ಕಾರವಾರ: ಕಡಲ ನಗರಿ ಕಾರವಾರದಲ್ಲಿ ನಡೆಯುತ್ತಿರಯವ ಕರಾವಳಿ ಉತ್ಸವದಲ್ಲಿ ಆಯೋಜಿಸಿದ ಶ್ವಾನ ಪ್ರದರ್ಶನದಲ್ಲಿ ದೇಶೀಯ ಹಾಗೂ ವಿದೇಶದ ತಳಿಯ ನಾಯಿಗಳು ಭಾಗವಹಿಸಿದ್ದವು.23 ತಳಿಗಳ 76 ಶ್ವಾನಗಳನ್ನು ಈ ವೇಳೆ ಪ್ರದರ್ಶಿಸಲಾಯಿತು.
ಕರಾವಳಿ ಉತ್ಸವದ ನಿಮಿತ್ತ ನಗರದ ಮಾಲಾದೇವಿ ಮೈದಾನದಲ್ಲಿ ಆಯೋಜಿಸಿರುವ ಶ್ವಾನ ಪ್ರದರ್ಶನವನ್ನು ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಿದರು.
ಶಿವಮೊಗ್ಗದ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶ್ರೀಪಾದ್, ಮುಖ್ಯ ಪಶು ವೈದ್ಯಾಧಿಕಾರಿ ನಾಗರಾಜ್ ಕೆ.ಎಂ. ಹಾಗೂ ಶಿರಸಿಯ ಖಾಸಗಿ ಪಶು ವೈದ್ಯ ಡಾ.ಪಿ.ಎಸ್.ಹೆಗಡೆ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್, ಕುಮಟಾ ಉಪವಿಭಾಗಾಧಿಕಾರಿ ಪ್ರೀತಿ ಗೆಲ್ಹೋಟಾ, ಪಶು ಇಲಾಖೆಯ ಉಪನಿರ್ದೇಶಕರಾದ ಡಾ.ಗೋವಿಂದ ಭಟ್, ಸುಬ್ರಾಯ್ ಭಟ್ ಈ ವೇಳೆ ಇದ್ದರು.