ಸೀತಾಫಲ ಹಣ್ಣು ಬಯಲು ಸೀಮೆ, ಶುಷ್ಕ ಪ್ರದೇಶದಲ್ಲಿ ಹಾಗೂ ಗುಡ್ಡಗಳಲ್ಲಿ ತನ್ನಷ್ಟಕ್ಕೆ ತಾನೇ ಬೇಳೆಯುವ ಈ ಹಣ್ಣು. ಅದರಲ್ಲೂ ಚಳಿಗಾಲದಲ್ಲಿಯೇ ಬರುವಂತ ಹಣ್ಣು. ಈ ಹಣ್ಣುನಲ್ಲಿ ಹಲವಾರು ವಿಟಮಿನ್ ಗಳು ಅಡಕವಾಗಿದೆ. ಈ ಹಣ್ಣಿನಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ, ನಿಯಾಸಿನ್, ವಿಟಮಿನ್ ಎ ಸತ್ವಗಳು ಆರೋಗ್ಯಕ್ಕೆ ಬಹಳ ಉಪಯುಕ್ತವಾದವು.
ಸುಮಾರು ಜನರಿಗೆ ಈ ಹಣ್ಣಿನ ಮೇಲೆ ಅಂತಹ ವಿಶೇಷ ಆಸಕ್ತಿ ