನಕ್ಕೆ ತಂದರು ಯಾವುದೇ ಪ್ರಯೋಜನ ವಾಗಿಲ್ಲ. ಅಧಿಕಾರಿಗಳು ಗ್ರಾಮಸ್ಥರಿಗೆ ತಪ್ಪು ಮಾಹಿತಿ ನೀಡಿ ದಾರಿತಪ್ಪಿಸುವ ಕಾರ್ಯದಲ್ಲಿದ್ದಾರೆ ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES  ಅರಣ್ಯ ಪ್ರದೇಶದಲ್ಲಿ ಶವ ಪತ್ತೆ : ಕೊಲೆಯ ಶಂಕೆ.

ರಸ್ತೆಯಲ್ಲಿ ಉಳುಮೆಮಾಡಿ ಗಿಡನೆಟ್ಟ ಪ್ರತಿಭಟನಾಕಾರರು ಬೃಹತ್ ಮೇರವಣಿಗೆಯ ಮೂಲಕ ಆವರ್ಸಾ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದರು. ಸ್ಥಳಕ್ಕೆ ಶಾಸಕರು ಮತ್ತು ತಹಶೀಲ್ದಾರರು ಆಗಮಿಸಬೇಕು ಎಂದು ಪಟ್ಟು ಹಿಡಿದರು. ಬಳಿಕ ಮೂರು ತಿಂಗಳಲ್ಲಿ ನೂತನ ರಸ್ತೆ ದುರಸ್ತಿ ಮಾಡದೇ ಇನ್ನೂ ಉಗ್ರ ಹೋರಾಣ ಮಾಡುವುದಾಗಿ ಎಚ್ಚರಿಕೆ ನೀಡಿದರು.

RELATED ARTICLES  ಬಾಲಕನಿಗೆ ಬೆದರಿಸಿರುವ ಘಟನೆಗೆ ಸಂಬಂಧಿಸಿ ಶಿರಸಿಯ ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿಯಿಂದ ಅಂತೂ ಬಂತೂ ಸ್ಪಷ್ಟೀಕರಣ…!