ಕುಮಟಾ : ಶ್ರೀ ರಾಮನಾಥ ಪ್ರೌಢಶಾಲೆಯ ಗಣಿತ ಶಿಕ್ಷಕರಾದ ಶ್ರೀ ರಾಘವೇಂದ್ರ ಎಂ. ನಾಯ್ಕ ಇವರು ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ಕನ್ನಡ, ಕಾರವಾರ ಇವರು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ಸಹಶಿಕ್ಷಕರ ಸಹಪಠ್ಯ ಚಟುವಟಿಕೆ, ಜನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಹಾಗೂ “ಶಿಕ್ಷಣ ಜ್ಞಾನ” ಮಾಸ ಪತ್ರಿಕೆಯ 16ನೇ ವಾರ್ಷಿಕೋತ್ಸವ, ರಾಜ್ಯಮಟ್ಟದ ಶೈಕ್ಷಣ ಕ ಸಮಾವೇಶ ಅಂಗವಾಗಿ ನೀಡಲ್ಪಡುವ ಉತ್ತರ ಕನ್ನಡ ಜಿಲ್ಲೆಯ ಪ್ರೌಢಶಾಲಾ ವಿಭಾಗದ “ಜ್ಞಾನ ಸಿಂಧು” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇವರನ್ನು ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕ-ಸಿಬ್ಬಂದಿ ವರ್ಗ ಮತ್ತು ಆಡಳಿತ ಮಂಡಳಿಯವರು ಅಭಿನಂದಿಸಿರುತ್ತಾರೆ.