ಬೆಂಗಳೂರು: ಬೆಂಗಳೂರು ಹೊರವಲಯದ ಕಾಡುಗೋಡಿಯ ಶೀಗೆಹಳ್ಳಿ ಗೇಟ್ ಬಳಿ ಲಾಜಿಸ್ಟಿಕ್ ಸಂಸ್ಥೆಗೆ ಸೇರಿದ್ದ ಗೋದಾಮಿನ ರ‍್ಯಾಕ್ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಶೀಗೆಹಳ್ಳಿ ಗೇಟ್ ಸಮೀಪದ ಹೋಲ್ ಸೇಲ್ ಗೋದಾಮಿನ ಒಳಭಾಗದಲ್ಲಿದ್ದ ರ‍್ಯಾಕ್ ಏಕಾಏಕಿ ಕುಸಿದು ಬಿದ್ದ ಕಾರಣ ಒಳಗೆ ಕೆಲಸದಲ್ಲಿದ್ದ ಕಾರ್ಮಿಕರು ಕಬ್ಬಿಣದ ರ‍್ಯಾಕ್ ಅಡಿಯಲ್ಲಿ ಸಿಲುಕಿದ್ದಾರೆ .
ಬಟ್ಟೆ ಗೋಡನ್ ವೊಂದರಲ್ಲಿ ಬೃಹತ್ ಗಾತ್ರದ ಕಬ್ಬಿಣದ ರ‍್ಯಾಕ್ ಬಿದ್ದು 15 ಜನ ಕಾರ್ಮಿಕರು ಸಿಲುಕಿರುವ ಘಟನೆ ನಡೆದಿದೆ. ರ‍್ಯಾಕ್ ಬಿದ್ದ ತಕ್ಷಣ ಮೂರು ಜನ ಕಾರ್ಮಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. . ಇನ್ನೂ ಕೆಲ ಕಾರ್ಮಿಕರು ರ‍್ಯಾಕ್ ನ ಅವಶೇಷಗಳ ಅಡಿ ಸಿಲುಕಿರಬಹುದು ಎಂದು ಊಹಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಚುರುಕಿನಿಂದ ಸಾಗಿದ್ದು ಇದುವರೆಗೆ ಐವರು ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಇನ್ನೂ ಘಟನೆಯನ್ನು ಕಂಡ ಪ್ರತ್ಯಕ್ಷ ದರ್ಶಿಗಳು ಹೇಳಿರುವ ಪ್ರಕಾರ ರ‍್ಯಾಕ್ ತುಂಬಾನೇ ಭಾರವಾಗಿತ್ತು, ಭಾರವಾದ ಬಟ್ಟೆ, ಜೀನ್ಸ್ ಇಲ್ಲಿಡಲಾಗುತ್ತಿತ್ತು. ಸುಮಾರು 50 ಕೇ.ಜಿ ಭಾರವಾಗ ಕಬೋಡನ್ನ ಹೊಂದಿತ್ತು. ಈ ರ‍್ಯಾಕ್ ದುರಸ್ಥೆ ಬಗ್ಗೆ ಗೋಡನ್ ಮ್ಯಾನೇಜರ್ ತಿಳಿಸಿದ್ದರಾದರೂ ಪ್ರಯೋಜನವಾಗಿರಲಿಲ್ಲ. ಪ್ರತಿನಿತ್ಯ ಇಲ್ಲಿ 80 ಜನ ಕಾರ್ಮಿಕರು ಕೆಲಸ ಮಾಡ್ತಾಯಿದ್ದರು,ರ‍್ಯಾಕ್ ಬಿದ್ದ ಸಂದರ್ಭದಲ್ಲಿ 15 ರಿಂದ 20 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು’ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.