ವಿಶಿಷ್ಟ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಅನಾವರಣಗೊಳಿಸುವ ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು ಹವ್ಯಕ ಮಹಾಸಭೆಯಿಂದ ಆಯೋಜಿಸಲಾಗಿದ್ದು, ಡಿಸೆಂಬರ್ 28, 29 ಮತ್ತು 30 ರಂದು ಅರಮನೆ ಮೈದಾನದ ರಾಯಲ್ ಸೆನೆಟ್ ಹಾಗೂ ಗ್ರಾಂಡ್ ಕ್ಯಾಸೆಲ್ ಸಭಾಂಗಣದಲ್ಲಿ ಸಂಪನ್ನವಾಗಲಿದೆ.
ಹವ್ಯಕ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳೊಂದಿಗೆ ನಾಡಿಗೆ ವೈಶಿಷ್ಟ್ಯಪೂರ್ಣ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಹಾಗೂ ಹವ್ಯಕ ಸಮಾಜವನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ದಿಶೆಯಲ್ಲಿ, ಇಡೀ ಸಮಾಜ ಒಂದು ಕುಟುಂಬವಾಗಿ ತನ್ನ ಶಕ್ತಿ, ಸಾಮರ್ಥ್ಯ ಹಾಗೂ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಸ್ಮರಣೀಯ ಕಾರ್ಯಕ್ರಮವಾಗಿಸುವ ಪ್ರಯತ್ನಗಳು ನಡೆದಿವೆ.
ಸಮ್ಮೇಳನದಲ್ಲಿ ಏನೆಲ್ಲ ಇರಲಿದೆ?
ಐತಿಹಾಸಿಕ ಈ ಕಾರ್ಯಕ್ರಮದಲ್ಲಿ 75 ಪುಸ್ತಕಗಳ ಲೋಕಾರ್ಪಣೆ, 75 ವೈದೀಕರಿಗೆ ‘ಹವ್ಯಕ ವೇದರತ್ನ’ ಸನ್ಮಾನ, 75 ಕೃಷಿಕರಿಗೆ ‘ಹವ್ಯಕ ಕೃಷಿರತ್ನ’ ಸನ್ಮಾನ , 75 ಸಾಧಕರಿಗೆ ‘ಹವ್ಯಕ ಸಾಧಕ ರತ್ನ’ ಸನ್ಮಾನ, 75 ಯೋಧರಿಗೆ ‘ಹವ್ಯಕ ದೇಶರತ್ನ’ 75 ವಿದ್ಯಾರ್ಥಿಗಳಿಗೆ ‘ಹವ್ಯಕ ವಿದ್ಯಾರತ್ನ’ ಸನ್ಮಾನ, 75 ಗೋದಾನ, 75 ಯಾಗ ಮಂಟಪ – ಯಾಗ ಮಂಡಲಗಳ ಪ್ರದರ್ಶನ ಹಾಗೂ ಸ್ಪರ್ಧೆ, 75 ಕಲಾವಿದರೊಂದಿಗೆ ರಾಮಕಥಾ ಪ್ರಸ್ತುತಿ, ರಂಗೋಲಿ, ಚಿತ್ರಕಲೆ, ಹವ್ಯಕ ಸಂಸ್ಕೃತಿ ಚಿತ್ರ, ಕರಕುಶಲ ವಸ್ತುಗಳ ಸ್ಪರ್ಧೆಗಳು ಸೇರಿದಂತೆ ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿದೆ. ಹವ್ಯಕರ ಪಾರಂಪರಿಕ ಬೆಳೆಯಾದ ಅಡಿಕೆ ಕೃಷಿಯ ಸಮಗ್ರ ದರ್ಶನ ಹಾಗೂ ಲೋಕಮಂಗಳಕಾರಿಯಾದ ಯಜ್ಞ ಯಾಗಗಳನ್ನು ಲೋಕಮುಖಕ್ಕೆ ಪರಿಚಯಿಸುವ ವಿಶೇಷ ಪ್ರದರ್ಶನಗಳು ಇರಲಿದ್ಧು, ಹವ್ಯಕ ಸಾಂಸ್ಕೃತಿಕ ಜಗತ್ತು ಕಲೆಗಳ ಮೂಲಕ ಅನಾವರಣವಾಗಲಿದೆ. ಉತ್ತರ ಕನ್ನಡ – ದಕ್ಷಿಣ ಕನ್ನಡ ಹಾಗೂ ಶಿವಮೋಗ್ಗ ಪ್ರಾಂತ್ಯಗಳ ಹವ್ಯಕರ ಪಾಕ ವೈವಿಧ್ಯಗಳನ್ನು ಪರಿಚಯಿಸುವ ಹವ್ಯಕ ಪಾಕೋತ್ಸವ ಈ ಕಾರ್ಯಕ್ರಮದ ರುಚಿಯನ್ನು ಹೆಚ್ಚಿಸಲಿದ್ದು, ರಾಷ್ಟ್ರಮಟ್ಟದ ಗಣ್ಯರುಗಳು ಹಾಗೂ ಅನೇಕ ಮಹನೀಯರು ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಹವ್ಯಕ ಸಂಸ್ಕೃತಿ ಸಂಸ್ಕಾರಗಳನ್ನು ಆಸ್ವಾದಿಸಿ, ಆನಂದಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದಾರೆ.
ಹವ್ಯಕ ಪಾಕೋತ್ಸವ – ಆಲೆಮನೆ ಆಕರ್ಷಣೆ
ನಾಡಿನಲ್ಲಿ ಹವ್ಯಕರ ಆಹಾರ ಪದಾರ್ಥಗಳಿಗೆ ವಿಶೇಷ ಮನ್ನಣೆ ಇದ್ದು, ಹವ್ಯಕರ ಪಾಕ ನಾಡಿನ ಜನಮನ್ನಣೆ ಪಡೆದಿದೆ. ಮಲೆನಾಡು, ಕರಾವಳಿ ಭಾಗಗಳ ವಿಶಿಷ್ಟ ಹವ್ಯಕರ ಆಹಾರ ಪದಾರ್ಥಗಳು ಸಮ್ಮೇಳನದ ‘ಹವ್ಯಕ ಪಾಕ’ದಲ್ಲಿ ದೊರಕಲಿದ್ದು, ವಿಶೇಷ ಕೈರುಚಿಗಳು ಬೆಂಗಳೂರಿನ ಆಹಾರಪ್ರಿಯರ ಹೊಟ್ಟೆಹಸಿವನ್ನು ತಣಿಸಲಿದೆ. ಜೊತೆಗೆ ಹಳ್ಳಿ ಸೊಗಡನ್ನು ನೆನಪಿಸುವ ‘ಆಲೆಮನೆ’ ಅರಮನೆ ಮೈದಾನದಲ್ಲಿ ತಲೆ ಎತ್ತಲಿದ್ದು ಪಾರಂಪರಿಕವಾಗಿ ಗಾಣದಿಂದ ಕಬ್ಬಿನ ಹಾಲನ್ನು ತೆಗೆದು ಸೇವಿಸುವ ಸಂಭ್ರಮ ಒಂದೆಡೆಯಾದರೆ, ಪಾರಂಪರಿಕ ಆಲೆಮನೆಯನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ರಾಜಧಾನಿಯ ನಾಗರೀಕರಿಗೆ ಒದಗಲಿದೆ.
ಕಾರ್ಯಕ್ರಮ ಸಾರ್ವಜನಿಕರಿಗೆ ಮುಕ್ತವಾಗಿದ್ದು, ವಿಶಿಷ್ಟವಾದ ಸಂಸ್ಕೃತಿ ಸಂಸ್ಕಾರಗಳನ್ನು ಆಸ್ವಾದಿಸಿ, ಆನಂದಿಸಬಹುದಾಗಿದೆ.
