ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಇರುವ ವಿವಿಧ ಸಮಾಜಮುಖೀ ಯೋಜನೆಗಳಲ್ಲಿ ಒಂದಾದ ಕಾಮದುಘಾ ವಿಭಾಗದನ್ವಯ ಕಾರ್ಯವೆಸಗುತ್ತಾ ಇರುವ ಪೆರ್ಲ ಬಜಕುಡ್ಲು ಅಮೃತಧಾರಾ ಗೋಶಾಲೆಗೆ ಮೇವು ಪೂರೈಸುವ ವಿಶಿಷ್ಟ ಕಾರ್ಯ ” ಸೇವಾಅರ್ಘ್ಯ, ಗೋವಿಗಾಗಿ ಮೇವು ” ಶ್ರಮದಾನವು ಶ್ರೀಶಂಕರಧ್ಯಾನಮಂದಿರ ಪೊಸಡಿಗುಂಪೆಯಲ್ಲಿ ದಿನಾಂಕ 09.12.2018 ರಂದು ಭಾನುವಾರ ಬಹಳ ವಿಜೃಂಭಣೆಯಿಂದ ಸಂಪನ್ನವಾಯಿತು.

ಗುಂಪೆ ವಲಯದ ಅಧ್ಯಕ್ಷ ಅಮ್ಮಂಕಲ್ಲು ರಾಮಭಟ್ಟರು ಗೋಮಾತೆಗೆ ಗೋಗ್ರಾಸ ನೀಡುವಮೂಲಕ ಸೇವಾ ಅರ್ಘ್ಯ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು. ಕಾಮದುಘಾ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿಯವರು ಧ್ಜಜರೋಹಣ ಮಾಡಿದರು. ಗುರುವಂದನೆ, ಗೋಸ್ತುತಿಯಂದಿಗೆ ಸೇವಾ ಅರ್ಘ್ಯ ಪ್ರಾರಂಭವಾಯಿತು. ಮುಳ್ಳೇರ್ಯ ಹವ್ಯಕ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ಟ ಸರ್ಪಮಲೆ, ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಸಂಸ್ಕಾರ ವಿಭಾಗ ಪ್ರಧಾನ ನವನೀತ ಪ್ರಿಯ ಕೈಪ್ಪಂಗಳ, ಮಂಡಲ ವಿದ್ಯಾರ್ಥಿವಾಹಿನೀ ಪ್ರಧಾನ ಕೇಶವಪ್ರಸಾದ ಎಡಕ್ಕಾನ, ಸೇವಾ ವಿಭಾಗ ಪ್ರಧಾನ ಬಾಲಸುಬ್ರಹ್ಮಣ್ಯ ಭಟ್ ಪರಪ್ಪೆ, ಸಹಾಯ ವಿಭಾಗ ಪ್ರಧಾನ ಡಾ ಡಿ ಪಿ ಭಟ್, ವೃತ್ತಿನಿರತ ವಿಭಾಗ ವೈ.ಕೆ.ಗೋವಿಂದ ಭಟ್, ಮಾತೃ ವಿಭಾಗ ಪ್ರಧಾನೆ ಕುಸುಮಾ ಪೆರ್ಮುಖ, ಮುಷ್ಠಿ ಭಿಕ್ಷಾ ಪ್ರಧಾನೆ ಗೀತಾಲಕ್ಷ್ಮೀ, ಮಹಾಮಂಡಲ ಉಲ್ಲೇಖ ವಿಭಾಗ ಪ್ರಧಾನ ಬಳ್ಳಮೂಲೆ ಗೋವಿಂದ ಭಟ್ಟ, ಶಾಮ ಭಟ್ ಬೇರ್ಕಡವು, ವಿವಿಧ ವಲಯದ ಪದಾಧಿಕಾರಿಗಳು, ಗೋಪ್ರೇಮಿಗಳು ಭಾಗವಹಿಸಿದ್ದರು. 10 ಖಟಾವು ಯಂತ್ರ,10 ಮಂದಿ ವಿದ್ಯಾರ್ಥಿಗಳ ಸಹಿತ 115 ಮಂದಿ ಗೋಕಿಂಕರರು ಭಾಗವಹಿಸಿದ್ದರು.
ಕಾರ್ಯಕ್ರಮದ ಪೂರ್ವಭಾವೀ ತಯಾರಿಗಾಗಿ ದಿನಾಂಕ 08. 12. 2018 ರಂದು ಪೊಸಡಿಗುಂಪೆಯಲ್ಲಿ ಹವ್ಯಕ ಮಹಾ ಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು ಇವರ ನೇತೃತ್ವದಲ್ಲಿ ಶ್ರಮದಾನ ಚಾಲನೆ ಗೊಂಡಿತು.

