ಭಟ್ಕಳ: ತಾಲೂಕಿನ ಪುರಾಣಪ್ರಸಿದ್ಧ ಹೆಬಳೆಯ ಶ್ರೀ ಶೇಡಬರಿ ಜಟಗಾ ಮಹಾಸತಿ ದೇವಸ್ಥಾನದ ಹತ್ತೊಂಬತ್ತನೆಯ ವರ್ಷದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಮುಂಜಾನೆಯಿಂದಲೇ ಸಾವಿರಾರು ಭಕ್ತಾದಿಗಳು ಶ್ರೀ ದೇವರುಗಳಿಗೆ ತಮ್ಮ ತಮ್ಮ ಇಷ್ಟದ ಸೇವೆಗಳನ್ನು ಸಲ್ಲಿಸಿದರು.ಸ್ಥಳ ಸಾನಿಧ್ಯ ಪ್ರಮುಖ ದೇವರುಗಳಾದ ಜಟಗಾ,ಮಹಾಸತಿ,ಪ್ರಧಾನ ಬ್ರಹ್ಮ ದೇವರುಗಳು ಹೂವಿನಿಂದ ಅಲಂಕೃತಗೊಂಡುದುದಲ್ಲದೇ ಶ್ರೀ ಜಟಗಾ ಮತ್ತು ಮಹಾಸತಿ ದೇವರುಗಳು ವಿಶೇಷ ದಿನಗಳಂದು ಧಾರಣೆ ಮಾಡುವ ಬೆಳ್ಳಿ ಹಾಗೂ ಬಂಗಾರದ ಒಡವೆಗಳು,ಸೀರೆ,ಸೊಂಟಪಟ್ಟಿಗಳಿಂದ ಶೋಭಿಸುತ್ತಿದ್ದವು.

ಮಧ್ಯಾಹ್ನ ದೇವಸ್ಥಾನದ ಪದ್ಧತಿಯಂತೆ ಮಹಾಪೂಜೆಗೂ ಮೊದಲು ಪರಿವಾರ ದೇವರುಗಳಿಗೆ ಕಾಯಿ ಒಡೆದು ಧೂಪನೆಣೆ ಹಾಕಿದ ನಂತರ ಪ್ರಮುಖ ದೇವರುಗಳಿಗೆ ಮಹಾಪೂಜೆ ನಡೆಸಲಾಯಿತು.ನಂತರ ನೆರೆದಿದ್ದ ಭಕ್ತರೆಲ್ಲರಿಗೂ ಪ್ರಸಾದ ವಿತರಿಸಲಾಯಿತು.

RELATED ARTICLES  ಚುನಾವಣಾ ಚಟುವಟಿಕೆ ಚುರುಕು : ಮುರ್ಡೇಶ್ವರದಲ್ಲಿ ಬಿ.ಜೆ.ಪಿ ಸಭೆ ಪ್ರಾರಂಭ.

ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಸ್ಥಳೀಯ ಯುವಕ ಯುವತಿಯರು ಬೃಹತ್ತಾದ ರಂಗೋಲಿ ರಚನೆ ಹಾಗೂ ದೀಪೋತ್ಸವ ಸಮಿತಿಯವರು ಎಣ್ಣೆ ಮತ್ತು ಬತ್ತಿಯ ಜೊತೆ ಹಣತೆ ಇಡುವ ಕಾಯಕ ಕೈಗೊಂಡರು.ತುಸು ಹೊತ್ತು ತೆಂಗಿನಗುಂಡಿಯ ಚಿಣ್ಣರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಸಾಯಂಕಾಲ 6.30 ಕ್ಕೆ ಚಿತ್ರಾಪುರ ಸಂಸ್ಥಾನದ ಪ್ರತಿನಿಧಿಗಳು ದೀಪ ಬೆಳಗುವ ಮೂಲಕ ದೀಪಾರಾಧನೆಯ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಂದಂತಹ ಎಲ್ಲ ಭಕ್ತಾದಿಗಳೂ ಕೂಡ ದೇವಸ್ಥಾನದ ಒಳಗಡೆ ಹಾಗೂ ಹೊರಗಡೆ ಇಟ್ಟಿರುವ ಹಣತೆಗಳನ್ನು ಬೆಳಗಿಸುವ ಮೂಲಕ ತಮ್ಮಲ್ಲಿರುವ ಅಜ್ಞಾನದ ಅಂದಕಾರವ ತೊಲಗಿಸಿ ಸುಜ್ಞಾನದ ಬೆಳಕಿನ ಸಂಕೇತದ ಧನ್ಯತಾಭಾವಕ್ಕೆ ಒಳಗಾದರು.ಶ್ರೀ ಜಟಗಾ ದೇವರ ಎದುರಿನಲ್ಲಿ ಒಂದು ಬೃಹತ್ತಾದ ಕಾಲುದೀಪದಲ್ಲಿ ತುಪ್ಪದ ದೀಪವನ್ನು ಹಚ್ಚಿಡಲಾಗಿತ್ತು.ಎಲ್ಲಿ ನೋಡಿದರೂ ಹಣತೆಯ ದೀಪಗಳ ಸಾಲುಸಾಲು…ದೇವಸ್ಥಾನದ ಮೇಲೆ ಹಾಗೂ ಹೊರಭಾಗಕ್ಕೆ ಅಲಂಕರಿಸಿರುವ ವಿದ್ಯುತ್ ದೀಪಗಳಿಗೆ ತಾವೂ ಕೂಡ ಕಡಿಮೆಯಿಲ್ಲವೆನ್ನುವಂತೆ ಮಣ್ಣಿನ ಹಣತೆಯ ದೀಪಗಳು ಮುಂಜಾನೆಯವರೆಗೂ ಬೆಳಗುತ್ತಲೇ ಇದ್ದವು.

RELATED ARTICLES  ಯುನಿವರ್ಸಿಟಿ ಬ್ಲೂ ಆಗಿ ಅಂಜುಮನ್ ಕಾಲೇಜಿನ ವಿದ್ಯಾರ್ಥಿಗಳು.

ವರ್ಷಂಪ್ರತಿಯಂತೆ ಸ್ಥಳೀಯ ಯುವಕ ಯುವತಿಯರು ದೇವಸ್ಥಾನದ ಪ್ರಾಂಗಣದಲ್ಲಿ ರಚಿಸಿರುವ ಬೃಹತ್ ರಂಗೋಲಿ ಬಂದಂತಹ ಭಕ್ತಾದಿಗಳನ್ನು ಆಕರ್ಷಿಸಿ ಮನಸೂರೆಗೊಳ್ಳುತ್ತಿತ್ತು.ಇಡೀ ಶೇಡಬರಿ ಗುಡ್ಡವೇ ಬೆಳಕಿನ ಲೋಕದಲ್ಲಿ ಜಗಮಗಿಸುತ್ತಿದ್ದವು.

ರಾತ್ರಿ ಸಿಡಿಮದ್ದಿನ ಪ್ರದರ್ಶನ ಕೂಡ ನಡೆಯಿತು.ತದನಂತರ ಊರಿನ ಭಕ್ತಾದಿಗಳಿಂದ ಭಜನಾಕಾರ್ಯಕ್ರಮ ನಡೆಯಿತು.
IMG 20181209 WA0003
ಈ ಎಲ್ಲ ಕಾರ್ಯಕ್ರಮದಲ್ಲೂ ದೇವಸ್ಥಾನದ ಆಡಳಿತ ಮಂಡಳಿಯವರು,ದೀಪೋತ್ಸವ ಸಮಿತಿಯವರು ಹಾಗೂ ಅನೇಕ ಭಕ್ತಾದಿಗಳು ಹಾಜರಿದ್ದರು.

ಚಿತ್ರ ವರದಿ:
ರಾಮ ಹೆಬಳೆ

ಮೊಬೈಲ್:9964884494