ಶಿರಸಿ : ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ, ಎಚ್‍ಡಿಎಫ್‍ಸಿ ಬ್ಯಾಂಕ್ ಶಿರಸಿ ಹಾಗೂ ಬ್ಲಡ್ ಬ್ಯಾಂಕ್ ಆಯ್.ಎಮ್.ಎ. ಶಿರಸಿ ಇವರ ಸಹಯೋಗದಲ್ಲಿ ಸಂಘದ ಸಭಾಭವನದಲ್ಲಿ ರಕ್ತದಾನ ಶಿಬಿರ ವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಟಿ.ಎಸ್.ಎಸ್. ಪ್ರಧಾನ ವ್ಯವಸ್ಥಾಪಕರಾದ ಶ್ರೀ ರವೀಶ ಅ. ಹೆಗಡೆ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿರಸಿಯ ಗಣೇಶ ನೇತ್ರಾಲಯ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಶಿವರಾಮ ಕೆ. ವಿ. ಹಾಗೂ ಆಯ್.ಎಮ್.ಎ. ಬ್ಲಡ್ ಬ್ಯಾಂಕ್ ಶಿರಸಿ ಇದರ ಡಾ. ಸುಮನಾ ಹೆಗಡೆ ಮತ್ತು ಎಚ್‍ಡಿಎಫ್‍ಸಿ ಬ್ಯಾಂಕ್‍ನ ವ್ಯವಸ್ಥಾಪಕರಾದ ಶ್ರೀ ಸಂದೀಪ ಅವರುಗಳು ಆಗಮಿಸಿದ್ದರು.

RELATED ARTICLES  ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಈ ರಕ್ತದಾನ ಶಿಬಿರದಲ್ಲಿ 35ಕ್ಕೂ ಅಧಿಕ ಸಂಘದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ರಕ್ತದಾನ ಮಾಡಿ ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದರು ಎಂದು ಪ್ರಕಟಣೆಯಲ್ಲಿ ತಿಳಿಸಿದರು.

RELATED ARTICLES  ಅಮೂಲ್ಯ ಸಾಕ್ಷರತಾ ಕೇಂದ್ರ ಶಿರಸಿ ಇದರ ವತಿಯಿಂದ ಆರ್ಥಿಕ ಸಮಾಲೋಚಕ ಕಾರ್ಯಕ್ರಮ