ಮಹಾಸಮಿತಿ ರಚನೆ:
ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ ಕಾರ್ಯಕ್ರಮಗಳಿಗೆ ಸಂಬಂಧಿಸಿ ಮಹಾಸಮಿತಿಯನ್ನು ರಚಿಸಲಾಗಿದ್ದು, ಗಣ್ಯರು, ಸಮಾಜದ ಪ್ರಮುಖರು ಸಮಿತಿಯ ಹೊಣೆ ಹೊತ್ತಿದ್ದಾರೆ.
ಹೊರನಾಡಿನ ಧರ್ಮಕರ್ತರಾದ ಡಾ|| ಜಿ. ಭೀಮೇಶ್ವರ ಜೋಷಿಯವರು ಪ್ರಧಾನ ಸಮಿತಿಯ ಗೌರವಾಧ್ಯಕ್ಷರಾಗಿದ್ದು, ಡಾ. ಗಿರಿಧರ ಕಜೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಶ್ರೀ ಶಾಂತಾರಾಮ ಹೆಗಡೆ, ಶೀಗೆಹಳ್ಳಿ ಶ್ರೀ ಹರನಾಥ ರಾವ್, ಮತ್ತಿಕೊಪ್ಪ, ಶ್ರೀ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ಟ, ಪುತ್ತೂರು, ಶ್ರೀ ಶ್ರೀಧರ ಭಟ್, ಕಲಸಿ, ಶ್ರೀ ಜಿ. ವಿ. ಹೆಗಡೆ, ಕಾನಗೋಡು, ಶಿರಸಿ, ಶ್ರೀ ಎಸ್. ಜಿ. ಹೆಗಡೆ, ಕರ್ಕಿ, ಬೆಂಗಳೂರು, ಶ್ರೀ ಪ್ರಮೋದ ಹೆಗಡೆ, ಯಲ್ಲಾಪುರ ಮಹಾಸಮಿತಿಯ ಹಿರಿಯ ಉಪಾಧ್ಯಕ್ಷರುಗಳಾಗಿದ್ದಾರೆ.
ಡಾ. ಪರಮ್ ಭಟ್ಟ, ಅಮೇರಿಕಾ, ಡಾ. ರೂಪಾ ಜಯದೇವ್, ಇಂಗ್ಲೆಂಡ್, ಡಾ. ಶ್ರೀಧರ್ ನಡಹಳ್ಳಿ, ಆಸ್ಟ್ರೇಲಿಯಾ, ಶ್ರೀ ಕುಮಾರಸ್ವಾಮಿ ವರ್ಮುಡಿ, ಆಫ್ರಿಕಾ, ಶ್ರೀ ಚಂದ್ರಹಾಸ ಭಟ್ಟ, ಸಿಂಗಾಪುರ, ಶ್ರೀ ಎಮ್.ಆರ್. ಹೆಗಡೆ, ದುಬೈ, ಡಾ|| ಸುರೇಶ ಎಲ್.ಎಮ್. ಕೀನ್ಯಾ, ಶ್ರೀ ಮಿತ್ತೂರು ಭೀಮ ಭಟ್ಟ, ಚೆನ್ನೈ, ಶ್ರೀ ಟಿ. ಪ್ರಕಾಶ್ ಭಟ್ಟ, ಮುಂಬೈ, ಶ್ರೀ ಎಸ್. ಎಂ. ಹೆಗಡೆ, ಗೌರಿಬಣಗಿ, ಬೆಂಗಳೂರು, ಡಾ. ಶ್ರೀಧರ ಕೆ.ಆರ್. ಶಿವಮೊಗ್ಗ, ಶ್ರೀ ಎನ್. ಕೆ. ಭಟ್ಟ, ಅಗ್ಗಾಶಿಕುಂಬ್ರಿ, ಯಲ್ಲಾಪುರ ಸಮಿತಿಯ ಉಪಾಧ್ಯಕ್ಷರುಗಳಾಗಿದ್ದಾರೆ.
