ಹೊನ್ನಾವರ: ತಾಲೂಕಿನ ಹಿಂದೂ ರಕ್ಷಣಾ ಸಮಿತಿ ವತಿಯಿಂದ ದಿ. ಪರೇಶ್ ಮೇಸ್ತರ ಸ್ಮರಣಾರ್ಥ, ಪ್ರಥಮ ವಾರ್ಷಿಕ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭಗಳಲ್ಲಿದಲ್ಲಿ ಭಾಗವಹಿಸಿದ ಶಾಸಕ ದಿನಕರ ಶೆಟ್ಟಿ ಹಾಗೂ ಶಾಸಕ ಸುನೀಲ್ ನಾಯ್ಕ ಪರೇಶ ಮೇಸ್ತಾರಿಗೆ ಅಶ್ರುತರ್ಪಣ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುನೀಲ್ ನಾಯ್ಕ ಅಂದು ಶಾಂತವಾಗಿದ್ದ ಕರಾವಳಿಯ ನಮ್ಮ ಜಿಲ್ಲೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಂದು ಹೋದ ಮೇಲೆ ಹೊನ್ನಾವರದಲ್ಲಿನ ಅಲ್ಪರು ತಮ್ಮ ಅಟ್ಟಹಾಸ ಮೆರೆದು ಹರೆಯದ ವಯಸ್ಸಿನ ಸಹೋದರ ಪರೇಶ್ ಮೇಸ್ತನ ಬಲಿ ತೆಗೆದುಕೊಂಡಿದ್ದರು. ಅಂದಿನ ಸರ್ಕಾರ ಮತ್ತು ಶಾಸಕರು ಪ್ರಕರಣವನ್ನು ಒಂದು ವರ್ಗದ ತುಷ್ಟಿಕರಣದ ಮತಕ್ಕಾಗಿ ಸಹಜ ಸಾವು ಎಂದು ಮುಚ್ಚಿ ಹಾಕುವ ಪ್ರಯತ್ನದಲ್ಲಿರುವಾಗ ಹೋರಾಟಕ್ಕಿಳಿದ ಬಿಜೆಪಿ ಪಕ್ಷ ಮತ್ತು ಹಿಂದೂ ಸಂಘಟನೆಗಳು ಪ್ರಕರಣವನ್ನು CBI ತನಿಖೆಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದವು.
ಹಾಗೆಯೇ ಸನ್ಮಾನ್ಯ ಸಂಸದರಾದ ಅನಂತಕುಮಾರ ಹೆಗಡೆ ಅವರು ಅಮಿತ್ ಷಾ ಅವರನ್ನು ಪರೇಶ್ ಮೇಸ್ತರ ಮನೆಗೆ ಭೇಟಿ ಮಾಡಿಸುವ ಮೂಲಕ ಪ್ರಕರಣಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.
ಅಂದು ಇದೆ ಪ್ರಕರಣವನ್ನು ಮುಚ್ಚಿ ಹಾಕುವು ಹುನ್ನಾರ ನಡೆಸಿದವರು ಇಂದು ಪ್ರಕರಣದ ಬಗ್ಗೆ ಕಾಳಜಿ ಇರುವವರ ಹಾಗೆ ನಟನೆ ಮಾಡುತ್ತಿದ್ದಾರೆ.
ಅಂದು ಪಕ್ಷಾತೀತವಾಗಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅವರ ಬೆಂಬಲಿಗರೂ ನಮ್ಮೊಂದಿಗೆ ಕೈ ಜೋಡಿಸಿದ್ದರೆ ಇಂದು ಪರೇಶ್ ಮೇಸ್ತರ ಸಾವಿಗೆ ನ್ಯಾಯ ಸಿಕ್ಕಿರುತ್ತಿತ್ತು… ಅಂದು ಇವರು ಅಧಿಕಾರಿಗಳನ್ನು ತಮ್ಮ ಪ್ರಭಾವಕ್ಕೆ ಬಳಸಿಕೊಂಡು, ಸಾಧ್ಯವಾದಷ್ಟು ಸಾಕ್ಷ್ಯ ನಾಶ ಮಾಡಿ ಪ್ರಕರಣನ್ನು ಸಹಜ ಸಾವೆಂದು ಬಿಂಬಿಸುವ ಪ್ರಯತ್ನ ನಡೆಸಿ ಜಿಹಾದಿಗಳ ಪರ ನಿಂತವರಿಗೆ ಇಂದು ಮಾತನಾಡುವ ನೈತಿಕತೆ ಇದೆಯೇ?
ಏನೆ ಆಗಲಿ ಪ್ರಕರಣದ ಕುರಿತು ಸಿಬಿಐ ಅಧಿಕಾರಿಗಳನ್ನು ಸಂಪರ್ಕಿಸಿದರೆ ತನಿಖಾ ಗೌಪ್ಯತೆಯ ದೃಷ್ಟಿಯಿಂದ ಯಾವುದೇ ಮಾಹಿತಿ ನೀಡುತ್ತಿಲ್ಲ, ಕಾರಣ ಸನ್ಮಾನ್ಯ ಸಂಸದರ ಸಹಾಯದಿಂದ ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ಅವರ ಭೇಟಿಗೆ ಅವಕಾಶ ಕೇಳಿದ್ದು ಸದ್ಯದಲ್ಲಿಯೇ ಅವರನ್ನು ಭೇಟಿಯಾಗಿ ತನಿಖೆಯ ಕುರಿತು ಚರ್ಚಿಸಲಿದ್ದೇವೆ.
ನಮಗೂ ಮತ್ತು ಪರೇಶ್ ಮೆಸ್ತ ಕುಟುಂಬಕ್ಕೂ ಹಾಗು ಅಂದು ಹೋರಾಟ ನಡೆಸಿದ ಎಲ್ಲಾ ಮಿತ್ರರಿಗೂ ಸಿಬಿಐ ತನಿಖೆಯ ಮೇಲೆ ನಂಬಿಕೆಯಿದ್ದು ನ್ಯಾಯ ಸಿಗುವ ವಿಶ್ವಾಸವಿದೆ ಮತ್ತು ಮುಂದೆಯು ಕೂಡ ನ್ಯಾಯಕ್ಕಾಗಿ ಪರೇಶ್ ಮೇಸ್ತರವರ ಕುಟುಂಬದ ಪರವಾಗಿ ಎಂತಹ ಹೋರಾಟಕ್ಕಾದರೂ ನಿಲ್ಲುತ್ತೇವೆ.
ಪರೇಶ್ ಮೆಸ್ತ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸಿದಂತಹ ಹಿಂದೂಗಳ ಮೇಲಿನ ಕೇಸ್ ರದ್ದುಗೊಳಿಸಲು ಸರ್ಕಾರ ಮಟ್ಟದಲ್ಲಿ ಒತ್ತಾಯಿಸಲಾಗುವುದು. ಒಂದು ವೇಳೆ ಈಗಿನ ಸರ್ಕಾರ ಸಹಕಾರ ನೀಡದಿದ್ದಲ್ಲಿ , ಸದ್ಯದಲ್ಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದ್ದು ಆಗ ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ಅಮಾಯಕ ಹಿಂದೂ ಬಾಂಧವರ ಮೇಲಿನ ಕೇಸ್ ರದ್ದುಗೊಳಿಸುವ ಆಶ್ವಾಸನೆ ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು, ಪರೇಶ್ ಮೇಸ್ತಾ ಅಭಿಮಾನಿಗಳು ಹಾಗೂ ಬಿಜೆಪಿ ಪ್ರಮುಖರು ಇದ್ದರು.