ಕುಮಟಾ: ಕನ್ನಡ-ಹಿಂದಿ ಭಾಷೆಗಳಲ್ಲಿ ಪ್ರಕಟಿಸಿದ ರಾಗಕೋಶ ಪುಸ್ತಕ ನಾಡಿನ ಮತ್ತು ದೇಶದ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಲಿದೆ. ನೂರಾರು ಸಂಗೀತಕಲಾವಿದರು ತಯಾರಾದರೂ ಪ್ರಯೋಗ ಹಾಗು ಗ್ರಂಥರಚನೆಯೆಂಬ ಮಹಾಕಾರ್ಯಕ್ಕೆ ಕೈಹಾಕುವವರು ಒಬ್ಬಿಬ್ಬರು ಮಾತ್ರ. ಅಂಥವರಲ್ಲಿ ಉದಯೋನ್ಮುಖ ಕಲಾವಿದೆ, ಬಹುಭಾಷಾ ವಿದುಷಿ ರೋಹಿಣಿ ಭಟ್ಟರೂ ಒಬ್ಬರು ಎಂದು ಮಹಾಸಂಘಟಕ, ಸಾಂಸ್ಕøತಿಕ ರಾಯಭಾರಿ, ಶಿಕ್ಷಣತಜ್ಞ ಶಂಭು ಭಟ್ಟ ಕಡತೋಕಾ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಕತಗಾಲದ ಸತ್ಸಂಗಭವನದ ಪ್ರಾಕೃತಿಕ ಪರಿಸರದಲ್ಲಿ ಕಲಾಶ್ರೀ ಸಾಂಸ್ಕøತಿಕ ವೇದಿಕೆ ಹಮ್ಮಿಕೊಂಡ ಅಹೋರಾತ್ರಿ ಸಂಗೀತ ಸಮಾರಾಧನೆಯ ಸಂದರ್ಭದಲ್ಲಿ ರಾಗಕೋಶ ಪುಸ್ತಿಕೆಯನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತ ಉತ್ತರಕನ್ನಡ ಜಿಲ್ಲೆಯಲಿ ಸಂಗೀತದ ಕಲಿಕೆ ಅತಿವೇಗವಾಗಿ ಬೆಳೆಯುತ್ತಿದೆ. ಸಂಗೀತದ ಆಳ ಹಾಗು ನಿಸ್ಸಂದೇಹ ಕಲಿಕೆಗೆ
ಈಪುಸ್ತಕ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಸಂಪಾದಕರಿಂದ ಇನ್ನೂ ಅನೇಕ ಸಂಗೀತ ಕೃತಿಗಳು ಹೊರಬರಲಿ ಎಂದು ಆಶಿಸಿದರು.
ಸಂಪಾದಕಿ ರೋಹಿಣಿ ಭಟ್ಟ ಮಾತನಾಡಿ ಕನ್ನಡ, ಹಿಂದಿ, ಇಂಗ್ಲಿಷ, ಮರಾಠಿ ಮುಂತಾದ ಭಾಷೆಗಳಲ್ಲಿರುವ ಹತ್ತಾರು ಗ್ರಂಥಗಳನ್ನು
ಕೂಲಂಕಷವಾಗಿ ಅವಲೋಕಿಸಿ, ದೇಶ ಸುತ್ತು ಕೋಶ ಓದು ಎನ್ನುವಂತೆ ಹತ್ತಾರು ಸಾಧಕರೊಂದಿಗೆ ಚರ್ಚಿಸಿ, ಸರ್ವಸಮ್ಮತವಾಗುವಂತೆ
ವೈಜ್ಞಾನಿಕವಾಗಿ ರಾಗಕೋಶ ಹೊತಿ ್ತಗೆಯನ್ನು ರೂಪುಗೊಳಿಸಲಾಗಿದೆ.ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ ರಾಷ್ಟ್ರೀಯ ಸಂಗೀತ ಗುರುಕುಲ,
ಮೈಸೂರಿನ ಸಂಗೀತ ವಿಶ್ವವಿದ್ಯಾಲಯ, ಪುಣೆಯ ಎಸ್ಎನ್ಡಿಟಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಓದುವಾಗ ಸಿಕ್ಕ ಅನುಭವಗಳನ್ನು ಸಮರ್ಪಕವಾಗಿ ಬಳಸಲಾಗಿದೆ.
