ಮೇಷ ರಾಶಿ
ನಿಮ್ಮ ಅಪಾರ ವಿಶ್ವಾಸ ಮತ್ತು ಸುಲಭದ ಕೆಲಸದ ವೇಳಾಪಟ್ಟಿ ಇಂದು ವಿಶ್ರಾಂತಿಗೆ ಸಾಕಷ್ಟು ಸಮಯ ನೀಡುತ್ತದೆ. ಸ್ವಲ್ಪ್ ಹೆಚ್ಚು ಹಣ ಮಾಡಲು ನಿಮ್ಮ ನವೀನ ಕಲ್ಪನೆಯನ್ನು ಬಳಸಿ. ಕೆಲವರಿಗೆ ಕುಟುಂಬದಲ್ಲಿ ಒಂದು ಹೊಸ ಆಗಮನ ಸಂಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ತೆರೆದಿಡುತ್ತದೆ. ಪ್ರೇಮಜೀವನವು ಇಂದು ನಿಮ್ಮನ್ನು ಆಶೀರ್ವದಿಸಿರುವಂತೆ ತೋರುತ್ತದೆ. ಇಂದು ನೀವು ನಿಮ್ಮ ಗಳಿಕೆಯ ಶಕ್ತಿಯನ್ನು ಹೆಚ್ಚಿಸಲು ತ್ರಾಣ ಮತ್ತು ಜ್ಞಾನವನ್ನು ಹೊಂದಿರುತ್ತೀರಿ. ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ. ಕಣ್ಣುಗಳು ಎಲ್ಲವನ್ನೂ ಹೇಳುತ್ತವೆ, ಮತ್ತು ನೀವು ಇಂದು ನಿಮ್ಮ ಸಂಗಾತಿಯ ಜೊತೆ ಕಣ್ಣಿನಲ್ಲೇ ಭಾವನಾತ್ಮಕವಾಗಿ ಮಾತನಾಡುತ್ತೀರಿ.
ವೃಷಭ ರಾಶಿ
ಕೆಲವು ಅನಿವಾರ್ಯ ಸಂದರ್ಭಗಳು ನಿಮಗೆ ಅಹಿತಕರವೆನಿಸಬಹುದು. ಆದರೆ ನೀವು ನಿಮ್ಮ ಸಮತೋಲನ ಕಾಯ್ದುಕೊಳ್ಳಬೇಕು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ತಕ್ಷಣವೇ ಪ್ರತಿಕ್ರಿಯಿಸಬಾರದು. ಬಾಕಿಯಿರುವ ವಿಷಯಗಳು ರಹಸ್ಯಮಯವಾಗುತ್ತವೆ ಮತ್ತು ವೆಚ್ಚಗಳು ನಿಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ನಿಮ್ಮ ಕುಟುಂಬದ ಜೊತೆ ಕಟ್ಟುನಿಟ್ಟಾಗಿ ವರ್ತಿಸಬೇಡಿ ಇದು ಶಾಂತಿ ಭಂಗವುಂಟುಮಾಡಬಹುದು. ನಿಮ್ಮ ಪ್ರೀತಿಪಾತ್ರರ ಸಂಗವಿಲ್ಲದೇ ನೀವು ಖಾಲಿತನವನ್ನು ಅನುಭವಿಸುತ್ತೀರಿ ವೃತ್ತಿಪರ ಗುರಿಗಳನ್ನು ಸಾಧಿಸಲು ನಿಮ್ಮ ಚೈತನ್ಯವನ್ನು ಹೊಂದಿಸಲು ಇದು ಸರಿಯಾದ ಸಮಯ. ಸಂತಸದ ಪ್ರಯಾಣ ತೃಪ್ತಿಕರವಾಗಿರುತ್ತದೆ. ಇಂದು ನಿಮ್ಮ ಸಂಗಾತಿ ನಿಮಗೆ ತನ್ನ ಅಷ್ಟೇನೂ ಉತ್ತಮವಲ್ಲದ ರೂಪವನ್ನು ತೋರಿಸಬಹುದು.
