ಮಂಗಳೂರು: ಚಳಿಗಾಲದ ರಜೆ ಕಾರಣದಿಂದಾಗಿ ಪ್ರಯಾಣಿಕರ ಸಂಚಾರವು ಹೆಚ್ಚು, ಈ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಮಾರ್ಗವಾಗಿ ಪುಣೆ-ಮುಂಬಯಿ-ತಿವಿಂ-ಕರ್ಮಲಿ-ಮಂಗಳೂರು ನಡುವೆ ವಿಶೇಷ ರೈಲು ಸಂಚರಿಸಲಿದೆ. ಈ ಹೊಸ ವರ್ಷಕ್ಕೆ ಕೊಂಕಣ ರೈಲ್ವೆ ವಿಶೇಷ ರೈಲು ಸಂಚಾರ ಆರಂಭಿಸಲಿದೆ ಎಂದು ತಿಳಿದುಬಂದಿದೆ

ಪುಣೆ ಮತ್ತು ಮಂಗಳೂರು ನಡುವೆ ಸಂಚರಿಸುವ (01301 ಸಂಖ್ಯೆಯ) ರೈಲು ಡಿಸೆಂಬರ್ 18.25, ಮತ್ತು ಜನವರಿ 1 ರಂದು ಸಂಜೆ 6.45 ಕ್ಕೆ ಪುಣೆಯಿಂದ ಹೊರಟು ಮಾರನೇ ದಿನದ ಮಧ್ಯಾಹ್ನ 12.30ಕ್ಕೆ ಮಂಗಳೂರು ತಲುಪಲಿದೆ.

RELATED ARTICLES  ಉರುಳಿಗೆ ಸಿಲುಕಿ ಮೃತಪಟ್ಟ ಕಪ್ಪು ಚಿರತೆ...!

ಮಂಗಳೂರು ಜಂಕ್ಷನ್ ನಿಂದ ರೈಲು (ಸಂಖ್ಯೆ 01302) ವಾರದ ವಿಶೇಷ ದಿನಗಳಲ್ಲಿ ಅಂದರೆ ಡಿಸೆಂಬರ್ 19, 26 ಮತ್ತು ಜನವರಿ 2ರಂದು ಮಧ್ಯಾಹ್ನ 3.45 ಕ್ಕೆ ಮಂಗಳೂರಿನಿಂದ ಹೊರಡುವ ರೈಲು ,ಮಾರನೇ ದಿನ 1.10 ನಿಮಿಷಕ್ಕೆ ಪುಣೆ ತಲುಪಲಿದೆ. ಈ ರೈಲುಗಳಲ್ಲಿ ವಿಶೇಷವಾಗಿ ಒಂದು ಎಸಿ ಕೋಚ್, 6 ಸ್ಲೀಪರ್ ಕೋಚ್, 4 ಜನರಲ್ ಕೋಚ್ ಹಾಗೂ ಎರಡು ಎಸ್ ಎಲ್ ಆರ್ ಕೋಚ್ ಗಳಿರುತ್ತವೆ ಎಂದು ವರದಿಯಾಗಿದೆ.

RELATED ARTICLES  ಒಂದೇ ಜಾತಾಗೆ ಸರಕಾರ ಗಡಗಡ! ಶೋಭಾ ಗುಡುಗು.