ಹೈದರಾಬಾದ್: ಹೈದರಾಬಾದ್ ನ ರಾಜಭವನದಲ್ಲಿ ತೆಲಂಗಾಣದ ನೂತನ ಸಿಎಂ ಆಗಿ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್ ಎಸ್) ಅಧಿನಾಯಕ ಕೆ ಚಂದ್ರಶೇಖರ ರಾವ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹೈದರಾಬಾದ್ ನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ ಚಂದ್ರಶೇಖರ ರಾವ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಕೆ .ಚಂದ್ರಶೇಖರ ರಾವ್ ಅವರಿಗೆ ರಾಜ್ಯಪಾಲ ನರಸಿಂಹನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

RELATED ARTICLES  ದ್ವಿತೀಯ ಪಿಯು ಪರೀಕ್ಷೆ ನಾಳೆಯಿಂದ. ಈ ಬಾರಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 6.90 ಲಕ್ಷ !

ಅಲ್ಲದೇ, ಚಂದ್ರಶೇಖರ ರಾವ್ ಅವರೊಂದಿಗೆ ಟಿಆರ್ ಎಸ್ ಹಿರಿಯ ಶಾಸಕ ಮಹಮದ್ ಅಲಿ ಅವರೂ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದೇ ಡಿಸೆಂಬರ್ 18ರಂದು ಸಂಪೂರ್ಣ ಪ್ರಮಾಣದ ಮಂತ್ರಿಮಂಡಲವನ್ನು ರಚಿಸುವುದಾಗಿಯೂ ಅಂದೇ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಟಿಆರ್ ಎಸ್ ತಿಳಿಸಿದೆ ಎಂದು ವರದಿಯಾಗಿದೆ.

RELATED ARTICLES  ಬಿ ಎಸ್ ವೈ ಮನೆಗೆ ಬಂದ್ರು ಪಕ್ಷೇತರ ಶಾಸಕ ಶಂಕರ್! ನಡೀತಿದೆ ಏಳರ ಆಟ.

ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣವು ಟಿಆರ್ ಎಸ್ ಪಕ್ಷದಿಂದ 88 ಸ್ಥಾನಗಳಲ್ಲಿ ಜಯಭೇರಿ ಭಾರಿಸುವ ಮೂಲಕ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ ಎನ್ನಲಾಗಿದೆ.