ಮಿಥುನ ರಾಶಿ
ನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು. ನಿಮ್ಮ ಸಂಗಾತಿಯ ಅನುಪಸ್ಥಿತಿ ಕಾಡುವ ಸಾಧ್ಯತೆಯಿದೆ. ನಿಮ್ಮ ಬಾಸ್ ಮತ್ತು ಹಿರಿಯರನ್ನು ನಿಮ್ಮಲ್ಲಿ ಆಮಂತ್ರಿಸಲು ಒಳ್ಳೆಯ ದಿನವಲ್ಲ. ನೀವು ಇಂದು ಮಾಡುವ ಸ್ವಯಂ ಸೇವೆಯ ಕೆಲಸ ನೀವು ಸಹಾಯ ಮಾಡುವವರಿಗೆ ಮಾತ್ರವಲ್ಲದೇ ನಮ್ಮನ್ನು ನೀವೇ ಹೆಚ್ಚು ಸಕಾರಾತ್ಮಕವಾಗಿ ನೋಡಲು ಸಹಾಯ ಮಾಡುತ್ತದೆ. ಇಂದು, ನೀವು ಮತ್ತೆ ನಿಮ್ಮ ಸಂಗಾತಿಯ ಜೊತೆ ಪ್ರೀತಿಯಲ್ಲಿ ಬೀಳುತ್ತೀರಿ.
ಕರ್ಕ ರಾಶಿ
ನಿಮ್ಮ ಅಧಿಕ ಚೈತನ್ಯದ ಹೊರತಾಗಿಯೂ ನೀವು ಇಂದು ನಿಮ್ಮೊಡನೆ ಇರಲಾರದ ಯಾರನ್ನಾದರೂ ನೆನಪಿಸಿಕೊಳ್ಳುತ್ತಿದ್ದೀರಿ. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ಇಂದು ನೀವು ಹಚ್ಚು ಪ್ರಯತ್ನ ಮಾಡಬೇಕಾಗಿ ಬಂದರೂ ಕೂಡ ಮಕ್ಕಳ ಸಂಗದಲ್ಲಿ ನಿಮ್ಮ ಬಿಡುವಿನ ಸಮಯ ಕಳೆಯಲು ಪ್ರಯತ್ನಿಸಬೇಕು. ಇಂದು ಯಾರಾದರೂ ನಿಮ್ಮ ಪ್ರೀತಿಯ ನಡುವೆ ಬರಬಹುದು. ಒಂದು ಸ್ಥಳದಲ್ಲಿ ನಿಂತಾಗ ಪ್ರೀತಿ ನಿಮ್ಮನ್ನು ಒಂದು ಹೊಸ ಜಗತ್ತಿಗೆ ತೆಗೆದುಕೊಂಡು ಹೋಗಬಹುದು. ಇದು ನೀವು ಪ್ರಣಯಭರಿತ ಪ್ರವಾಸಕ್ಕೆ ಹೋಗುವ ದಿನ. ನಿಮ್ಮ ಜೀವನದಲ್ಲಿ ನಂತರ ವಿಷಾದಿಸಬಹುದಾದ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ನಿಮ್ಮ ಸಂಗಾತಿಯು ಇಂದು ನಿಮ್ಮ ಅಗತ್ಯಗಳನ್ನು ಅಂತಿಮವಾಗಿ ಪೂರೈಸಲು ನಿರಾಕರಿಸಬಹುದು ಹಾಗೂ ಇದು ಅಂತಿಮವಾಗಿ ನಿಮ್ಮನ್ನು ನಿರಾಶೆಗೊಳಿಸುತ್ತದೆ.
