ಭಟ್ಕಳ : ಪರೇಶ್ ಮೇಸ್ತಾ ವಿಚಾರದಲ್ಲಿ ಶಾಸಕ ಸುನೀಲ್ ನಾಯ್ಕ ತಮ್ಮ ಫೇಸ್ ಬುಕ್ ನಲ್ಲಿ ಬರೆಯುವ ಮೂಲಕ ಅಶ್ರುತರ್ಪಣ ಸಮರ್ಪಿಸಿದ್ದಾರೆ. ಅದರ ಯಥಾ ಪ್ರತಿ ಇಲ್ಲಿದೆ.
ಸಹೋದರ ಪರೇಶ್ ಮೇಸ್ತಾ
ಹುತಾತ್ಮನಾಗಿ ವರ್ಷ ಕಳೆಯಿತು.. ಆದರೂ ಇದುವರೆಗೆ ಆರೋಪಿಗಳಿಗೆ ಶಿಕ್ಷೆ ಆಗಲಿಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ.
ಈ ವಿಚಾರವಾಗಿ ಸಿಬಿಐ ತನಿಖೆ ಪ್ರಗತಿಯಲ್ಲಿದ್ದು ಆದಷ್ಟು ಬೇಗ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು…
ಈ ಕೇಸ್ ಅಲ್ಲಿ ಸಿಗುವ ನ್ಯಾಯ ಪರೇಶನ ಆತ್ಮಕ್ಕೆ ಶಾಂತಿ ಸಿಗುವುದರ ಜೊತೆಗೆ ನನ್ನ ಕ್ಷೇತ್ರದ ಜನತೆಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಭರವಸೆ ಮೂಡಿಸುವುದಲ್ಲದೇ ಇದುವರೆಗಿನ ಹೋರಾಟದಲ್ಲಿ ಭಾಗವಹಿಸಿ ಕೇಸ್,ಕೋರ್ಟ್, ಕಛೇರಿ ಸುತ್ತುತ್ತಿರುವ ನಮ್ಮ ಸಹೋದರರಿಗೂ ತಮ್ಮ ಹೋರಾಟ ವ್ಯರ್ಥವಾಗಲಿಲ್ಲ ಎಂಬ ಸಾರ್ಥಕ ಭಾವವೂ ಮೂಡುತ್ತದೆ.
ನಾನೂ ಹಿಂದೆಯೂ ಹೇಳಿದಂತೆ ಸಹೋದರ ಪರೇಶನ ಋಣ ನನ್ನ ಮೇಲಿದೆ..ಅವರ ತಂದೆ ತಾಯಿಯ ಜೊತೆ ನಾನಿದ್ದೇನೆ..ಮುಂದೆ ಈ ವಿಚಾರವಾಗಿ ನ್ಯಾಯಕ್ಕಾಗಿ ಹೋರಾಡುವ ಪರಿಸ್ಥಿತಿ ಬಂದರೆ ಹಿಂಜರಿಯುವ ಮಾತೇ ಇಲ್ಲ, ನ್ಯಾಯ ಸಿಗಲೇ ಬೇಕು..ನ್ಯಾಯ ಸಿಗುವುದೆಂಬ ಭರವಸೆಯೊಂದಿಗೆ… ಹುತಾತ್ಮನಾದ ಸಹೋದರನ ಆತ್ಮಕ್ಕೆ ಅಶ್ರುತರ್ಪಣ ಸಲ್ಲಿಸುತ್ತೇನೆ..
ಹೀಗೆ ಬರೆದು ತಮ್ಮ ಫೇಸ್ ಬುಕ್ ನಲ್ಲಿ ಶಾಸಕ ಸುನೀಲ್ ನಾಯ್ಕ ಅಶ್ರುತರ್ಪಣ ಸಮರ್ಪಿಸಿದ್ದಾರೆ.