ಪಂಚ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪೂರ್ಣಗೊಂಡಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್ ಗಢ, ಮಿಜೋರಾಂ ನಲ್ಲಿ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢದಲ್ಲಿ ಕಾಂಗ್ರೆಸ್. ಭಾರೀ ಜಯ ಸಾಧಿಸಿದೆ. ಆದರೆ,ಬಿಜೆಪಿಗೆ 5 ರಾಜ್ಯಗಳಲ್ಲಿ ಹೀನಾಯ ಸೋಲನ್ನ ಕಂಡಿದೆ.

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿದ್ದು ಬಿಜೆಪಿ ಭಾರೀ ಹಿನ್ನಡೆ ಸಾಧಿಸಿದೆ. ಮಧ್ಯಪ್ರದೇಶದ 230 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಹೋಲಿಸಿದರೆ 9 ಕ್ಷೇತ್ರಗಳ ಅಂತರದಲ್ಲಿ ಸೋಲನ್ನು ಕಂಡ ಬಿಜೆಪಿ, ಇನ್ನುಳಿದ ರಾಜಸ್ಥಾನ್ , ಮಿಜೋರಾಂ, ತೆಲಂಗಾಣ ಮತ್ತು ಛತ್ತೀಸ್ ಗಢದಲ್ಲಿ ಭಾರಿ ಅಂತರದಲ್ಲಿ ಹೀನಾಯ ಸೋಲನ್ನ ಕಂಡಿದೆ ಎಂದು ತಿಳಿದುಬಂದಿದೆ.

RELATED ARTICLES 

ಫಲಿತಾಂಶ ಹೀಗಿದೆ.

ರಾಜಸ್ಥಾನ 199 ಕ್ಷೇತ್ರಗಳಲ್ಲಿ ಕಾಂಗ್ರೆಸ್ 102, ಬಿಜೆಪಿ 72, ಬಿಎಸ್ ಪಿ 5, ಇತರೆ 20 ಸ್ಥಾನಗಳಲ್ಲಿ ಜಯ ಸಾಧಿಸಿದೆ.

ಛತ್ತಿಸ್ ಗಢ 90 ಕ್ಷೇತ್ರಗಳಲ್ಲಿ ಕಾಂಗ್ರೆಸ್ 63, ಬಿಜೆಪಿ 18, ಬಿಎಸ್ ಪಿ 4, ಇತರೆ 5 ಸ್ಥಾನಗಳಲ್ಲಿ ಜಯ ಸಾಧಿಸಿದೆ.

RELATED ARTICLES  ಉತ್ತರಕನ್ನಡದಲ್ಲಿ ಇಂದು 43 ಜನರಲ್ಲಿ ಕೊರೋನಾ ಪಾಸಿಟೀವ್

ಮಧ್ಯಪ್ರದೇಶದ 230 ಕ್ಷೇತ್ರಗಳಲ್ಲಿ ಕಾಂಗ್ರೆಸ್ 115, ಬಿಜೆಪಿ 106, ಬಿಎಸ್ ಪಿ 2, ಇತರೆ 7 ಸ್ಥಾನಗಳಲ್ಲಿ ಜಯ ಸಾಧಿಸಿದೆ.

ಮಿಜೋರಾಂ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ 5, ಬಿಜೆಪಿ 1, ಎಮ್ ಎನ್ ಎಫ್ 26, ಇತರೆ 8 ಸ್ಥಾನಗಳಲ್ಲಿ ಜಯ ಸಾಧಿಸಿದೆ.

ತೆಲಂಗಾಣ 119 ಕ್ಷೇತ್ರಗಳಲ್ಲಿ ಟಿಆರ್ ಎಸ್ 87, ಕಾಂಗ್ರೆಸ್ 22, ಬಿಜೆಪಿ 1, ಎಂಐಎಂ 7, ಇತರೆ 2 ಸ್ಥಾನಗಳಲ್ಲಿ ಜಯ ಸಾಧಿಸಿದೆ.