ಶ್ರೀ ಅನಂತಕುಮಾರ ಹೆಗಡೆ, ಶಿರಸಿ, ಶ್ರೀ ವಿಶ್ವೇಶ್ವರ ಹೆಗಡೆ, ಕಾಗೇರಿ, ಶಿರಸಿ, ಶ್ರೀ ಶಿವರಾಮ ಎಮ್. ಹೆಬ್ಬಾರ, ಯಲ್ಲಾಪುರ, ಶ್ರೀ ಉರಿಮಜಲು ರಾಮ ಭಟ್ಟ, ಪುತ್ತೂರು, ಶ್ರೀ ಆರ್.ಎಸ್. ಭಾಗವತ್, ಕುಮಟಾ, ಡಾ. ಎಂ.ಪಿ. ಕರ್ಕಿ, ಹೊನ್ನಾವರ, ಶ್ರೀ ಉಮೇಶ್ ಭಟ್ಟ, ಅಂಕೋಲ, ಶ್ರೀ ಎಲ್. ಟಿ. ತಿಮ್ಮಪ್ಪ ಹೆಗಡೆ, ಸಾಗರ, ಶ್ರೀ ವಿಶ್ವೇಶ್ವರ ಭಟ್ಟ, ಬೆಂಗಳೂರು, ಶ್ರೀ ರವಿ ಹೆಗಡೆ, ಬೆಂಗಳೂರು, ಶ್ರೀ ತಿಮ್ಮಪ್ಪ ಭಟ್ಟ, ಬೆಂಗಳೂರು, ಶ್ರೀ ಹರಿಪ್ರಕಾಶ್ ಕೋಣೆಮನೆ, ಬೆಂಗಳೂರು, ಶ್ರೀ ವಿನಾಯಕ ಭಟ್ಟ, ಮೂರೂರು, ಬೆಂಗಳೂರು ಸಮಿತಿಯ ದಿಗ್ದರ್ಶನ ಮಾಡಲಿದ್ದಾರೆ.
ವೇ|ಮೂ|| ಶೇಷಗಿರಿ ಭಟ್ಟ, ಸಿಗಂದೂರು, ವೇ|ಮೂ|| ಶ್ರೀಧರ ಅಡಿ, ಕೊಲ್ಲೂರು, ವೇ|ಮೂ|| ಜಿ. ಜಿ. ಸಭಾಹಿತ, ಇಡಗುಂಜಿ, ವೇ|ಮೂ|| ರಾಮಚಂದ್ರ ಭಟ್ಟ, ಹಟ್ಟಿಯಂಗಡಿ, ವೇ|ಮೂ|| ಶಿತಿಕಂಠ ಹಿರೇ ಭಟ್ಟ, ಗೋಕರ್ಣ, ವೇ|ಮೂ|| ಎಮ್.ಕೆ. ಭಟ್ಟ, ನಿಮಿಷಾಂಬ, ಶ್ರೀ ಟಿ. ಮಡಿಯಾಲ, ಐ.ಪಿ.ಎಸ್. ಶ್ರೀ ಆರ್. ವಿ. ಶಾಸ್ತ್ರಿ, ಬೆಂಗಳೂರು, ಶ್ರೀ ಎಂ. ಆರ್. ಹೆಗಡೆ, ಗೊಡವೆಮ£,É ಶ್ರೀ ಟಿ. ಕೃಷ್ಣ ಭಟ್ಟ, ಐ.ಪಿ.ಎಸ್., ಶ್ರೀ ಶ್ರೀಧರ್ ಜಿ. ಹೆಗಡೆ, ಐ.ಎ.ಎಸ್., ಶ್ರೀ ಪಿ.ಬಿ. ರಾಮಮೂರ್ತಿ, ಐ.ಎ.ಎಸ್., ಶ್ರೀ ಬಿ. ಶ್ರೀಧರ್ ಕೆ.ಎ.ಎಸ್ ಮುಂತಾದವರು ಮಾರ್ಗದರ್ಶನ ನೀಡಲಿದ್ದಾರೆ.