ಕುಮಟಾ : ಪ್ರಾದೇಶಿಕ ಸಂವೇದನೆಗಳನ್ನು ಸೂಕ್ಷ್ಮವಾಗಿ ಅನುಭವಿಸಿ ಬರೆದರೂ ಜಗದ ವಾಸ್ತವಿಕತೆಗೆ ವಿಸ್ತಾರಗೊಳ್ಳುವಂತೆ ಕತೆಗಳಲ್ಲಿ ಪ್ರಾದೇಶಿಕ ಪರಿಸರದ ಪರಿಮಳದೊಂದಿಗೆ ಹೆಣ್ಣೊಂದರ ಹೃದಯ ಸಾಕ್ಷಿಯೂ ಇದೆ ಎಂದು ಕತೆಗಾರ ಡಾ.ಶ್ರೀಧರ ಬಳಗಾರ ಅಭಿಪ್ರಾಯಪಟ್ಟರು.

ಇಲ್ಲಿನ ಗಿಬ್ ರಾಜೇಂದ್ರಪ್ರಸಾದ್ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ವಸ್ತಿ ಸಾಹಿತ್ಯ ಸಂಭ್ರಮ 2018 ಕಾರ್ಯಕ್ರಮದಲ್ಲಿ ಪ್ರಿಯಾ ಭಟ್ಟ ಕಲ್ಲಬ್ಬೆ ಅವರ ಕತೆಗಳ ಸಂಕಲನ ‘ನಾನೊಂದು ಹುಚ್ಚುಹೊಳೆ’ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

RELATED ARTICLES  ಮೂತ್ರ ವಿಸರ್ಜನೆಗೆ ಎಂದು ಹೋದ ಸಮಯದಲ್ಲಿ ಬೈಕ್ ನಲ್ಲಿದ್ದ ಮೊಬೈಲ್ ಕಳ್ಳತನ.

ಪುರುಷ ನಿರ್ಮಿತ ಸ್ತ್ರೀ ಪ್ರತಿಮೆಗಳ ನಿರಾಕರಣೆ ಹಾಗೂ ಆಧುನಿಕ ಕಾಲದ ಪರಿವರ್ತನಿಯ ಜಗತ್ತಿನೊಂದಿಗೆ ಕಟ್ಟಿಕೊಳ್ಳುವ ಕತೆಗಳ ಗುಚ್ಛವಾಗಿ ಈ ಸಂಕಲನ ಹೊರಹೊಮ್ಮಿದೆ ಎಂದರು.

ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಜೆ.ಡಿ. ಭಟ್ಟ ಕೆಕ್ಕಾರು ಮಾತನಾಡಿದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಉಮೇಶ ಮಂಡಲ್ಲಿ ಪುಸ್ತಕ ಪರಿಚಯಿಸಿದರು. ಎಂ.ಐ. ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು.ಸ್ವಸ್ತಿ ಪ್ರಕಾಶನದ ವಿನಾಯಕ ಭಾಗವತ್ ಸ್ವಾಗತಿಸಿದರು ಮತ್ತು ರಾಘವೇಂದ್ರ ಭಟ್ಟ ನಿರೂಪಿಸಿದರು ಸ್ವಸ್ತಿ ಬಳಗದ ಶ್ರೀ ಈಶ್ವರ್ ಭಟ್ಟ ವಂದಿಸಿದರು ದಿನೇಶ್ ಭಟ್ಟ ಶ್ರೀ ಅರುಣ್ ನಾಯ್ಕ್ ಮತ್ತಿತರು ಸಹಕರಿಸಿರು ಸ್ವಸ್ತಿ ಸಂಭ್ರಮದ ಅಂಗವಾಗಿ ಕರಕುಶಲ ವಸ್ತು ಪ್ರದರ್ಶನ ಕವಿಗೋಷ್ಠಿ ಜರುಗಿದವು.

RELATED ARTICLES  ವೃಕ್ಷಮಾತೆ ತುಳಸಿ ಗೌಡರಿಗೆ ಗೌರವ ಡಾಕ್ಟರೇಟ್.