ಸಿಂಹ ರಾಶಿ
ನೀವು ಪರಿಸ್ಥಿತಿಯ ನಿಯಂತ್ರಣ ಹೊಂದುತ್ತಿದ್ದಂತೆ ನಿಮ್ಮ ಆತಂಕ ಕಣ್ಮರೆಯಾಗುತ್ತದೆ. ಇದು ಧೈರ್ಯದ ಮೊದಲ ಸ್ಪರ್ಶದಲ್ಲಿ ಕುಸಿದುಹೋಗುವ ಸಾಬೂನಿನ ಗುಳ್ಳೆಯಷ್ಟೇ ಗಟ್ಟಿಯೆಂದು ನೀವು ಅರ್ಥ ಮಾಡಿಕೊಳ್ಳುತ್ತೀರಿ. ದೀರ್ಘಕಾಲದ ಲಾಭಗಳಿಗೆ ಸ್ಟಾಕ್ಗಳು ಮತ್ತು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದನ್ನು ಶಿಫಾರಸು ಮಾಡಲಾಗಿದೆ. ನಿಮ್ಮ ಸಂಗಾತಿಯ ಸಂಗದಲ್ಲಿ- ಆರಾಮ ಮತ್ತು ಪ್ರೀತಿಯನ್ನು ಪಡೆಯಿರಿ. ನಿಮ್ಮ ಪ್ರೇಮ ಪ್ರಕರಣದ ಬಗ್ಗೆ ಜೋರಾಗಿ ಹೇಳಿಕೊಳ್ಳಬೇಡಿ. ವೃತ್ತಿಯಲ್ಲಿ ನಿಮ್ಮ ಲೆಕ್ಕಾಚಾರ ಹಾಕಿದ ಕ್ರಮಗಳು ಪ್ರತಿಫಲ ತರುತ್ತವೆ. ಇದು ಸಮಯಕ್ಕೆ ಸರಿಯಾಗಿ ಯೋಜನೆಯನ್ನು ಪೂರ್ಣಗೊಳಿಸಲು ನಿಮಗೆ ಅವಕಾಶ ನೀಡುತ್ತದೆ. ಇದು ಹೊಸ ಯೋಜನೆಗಳನ್ನು ತೆಗೆದುಕೊಳ್ಳಲೂ ಸರಿಯಾದ ಸಮಯ. ಹೆಚ್ಚಿನ ವಿಷಯಗಳು ನೀವು ಬಯಸಿದಂತೆ ಅಗುವ –ಒಂದು ಉಜ್ವಲವಾದ ಹಾಸ್ಯದಿಂದ ತುಂಬಿದ ದಿನ. ನಿಮ್ಮ ಸಂಗಾತಿಯು ಇಂದು ನಿಮ್ಮ ಅಗತ್ಯಗಳನ್ನು ಅಂತಿಮವಾಗಿ ಪೂರೈಸಲು ನಿರಾಕರಿಸಬಹುದು ಹಾಗೂ ಇದು ಅಂತಿಮವಾಗಿ ನಿಮ್ಮನ್ನು ನಿರಾಶೆಗೊಳಿಸುತ್ತದೆ.
ಕನ್ಯಾ ರಾಶಿ
ಇಂದು ನೀವು ಚೈತನ್ಯಯುಕ್ತವಾಗಿರುತ್ತೀರಿ – ನೀವೇನೇ ಮಾಡಿದರೂ ಸಾಮಾನ್ಯವಾಗಿ ನೀವು ತೆಗೆದುಕೊಳ್ಳುವ ಅರ್ಧ ಸಮಯದಲ್ಲಿ ಅದನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ. ಸ್ವಲ್ಪ್ ಹೆಚ್ಚು ಹಣ ಮಾಡಲು ನಿಮ್ಮ ನವೀನ ಕಲ್ಪನೆಯನ್ನು ಬಳಸಿ. ನಿಮ್ಮ ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡಿ. ನಿಮ್ಮ ಕಾರ್ಯಗಳು ದುರಾಶೆಯಿಂದಲ್ಲದೇ ಪ್ರೀತಿ ಮತ್ತು ಸಕಾರಾತ್ಮಕ ದೃಷ್ಟಿಯಿಂದ ನಡೆಯಬೇಕು. ಚಿಂತಿಸಬೇಡಿ, ನಿಮ್ಮ ದುಃಖ ಇಂದು ಮಂಜುಗಡ್ಡೆಯ ಹಾಗೆ ಕರಗುತ್ತದೆ. ನೀವು ಇಂದು ಪಡೆದ ಹೆಚ್ಚುವರಿ ಜ್ಞಾನವು ಸಮಕಾಲೀನರೊಂದಿಗೆ ವ್ಯವಹರಿಸುವಾಗ ನಿಮಗೆ ಸಹಾಯ ಮಾಡುತ್ತದೆ. ಇಂದು ವಿಷಯಗಳು ನೀವು ಬಯಸುವ ರೀತಿಯಲ್ಲಿ ನಡೆಯದ ದಿನಗಳಲ್ಲಿ ಒಂದು. ಇತ್ತೀಚಿಗೆ ಸಂಭವಿಸಿದ ಕೆಟ್ಟ ಪರಿಸ್ಥಿತಿಗಳ ಹೊರತಾಗಿಯೂ ಇಂದು ನಿಮ್ಮ ಜೀವನ ಸಂಗಾತಿ ನಿಮ್ಮ ಬಗ್ಗೆ ಒಳ್ಳೆಯ ಭಾವನೆಗಳನ್ನು ಪ್ರದರ್ಶಿಸುತ್ತಾರೆ.