ತಂದೆ-ಗುರು ಡಾ ಗಣಪತಿ ಭಟ್ಟರ ಸಮಾಜಾಭಿಮುಖಿ ಜ್ಞಾನದಾನ, ಕಾರ್ಯವೈಖರಿ, ಮಾರ್ಗದರ್ಶನಗಳೇ ಶ್ರೀರಕ್ಷೆಯಾಗಿದೆ. ಹಿಂದಿಯಲ್ಲಿಯೂ ಪ್ರಕಟಿಸುವಂತೆ ಓರಿಸಾ, ಛತಿ ್ತೀಸಗಡ,
ಮಹಾರಾಷ್ಟ್ರ ಮುಂತಾದ ಉತ್ತರಭಾರತೀಯ ಸ್ನೇಹಿತರ ಬಹುದಿನದ ಬೇಡಿಕೆ ಇದೀಗ ಈಡೇರಿದೆ. ಸಂಗೀತಸಂಪನ್ಮೂಲವ್ಯಕ್ತಿ, ವಾಯೋಲಿನ್ ವಾದನದಿಂದ ರಸೋತ್ಪತ್ತಿ, ಗಾನರಾಗರಸಾಯನ (ಸಂಗೀತ ಪರೀಕ್ಷೋಪಯೋಗಿ 25 ಲೇಖನಗಳ ಸಂಗ್ರಹ) ಎಂಬ ಮುಂದಿನ ಪುಸ್ತಕಗಳಿಗಾಗಿ ವಿಷಯಸಂಗ್ರಹ ಕಾರ್ಯ ಆರಂಭವಾಗಿದೆ. ಕಲಾಭಿಮಾನಿಗಳು ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು. ಪುಸ್ತಕದ ಮಾರ್ಗದರ್ಶಕರಾದ ಡಾ ಗಣಪತಿ ಭಟ್ಟರು ಪ್ರಾಸ್ತಾವಿಕವಾಗಿ ಮಾತನಾಡಿ 400 ಗಂಟೆಗಳ ಸಾರ್ಥಕ ಶ್ರಮ ಹಾಗು ಬಹುವ್ಯಯದಿಂದ ಇದನ್ನು ನಿರ್ಮಿಸಲಾಗಿದೆ. ಸಂಗೀತಕ್ಷೇತ್ರದ ಮೈಲುಗಲ್ಲಾದ ಇದರಲ್ಲಿ ಆರಂಭದ ಕಲಿಕೆಗೆ ಅನುಕೂಲವಾಗುವಂತೆ ಸಚಿತ್ರ ರಾಗಮಾಹಿತಿ ಹಾಗು
ಪ್ರೌಢರೂ ತೃಪ್ತರಾಗುವಂತೆ ರಾಗಗಂಗಾವತರಣ ಎಂಬ ವಿಮರ್ಶಾತ್ಮಕ ಲೇಖನ ನೀಡಲಾಗಿದೆ. ಅಕ್ಷರ ಜೋಡಣೆ ಹಾಗು ಪುಸ್ತಕದ ಮುಖಪುಟ ನಿರ್ಣಯದಲ್ಲಿ ಮುಖ್ಯಪಾತ್ರ ವಹಿಸಿದ
ಧಾರವಾಡದ ದತ್ತಾ ಪಾಟಿಲರ ಹಾಗು ಸಕಾಲದಲ್ಲಿ ಮುದ್ರಿಸಿಕೊಟ್ಟ ಹುಬ್ಬಳ್ಳಿಯ ರೇಣುಕಾ ಮುದ್ರಣಾಲಯದ ಜಗನ್ನಾಥ ಭಾಕಳೆಯವರ ಸಹನೆಯ ಶ್ರಮ ಸ್ಮರಣೀಯ. ಪುಸ್ತಕಮುದ್ರಣಕ್ಕೆ ದಾನಿಗಳು ನೀಡಿದ ಸಹಾಯದಿಂದ ಜಿಲ್ಲೆಯ ಸಂಗೀತ ಶಾಲೆಗಳಿಗೆ ಕೆಲವು ಪ್ರತಿಗಳನ್ನು ಗೌರವವಾಗಿ ನೀಡಲಾಗುವುದು ಎಂದರು.
ಪ್ರಶಸ್ತಿಪ್ರದಾನ: ಅದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಶ್ರೀಧರ ಷಡಕ್ಷರಿ ಹಾಗು ಚಿತ್ರ-ಗಾನ ಕಲಾಕಾರ ರಾಮಚಂದ್ರ ಗಂಗೆಮನೆಯವರಿಗೆ ಕಲಾಶ್ರೀ ಸಾಧಕ
ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಂಗೀತಪೋಷಕ ಪುಣೆಯ ಅಭಿಷೇಕ ಭಾಕರೆ ಮಾತನಾಡಿ ಇಂತಹ ಕಲಾ ತಪಸ್ವಿಗಳನ್ನು ಗೌರವಿಸುವ ಅವಕಾಶ ಸಿಕ್ಕಿದ್ದು ನಮ್ಮ ಸುದೈವ ಎಂದರು. ಅಧ್ಯಕ್ಷ ಎಚ್ ಎನ್ ಅಂಬಿಗ ಧನ್ಯವಾದಗೈದರು. ಪ್ರಾಸಬದ್ಧವಾಗಿ ರಚಿಸಿದ ಪ್ರಶಸ್ತಿಪತ್ರವನ್ನು ನರಸಿಂಹ ಕೋಮಾರ, ವಾಯ್ಆರ್ ಕಾರ್ತಿಕ ವಾಚಿಸಿದರು. ಡಾ ಯಶಾದೇವಿ ವಿಶ್ವನಾಥ ದಿಂಡೆ, ಸುಮಂಗಲಾ ಭಟ್ಟ, ಶಾಂತೇಶ ಕರಗುದರಿ, ಪ್ರದೀಪ ಹೆಗಡೆ, ಶ್ರೀಕೃಷ್ಣ ಲಿಂಗೇರಿ, ಬಿ ಜಿ ಗುಣಿ, ಹರಿಶ್ಚಂದ್ರ ಭಟ್ಟ, ಮಾರುತಿ ನಾಯ್ಕ,
ಸೀತಾ ಹೆಗಡೆ, ವಿಜಯಕುಮಾರ ಘಳಗಿ, ಜಯಶ್ರಿ ಹುಕ್ಕೇರಿ, ಮಾಲತಿ ಸಂಶಿ, ಎನ್ ಜಿ ಹೆಗಡೆ,
ಮುಂತಾದವರು ಉಪಸ್ಥಿತರಿದ್ದರು.