RELATED ARTICLES  “ಕನ್ನಡ ತಾಯಿ ಮಕ್ಕಳು” ಹಾಡೊಂದರ ಟೀಸರ್ ಲಾಂಚ್ ಗೆ ಕ್ಷಣ ಗಣನೆ : ಸಂಜೆ 6 ಗಂಟೆಗೆ ನಡೆಯಲಿದೆ ಕಾರ್ಯಕ್ರಮ

ಈ ಶುಭಕಾರ್ಯಕ್ಕೆ ಶ್ರೀ ಸಂಸ್ಥಾನದವರು ಅನುಗ್ರಹಿಸಿದ ಸಂದೇಶವು ಸರ್ವ ಕಾರ್ಯಕರ್ತರಲ್ಲಿ ವಿಶೇಷ ಚೈತನ್ಯವನ್ನು ಉಂಟುಮಾಡಿತು.

ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಂದೇಶ :

ಹಸಿದವನ ಹಸಿವು ನೀಗುವುದಕ್ಕೆ ಸಮನಾದ ಪುಣ್ಯಕಾರ್ಯ ಮತ್ತೊಂದಿಲ್ಲ. ಪ್ರಾಜ್ಞರು ” ಅನ್ನದಾನಂ ಪರಂದಾನ೦ ” ಎಂದು ಘೋಷಣೆ ಮಾಡಿದ್ದಾರೆ. ಇದು ಮನುಷ್ಯರ ಮಾತಾಯಿತು. ಗೋವುಗಳು ….
ಮನುಷ್ಯರಿಗೆ ಅನ್ನದಾನ ಮಾಡಿದರೆ ಹೇಗೆ ಪುಣ್ಯವಿದೆಯೋ ಹಾಗೆಯೇ ಗೋವುಗಳ ಹಸಿವು ನೀಗುವ ಕಾರ್ಯ ಮಾಡಿದರೆ ಪುಣ್ಯ ಎಷ್ಟಿರಬಹುದು ಎಂದರೆ ದೊಡ್ಡ ಪುಣ್ಯವಿದೆ. ಇದಕ್ಕಿಂತ ಹೆಚ್ಚು ಪುಣ್ಯವಿದೆ. ಯಾಕೆಂದರೆ ಮನುಷ್ಯನಿಗಿಂತ ಎಂದೂ ಗೋವು ಶ್ರೇಷ್ಠ. ಹಾಗಾಗಿ ಮನುಷ್ಯನಿಗೆ ಮಾಡಿದ ಅನ್ನದಾನ ಪುಣ್ಯಪ್ರದವಾದರೂ ಕೂಡ ಅದಕ್ಕಿಂತ ಹೆಚ್ಚಿನ ಪುಣ್ಯ ಗೋವುಗಳ ಹಸಿವು ನೀಗಿಸಲು ಸಹಕಾರ ಮಾಡಿದರೆ ಗೋವುಗಳಿಗೆ ಮೇವು ನೀಡಿದರೆ ಇದೆ.