ತುಲಾ ರಾಶಿ
ನೀವು ಪ್ರಯಾಣಿಸಲು ತುಂಬಾ ದುರ್ಬಲರಾಗಿದ್ದರಿಂದ ದೀರ್ಘ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ. ಹೆಚ್ಚು ಖರೀದಿಸಲು ಧಾವಿಸುವ ಮೊದಲು ನೀವು ಈಗಾಗಲೇ ಹೊಂದಿರುವುದನ್ನು ಬಳಸಿ. ನಿಮ್ಮ ಅಸಡ್ಡೆಯ ವರ್ತನೆ ಪೋಷಕರನ್ನು ಚಿಂತೆಗೀಡು ಮಾಡಬಹುದು. ನೀವು ಯಾವುದೇ ಹೊಸ ಯೋಜನೆಯನ್ನು ಆರಂಭಿಸುವ ಮೊದಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು. ಪ್ರೇಮಿಗಳು ಕುಟುಂಬದ ಭಾವನೆಗಳ ಬಗ್ಗೆ ತುಂಬ ಕಾಳಜಿ ಹೊಂದಿರುತ್ತಾರೆ. ಇದು ನಿಮ್ಮನ್ನು ವ್ಯಕ್ತಪಡಿಸಲು ಮತ್ತು ಸೃಜನಶೀಲ ಸ್ವರೂಪದ ಯೋಜನೆಗಳಲ್ಲಿ ಕೆಲಸ ಮಾಡಲು ಒಳ್ಳೆಯ ಸಮಯ. ಯಾವುದಾದರೂ ಪ್ರಯಾಣದ ಯೋಜನೆಗಳಿದ್ದಲ್ಲಿ- ನಿಮ್ಮ ವೇಳಾಪಟ್ಟಿಯಲ್ಲಿ ಕೊನೆಗಳಿಗೆಯ ಬದಲಾವಣೆಗಳಿಂದ ಮುಂದೂಡಲ್ಪಡುತ್ತವೆ. ನಿಮ್ಮ ಸುತ್ತಲಿರುವ ಜನರು ಏನಾದರೂ ಮಾಡಿ ನಿಮ್ಮ ಜೀವನ ಸಂಗಾತಿ ಮತ್ತೆ ನಿಮ್ಮ ಜೊತೆ ಪ್ರೇಮದಲ್ಲಿ ಬೀಳುವಂತೆ ಮಾಡಬಹುದು.
ವೃಶ್ಚಿಕ ರಾಶಿ
ಇಂದು ನೀವು ಆರಾಮವಾಗಿರುವ ಭಾವನೆ ಹೊಂದಿರುತ್ತೀರಿ ಮತ್ತು ಆನಂದಿಸಲು ಸೂಕ್ತ ಮನೋಭಾವದಲ್ಲಿರುತ್ತೀರಿ. ನಿಮ್ಮ ಸಮರ್ಪಣೆ ಮತ್ತು ಶ್ರಮವನ್ನು ಗಮನಿಸಲಾಗುತ್ತದೆ ಮತ್ತು ಇಂದು ನಿಮಗೆ ಸ್ವಲ್ಪ ಆರ್ಥಿಕ ಪ್ರತಿಫಲಗಳನ್ನು ತರುತ್ತದೆ. ಹಳೆಯ ಸಂಪರ್ಕಗಳು ಮತ್ತು ಸಂಬಂಧಗಳ ಪುನಶ್ಚೇತನಕ್ಕೆ ಒಳ್ಳೆಯ ದಿನ. ಪ್ರಣಯ ನಿಮ್ಮ ಹೃದಯ ಮತ್ತು ಮನಸ್ಸನ್ನು ಆಳುತ್ತದೆ. ಕೈಕೆಳಗಿನವರು ಅಥವಾ ಸಹೋದ್ಯೋಗಿಗಳು ಹೆಚ್ಚು ಉಪಯುಕ್ತರಾಗಿರುತ್ತಾರೆ. ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳಲು ಹಿಂಜರಿಯದಿರಿ. ನಿಮ್ಮ ಸಂಗಾತಿ ಇಂದು ಅವರ ದೈವೀಕ ಬದಿಯನ್ನು ನಿಮಗೆ ತೋರಿಸುತ್ತಾರೆ.
