ಕುಮಟಾ: ರಾಮ ಎಂದರೆ ಪ್ರೇಮ ಮೂರ್ತಿ, ತನ್ನ ರಾಜ್ಯದ ಒಬ್ಬ ಪ್ರಜೆಗೆ ನೋವಾದರೆ ತಾನೂ ನೋವು ಪಡುತ್ತಿದ್ದ, ಪ್ರಜೆಗೆ ಸಂತಸವಾದರೆ ತಾನೂ ಸಂತಸ ಪಡುತ್ತಿದ್ದ ಅಂತಹ ರಾಮನ ಮಂದಿರ ನಿರ್ಮಾಣವಾಗಬೇಕು. ಶ್ರೀ ರಾಮ ಜನ್ಮಸ್ಥಾನದಲ್ಲಿ ಭವ್ಯ ಮಂದಿರ ನಿರ್ಮಾಣ ವು ಕೋಟ್ಯಾಂತರ ಹಿಂದೂಗಳ ಶ್ರದ್ಧೆ ನಂಬಿಕೆ ಮಹಾದಾಸೆ ಹೆಮ್ಮೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿದ್ದು ಕೇಂದ್ರ ಸರಕಾರವು ಮಂದಿರ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಮಸೂದೆ ತರಬೇಕೆಂದು.

  ಜನಾಗ್ರಹ ಸಭೆಯನ್ನು ರಾಮಮಂದಿರ ನಿರ್ಮಾಣಕ್ಕೆ ಸುಗ್ರಿವಾಜ್ಞೆ ತರಲು ಆಯೋಜನೆ ಮಾಡಲಾಗಿದೆ. ಸಂಘಪರಿವಾರದವರು ರಾಮಮಂದಿರ ಕಟ್ಟಲು ಸಿದ್ಧರಿದ್ದಾರೆ‌. ಸುಗ್ರೀವಾಜ್ಞೆ ತರಲು ಕೇಂದ್ರ ಸರ್ಕಾರ ಸಿದ್ಧವಾಗಬೇಕು ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ಕುಮಟಾದ ಮಣಕಿ ಮೈದಾನದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಮಾತನಾಡಿ, ರಾಮಮಂದಿರ ವಿಚಾರ ನಿನ್ನೆ ಮೊನ್ನೆಯದಲ್ಲ. ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಾಗೆಯೇ ಈಗಲೂ ಜನಾಂದೋಲನ ನಡೆಯುತ್ತಿದೆ. ಆದರೆ ಈ ನಡುವೆ ಚುನಾವಣೆ ಬಂದಿವೆ ಅಷ್ಟೆ. ನ್ಯಾಯಾಲಯಗಳು ಹಿಂದೂ ಸಮಾಜದ ಭಾವನೆಗೆ ಗೌರವ ಕೊಡಬೇಕು. ನ್ಯಾಯಾಧೀಶರಿಗೆ ರಾಮಮಂದಿರ ನಿರ್ಮಾಣ ವಿಚಾರ ಆದ್ಯತೆಯಾಗಿಲ್ಲ. ಇದು ರಾಮನಿಗೆ, ಹಿಂದೂಗಳಿಗೆ ಮಾಡಿದ ಅವಮಾನ ಎಂದರು.

RELATED ARTICLES  ಕಂಗೊಳಿಸುತ್ತಿದೆ ಮಿರ್ಜಾನ್ ಕೋಟೆ: ಸೂಕ್ತ ರಸ್ತೆ ನಿರ್ಮಾಣವಾಗಲೆಂದು ಆಶಿಸುತ್ತಿದೆ ಜನತೆ.

ವಿಚಾರಣೆ ಮುಗಿದು ತೀರ್ಪು ಬರುವ ಮುನ್ನ ಅಪರಾಧಿಗಳು ಮರಣ ಹೊಂದುತ್ತಿದ್ದಾರೆ. ಹೀಗಾಗಿ ನ್ಯಾಯಾಲಯ ಪ್ರಕ್ರಿಯೆಯಲ್ಲಿ ಪರಿವರ್ತನೆ ಆಗಬೇಕು. ನನಗೆ 85 ವರ್ಷ. ರಾಮಮಂದಿರದಲ್ಲಿ ರಾಮನನ್ನು ದರ್ಶನ ಮಾಡುತ್ತೇನೊ ಇಲ್ಲವೋ ಗೊತ್ತಿಲ್ಲ. ಸಂತರು, ಮಠಾಧೀಶರು ಯಾವುದೇ ರಾಜಕೀಯ ಪಕ್ಷದ ವಿರುದ್ಧ ಧ್ವನಿ ಎತ್ತಿಲ್ಲ. ಕ್ರಿಶ್ಚಿಯನ್, ಮುಸ್ಲಿಮರು ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಬೇಕು. ಅವರು ಬೆಂಬಲ ನೀಡಿದರೆ ದೇಶದಲ್ಲಿ ಹಿಂದು-ಮುಸ್ಲಿಂ ನಡುವೆ ಬಹು ದೊಡ್ಡ ಸೌಹಾರ್ದತೆ ಬೆಳೆಯುತ್ತದೆ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಲೋಕಸಭೆ ಮತ್ತು ರಾಜ್ಯಸಭೆಯ ಸಂಯುಕ್ತ ಸಭೆ ಕರೆದು, ಪ್ರಧಾನಿ ಮೋದಿ ದೇಶದ ಸಂತರ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಸಭೆ ನಡೆಸದಿದ್ದರೆ ಸಂತರು ಉಪವಾಸ ಕುಳಿತುಕೊಳ್ಳೋಣ. ರಾಮಮಂದಿರ ನಿರ್ಮಿಸಲು ಎಂತಹ ತ್ಯಾಗಕ್ಕಾದೂ ಸಿದ್ಧರಾಗೋಣ. ನಾವು ಕೋಮುವಾದಿಗಳಲ್ಲ, ಪ್ರೇಮವಾದಿಗಳು. ನಾವು ಯಾರನ್ನು ದ್ವೇಷಿಸಲ್ಲ ಎಂದು ಹೇಳಿದರು.

RELATED ARTICLES  ಉತ್ತರಕನ್ನಡದಲ್ಲಿ ಒಂದು ಕೊರೋನಾಕ್ಕೆ ಓರ್ವ ಸಾವು : 225 ಕೋವಿಡ್ ಕೇಸ್..!

ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಯವರಿಗೆ ಮನವಿ ಪತ್ರವನ್ನು ಇದೇ ಸಂದರ್ಭದಲ್ಲಿ ಸಲ್ಲಿಸಲಾಯಿತು. ಹಾಜರಿದ್ದ ಸಂತರುಗಳು ಪೇಜಾವರ ಶ್ರೀಗಳ ಜೊತೆಗೆ ರಾಮ ಮಂದಿರ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.

IMG 20181210 WA0001
ಈ ಸಂದರ್ಭದಲ್ಲಿ ಕಾರವಾರ- ಅಂಕೊಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಾಲಿ ನಾಯ್ಕ, ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ , ಬಿಜೆಪಿ ಪ್ರಮುಖ ಸುನೀಲ್ ಹೆಗಡೆ, ಕೆ.ಜೆ ನಾಯ್ಕ, ಕೃಷ್ಣಾ ಎಳಸೆ, ವಿ ಎಸ್ ಪಾಟೀಲ್, ಪ್ರಮೋದ್ ಹೆಗಡೆ ಇನ್ನಿತರ ಪ್ರಮುಖರು ಹಾಜರಿದ್ದರು.ಸಾವಿರಾರು ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.