ಹೌದು…. ಬಜಕೂಡ್ಲು.. ಅಲ್ಲಿ ಪರಿಶುದ್ಧವಾದ ಭಾರತೀಯ ತಳಿಯ ಗೋವುಗಳಿದಾವೆ. ಸಮೀಪದ ಗುಂಪೆಗುಡ್ಡೆಯಲ್ಲಿ ಸಹಜವಾದ ಸಮೃಧ್ದವಾದ ಪರಿಶುದ್ಧವಾದ ಮೇವಿದೆ. ನಡುವೆ ಸೇತುವೆ ನಾವಾಗಬೇಕು.
ನಾಳೆ ಬೆಳಗ್ಗಾದರೆ ” ಸೇವಾಅರ್ಘ್ಯ “. ಗುಂಪೆಗುಡ್ಡೆಯ ಹುಲ್ಲನ್ನು ಬಜಕೂಡ್ಲಿನ ಗೋವುಗಳಿಗೆ ತಂದೊಪ್ಪಿಸತಕ್ಕಂತಹ ಒಂದು ಅರ್ಥಪೂರ್ಣವಾಗಿರುವಂಥ ಕಾರ್ಯಕ್ರಮ. ಹಾಗಾಗಿ ಹೃದಯವುಳ್ಳವರೆಲ್ಲರೂ, ಗೋಪ್ರೇಮಿಗಳು, ಧರ್ಮಪ್ರೇಮಿಗಳು ಮತ್ತು ಮನುಷ್ಯತ್ವದ ಪ್ರೇಮಿಗಳು ಎಲ್ಲರೂ ಕೂಡ ಈ ಕಾರ್ಯದಲ್ಲಿ ಭಾಗಿಯಾಗಬೇಕು. ಭಾಗಿಯಾಗ್ಲಿಕ್ಕೆ ಬೇಕಾದ ಎಲ್ಲಾ ಸೂಚನೆಗಳನ್ನು ಈಗಾಗಲೇ ನೀಡಲಾಗಿದೆ. ಹಾಗಾಗಿ ಅಳಿಲಸೇವೆಯಾಗಲಿ ಆಂಜನೇಯನ ಸೇವೆಯಾಗಲೀ ಈ ಕಾರ್ಯದಲ್ಲಿ ನಮಗೆ ಕಿಂಚಿತ್ತಾದರೂ ಸಲ್ಲಬೇಕು. ಸಲ್ಲಲೇಬೇಕು.

RELATED ARTICLES  ನಟ ರಜನಿಕಾಂತ್‌ ಅವರು ಬಿಜೆಪಿಗೆ ಸೇರುತ್ತಾರೆ?

ನೆತ್ತಿಯಮೇಲೆ ಸೂರ್ಯನಿದ್ದರೂ ಕತ್ತಿಯನ್ನು ಕೆಳಗಿಡದೆ ಕೆಲಸ ಸಾಗುತ್ತಲೇ ಇತ್ತು. ಗುಡ್ಡೆಯ ತುತ್ತತುದಿಯಾದ್ದರಿಂದಲೋ ನಿರಂತರ ಗಾಳಿಬೀಸುತ್ತಿದ್ದರಿಂದ ಬಿಸಿಲಿನ ಬೇಗೆ ಅರಿಯುತ್ತಿರಲಿಲ್ಲ. ಅಲ್ಲದೆ ನೀರು, ಮಜ್ಜಿಗೆ ವ್ಯವಸ್ಥೆಯೂ ಇತ್ತು.

ಬೆಳಗ್ಗಿನಿಂದಲೇ ಮಾತೆಯರು ಉಪಾಹಾರದ ವ್ಯವಸ್ಥೆ ಮಾಡಿದ್ದರು. ಸೂರ್ಯ ಮೇಲೇರುತ್ತಿದ್ದಂತೆಯೇ ಪುತ್ತೂರಿನ ” ಸಪ್ತ ಫುಡ್ ” ನವರ ಪೂರಿ, ಅಕ್ಜಿರೊಟ್ಟಿ, ಗಸಿ, ಕಾರ್ಯಕರ್ತರ ಹಸಿವನ್ನು ನೀಗಿಸಿತು. ಮಧ್ಯಾಹ್ನ ಭೋಜನದ ವ್ಯವಸ್ಥೆಯೂ ಮಾಡಲಾಗಿತ್ತು. ಎಲ್ಲವೂ ವ್ಯವಸ್ಥಿತವಾಗಿ ನೂಜಿ ವೆಂಕಟೇಶ್ವರ ಭಟ್ಟ ಎಡಕ್ಕಾನ ಇವರ ಮನೆಯಲ್ಲಿ ಮಾಡಲಾಗಿತ್ತು.
ಅಮೃತಧಾರಾ ಗೋಶಾಲೆ ಅಧ್ಯಕ್ಷ ಜಗದೀಶ ಬಿ.ಜಿ, ಶ್ರೀಧರ ಭಟ್ ಮತ್ತು ಗೋಶಾಲೆ ಪದಾಧಿಕಾರಿಗಳು, ಗುಂಪೆ ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಕಾರ್ಯಕ್ರಮ ನಿರೂಪಿಸಿದರು.