ಧನು ರಾಶಿ
ನಿಮಗೇನು ಒಳ್ಳೆಯದೆಂದು ನಿಮಗೆ ಮಾತ್ರ ಗೊತ್ತು – ಆದ್ದರಿಂದ ಧೃಢವಾಗಿರಿ ಮತ್ತು ಧೈರ್ಯಶಾಲಿಗಳಾಗಿರಿ ಮತ್ತು ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಿ ಹಾಗೂ ಫಲಿತಾಂಶಗಳಿಗೆ ಸಿದ್ಧವಾಗಿರಿ. ನೀವು ಕಮಿಷನ್ಗಳಿಂದ – ಡಿವಿಡೆಂಡ್ಗಳಿಂದ- ಅಥವಾ ರಾಯಧನಗಳಿಂದ ಪ್ರಯೋಜನ ಪಡೆಯುತ್ತೀರಿ. ನಿಮ್ಮ ಮಗುವಿನ ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಮಂತ್ರಣ ಸಂತೋಷದ ಮೂಲವಾಗಬಹುದು. ಅವನು(ಳು) ನಿಮ್ಮ ನಿರೀಕ್ಷೆಗಳನ್ನು ಪೂರೈಸುವುದು ನಿಮ್ಮ ಕನಸನ್ನು ನನಸಾಗಿಸಬಹುದು. ಇಂದು ನಿಮ್ಮ ಪ್ರೇಮಿಯನ್ನು ನಿರಾಸೆಗೊಳಿಸಬೇಡಿ – ಇದು ನಂತರ ನಿಮ್ಮನ್ನು ಪಶ್ಚಾತ್ತಾಪಗೊಳ್ಳುವಂತೆ ಮಾಡುತ್ತದೆ. ಯಶಸ್ಸು ಖಂಡಿತವಾಗಿಯೂ ನಿಮ್ಮದಾಗಿದೆ – ನೀವು ಒಂದು ಬಾರಿ ಒಂದೇ ಹೆಜ್ಜೆಯಿಟ್ಟರೆ ಇದು ಪ್ರಮುಖ ಬದಲಾವಣೆ ತರುತ್ತದೆ. ಪ್ರಯಾಣಿಸುತ್ತಿದ್ದಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಳ್ಳುತ್ತೀರೆಂದು ಖಚಿತಪಡಿಸಿಕೊಳ್ಳಿ. ಮದುವೆ ಕೇವಲ ಒಂದೇ ಸೂರಿನಡಿ ವಾಸಿಸುವುದು ಮಾತ್ರವಲ್ಲ. ನಿಮ್ಮ ಸಂಗಾತಿಯ ಜೊತೆ ಸ್ವಲ್ಪ ಸಮಯ ಕಳೆಯುವುದೂ ಬಹಳ ಮುಖ್ಯವಾಗಿದೆ.
ಮಕರ ರಾಶಿ
ತುಂಬಾ ಉತ್ಸಾಹ ಮತ್ತು ಸ್ಫೋಟಕ ಭಾವೋದ್ರೇಕಗಳು ನಿಮ್ಮ ನರಮಂಡಲಕ್ಕೆ ಹಾನಿ ಮಾಡಬಹುದು. ಇದನ್ನು ತಪ್ಪಿಸಲು ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಹಣಕಾಸಿನಲ್ಲಿ ಸುಧಾರಣೆ ದೀರ್ಘಕಾಲದಿಂದ ಬಾಕಿಯಿರುವ ನಿಮ್ಮ ಬಾಕಿಗಳು ಮತ್ತು ಬಿಲ್ಲುಗಳನ್ನು ಪಾವತಿಸುವುದನ್ನು ಅನುಕೂಲಕರವಾಗಿಸುತ್ತದೆ. ನಿಮ್ಮ ಕುಟುಂಬ ಸದಸ್ಯರೆಡೆಗೆ ನಿಮ್ಮ ಸರ್ವಾಧಿಕಾರಿ ಧೋರಣೆ ಕೇವಲ ಅನುಪಯುಕ್ತ ವಾದಗಳನ್ನು ಪ್ರಾರಂಭಿಸುತ್ತದೆ ಮತ್ತು ಇದು ಟೀಕೆಯನ್ನೂ ತರಬಹುದು. ನಿಮ್ಮ ಉತ್ಸಾಹ ನಿಮ್ಮ ಪ್ರೀತಿಯನ್ನು ಸಂಕಟಕ್ಕೆ ಸಿಲುಕಿಸಹುದಾದ್ದರಿಂದ ಅದನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಕೈಗೊಂಡ ಹೊಸ ಕಾರ್ಯಯೋಜನೆಗಳು ನಿಮ್ಮ ನಿರೀಕ್ಷೆಗಳನ್ನು ತಲುಪುವುದಿಲ್ಲ. ಹೆಚ್ಚಿನ ವಿಷಯಗಳು ನೀವು ಬಯಸಿದಂತೆ ಅಗುವ –ಒಂದು ಉಜ್ವಲವಾದ ಹಾಸ್ಯದಿಂದ ತುಂಬಿದ ದಿನ. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ನಿಮಗನಿಸಬಹುದು, ಆದರೆ ಕೊನೆಯಲ್ಲಿ ಅವರು ನಿಮಗಾಗಿಯೇ ವ್ಯವಸ್ಥೆಗಳನ್ನು ಮಾಡುತ್ತಿದ್ದರೆಂದು ನಿಮಗೆ ಅರಿವಾಗುತ್ತದೆ.
