ಭಾರತೀಯ ರಿಸರ್ವ ಬ್ಯಾಂಕ ನ ನೂತನ ಗವರ್ನರ್ ಆಗಿ ಹಣಕಾಸು ಆಯೋಗದ ಸದಸ್ಯ ಶಕ್ತಿಕಾಂತ ದಾಸ್ ಅವರನ್ನು ನೇಮಿಸಲಾಗಿದೆ. ಮುಂದಿನ 3 ವರ್ಷಗಳ ಕಾಲ ಇವರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಇದ್ದ,ಊರ್ಜಿತ್ ಪಟೇಲ್ ಅವರು ಸೋಮವಾರ ಆರ್ ಬಿ ಐ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಶುಕ್ರವಾರ ಆರ್ ಬಿ ಐ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಅದಕ್ಕೂ ಮುನ್ನ ನೂತನ ಗವರ್ನರ್ ನಿಯುಕ್ತಿ ನಡೆದಿದೆ.

RELATED ARTICLES  ಕ್ರಷರ್ ನಲ್ಲಿ ಕಳ್ಳತನ : ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಶಕ್ತಿಕಾಂತ ದಾಸ್ ಅವರು ಈ ಹಿಂದೆ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. 2017ರ ಮೇನಲ್ಲಿ ನಿವೃತ್ತಿ ಹೊಂದಿದ್ದರು. 1980ರ ಬ್ಯಾಚ್ ನ ತಮಿಳುನಾಡು ಕ್ಯಾಡರ್ ನ ಐಎಎಸ್ ಅಧಿಕಾರಿ ಆಗಿದ್ದರು ಎನ್ನಲಾಗಿದೆ.

RELATED ARTICLES  ವಿದ್ಯಾಪ್ರಸನ್ನ ಶ್ರೀಗಳ ಭೇಟಿ- ಕುಕ್ಕೆ ದೇವರ ದರ್ಶನ ಪಡೆದ ಅಮಿತ್ ಶಾ

ಬಿಜೆಪಿ ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರಗಳೆರಡರ ಅಡಿಯಲ್ಲಿ ಪ್ರಮುಖ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದವರು ದಾಸ್. ಆರ್ ಬಿಐ ಹಾಗೂ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಮಧ್ಯೆ ತಿಕ್ಕಾಟ ನಡೆಯುತ್ತಿರುವ ಹೊತ್ತಲ್ಲೇ ಇವರು ಕೇಂದ್ರೀಯ ಬ್ಯಾಂಕ್ ನ ಚುಕ್ಕಾಣಿ ಹಿಡಿದಿದ್ದಾರೆ.