ಕಾರವಾರ: ಯಲ್ಲಾಪುರದಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬೇಕೆಂದು ಹಲವು ಕಲಾವಿದರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವ್ಯಂಗ್ಯಚಿತ್ರ ಮಳಿಗೆಯನ್ನು ಹೆಸರಾಂತ ವ್ಯಂಗ್ಯಚಿತ್ರ ಕಲಾವಿದ ನೀರ್ನಳ್ಳಿ ಗಣಪತಿ ಅವರು ಉದ್ಘಾಟಿಸಲಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

RELATED ARTICLES  ಅಘನಾಶಿನಿಗೆ ಅಪಾಯ ಬಂದಾಗ ಎಲ್ಲರೂ ಒಂದಾಗಬೇಕು:ಅರವಿಂದ ಕರ್ಕಿಕೋಡಿ

ಪ್ರತಿಯೊಬ್ಬ ಕಲಾವಿದರಿಗೆ ತಾವು ರಚಿಸಿದ ಅತ್ಯುತ್ತಮ 10 ವ್ಯಂಗ್ಯಚಿತ್ರಗಳನ್ನು ಗೋಡೆಯಲ್ಲಿ ಪ್ರದರ್ಶಿಸಲು ಅವಕಾಶವಿರುತ್ತದೆ. ಆಸಕ್ತರು ಡಿ. 20 ರ ಒಳಗೆ ಗಂಗಾಧರ ಕೊಳಗಿ, ಗೌರವ ಕಾರ್ಯದರ್ಶಿ, ಜಿಲ್ಲಾ ಕ.ಸಾ.ಪ ಸಿದ್ದಾಪುರ, ಮೊಬೈಲ್ ಸಂಖ್ಯೆ : 9448609871 ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

RELATED ARTICLES  ಉತ್ತರಕನ್ನಡದ ಖಡಕ್ ಎಸ್.ಪಿ ಸುಮನ್ ಪೆನ್ನೇಕರ್ ವರ್ಗಾವಣೆ.