ಕುಂಭ ರಾಶಿ
ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಬೇಕು. ಹಳೆಯ ಸಂಬಂಧಿಗಳು ಅವಿವೇಕದ ಬೇಡಿಕೆಗಳನ್ನು ಮಾಡುವ ಸಾಧ್ಯತೆಯಿದೆ. ನಿಮ್ಮ ಕಣ್ಣುಗಳು ಅದೆಷ್ಟು ಪ್ರಕಾಶಮಾನವಾಗಿವೆಯೆಂದರೆ ಅವು ನಿಮ್ಮ ಪ್ರೇಮಿಯ ಕಾಳರಾತ್ರಿಯನ್ನು ಬೆಳಗಬಹುದು. ನೌಕರರೊಡನೆ – ಸಹೋದ್ಯೋಗಿಗಳು ಮತ್ತು ಸಹಭಾಗಿಗಳೊಂದಿಗೆ ತೊಂದರೆಗಳ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಜಾಗ್ರತೆಯ ನಡವಳಿಕೆಗಳಿರಬಹುದಾದ ಒಂದು ದಿನ – ಇಲ್ಲಿ ನಿಮ್ಮ ಮನಸ್ಸಿಗಿಂತ ನಿಮ್ಮ ಹೃದಯದ ಅಗತ್ಯ ಹೆಚ್ಚಿರುತ್ತದೆ. ಇಂದು, ನೀವು ಮತ್ತೆ ನಿಮ್ಮ ಸಂಗಾತಿಯ ಜೊತೆ ಪ್ರೀತಿಯಲ್ಲಿ ಬೀಳುತ್ತೀರಿ.
ಮೀನ ರಾಶಿ
ಗಾಯಗೊಳ್ಳುವುದನ್ನು ತಪ್ಪಿಸಲು ಕುಳಿತುಕೊಳ್ಳುವಾಗ ವಿಶೇಷ ಕಾಳಜಿ ವಹಿಸಿ. ಅಲ್ಲದೇ ಒಳ್ಳೆಯ ನಿಲುವು ಕೇವಲ ನಿಮ್ಮ ವ್ಯಕ್ತಿತ್ವವನ್ನು ವೃದ್ದಿಸುವುದಷ್ಟೇ ಅಲ್ಲದೇ ಆರೋಗ್ಯ ಮತ್ತು ವಿಶ್ವಾಸಾರ್ಹತೆಯನ್ನು ಅಭಿವೃದ್ಧಿಪಡಿಸುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ಥಿಯೇಟರ್ ಅಥವಾ ನಿಮ್ಮ ಸಂಗಾತಿಯ ಜೊತೆಗಿನ ಊಟ ನಿಮ್ಮನ್ನು ಒಂದು ಶಾಂತವಾದ ಮತ್ತು ಅದ್ಭುತ ಲಹರಿಯಲ್ಲಿರಿಸುವಂತೆ ತೋರುತ್ತದೆ. ದೀರ್ಘಕಾಲದ ನಂತರ ನಿಮ್ಮ ಸ್ನೇಹಿತರಿಗೆ ಸಂಧಿಸುವ ವಿಚಾರ ನಿಮ್ಮ ಮನಸ್ಸಿನೆಲ್ಲೆಡೆ ತುಂಬಿರುತ್ತದೆ. ಸ್ನೇಹಿತರ ಅಮೂಲ್ಯ ಬೆಂಬಲ ವೃತ್ತಿಪರ ವಿಷಯಗಳಲ್ಲಿ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ನೀವು ನಿಮ್ಮ ಸಂಗಾತಿಯ ಜೊತೆಗಿನ ಕಳೆದ ಸುಂದರ ಪ್ರಣಯದ ದಿನಗಳನ್ನು ಇಂದು ನೆನೆಸುತ್ತೀರಿ.