ಅಂಕೋಲಾ: ಹಿರಿಯ ಕವಿ ನಾಗೇಂದ್ರ ನಾಯಕ ತೊರ್ಕೆ ಅವರನ್ನು ಅಂಕೋಲಾ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕ.ಸಾ.ಪ ಅಧ್ಯಕ್ಷ ಡಾ. ಪ್ರಕಾಶ ನಾಯಕ ಅವರು ತಿಳಿಸಿದ್ದಾರೆ.
ಸಮ್ಮೇಳನಾಧ್ಯಕ್ಷತೆಗೆ ಮೂವರು ಸಾಹಿತಿಗಳನ್ನು ಆಯ್ಕೆ ಮಾಡಿ ಅಂತಿಮ ಪರಿಶೀಲನೆಗೆ ಕ.ಸಾ.ಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರಿಗೆ ಕಳುಹಿಸಲಾಗಿತ್ತು. ಇದೀಗ ಜಿಲ್ಲಾಧ್ಯಕ್ಷರ ನಿರ್ದೇಶನದ ಮೇರಿಗೆ ಹಿರಿಯ ಕವಿ ನಾಗೇಂದ್ರ ನಾಯಕ ತೊರ್ಕೆ ಅವರ ಹೆಸರನ್ನು ತಾಲೂಕು ಸಾಹಿತ್ಯ ಸಮ್ಮೇಳನಾಧ್ಯತೆಗೆ ಘೋಷಿಸಲಾಗಿದೆ ಎಂದು ಪ್ರಕಾಶ ನಾಯಕ ಹೇಳಿದ್ದಾರೆ.
ಸಮ್ಮೇಳನ ಜನವರಿ 8 ರಂದು ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ನಡೆಯಲಿದೆ ಎಂದು ತಿಳಿಸಿದ ಪ್ರಕಾಶ ನಾಯಕ ಅವರು ಎಲ್ಲರ ಸಹಕರಾರ ಕೋರಿದ್ದಾರೆ
ನಾಗೇಂದ್ರ ನಾಯಕ ಅವರ ಪರಿಚಯ :
ಹಿರಿಯ ಕವಿ ನಾಗೇಂದ್ರ ನಾಯಕ ಅವರು ಪ್ರಾಥಮಿಕ ಶಾಲಾ ಶಿಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಅವರು ಈವರೆಗೆ 10 ಕೃತಿಗಳನ್ನು ರಚಿಸಿದ್ದಾರೆ. ಮಗು ನಗು, ಗುಬ್ಬಿಗೂಡು, ಹೆಜ್ಜೆಗೊಂದು ಹೂವು ಈ ಮೂರು ಮಕ್ಕಳ ಕವನ ಸಂಕಲನಗಳೊಂದಿಗೆ ಆದರ್ಶ ನಿಧಿ ಎಂಬ ಮಕ್ಕಳ ಕಥಾ ಸಂಕಲನವನ್ನೂ ನೀಡಿದ್ದಾರೆ. ಪ್ರಸ್ತುತ ಎಂಬ ಹೆಸರಿನಲ್ಲಿ ಪ್ರಬಂದ ಸಂಕಲನ, ನಾಡವರು ಒಂದು ಜನಾಂಗಿಕ ಕಥೆ, ಚುಟುಕು ಚಿತ್ತಾರ ಜೊತಗೆ ಭಕ್ತಿ ಪ್ರಧಾನವಾದ ಶಿರಡಿ ಸಾಯಿ ನಾಮಾಮೃತ, ರಾಘವೇಂದ್ರ ಸ್ವಾಮಿ ಚರಿತ್ರಾಮೃತ ಕಾವ್ಯ ಇವುಗಳನ್ನು ನೀಡಿದ್ದಾರೆ ಎಂದು ಡಾ. ಪ್ರಕಾಶ ನಾಯಕ ತಿಳಿಸಿದ್ದಾರೆ.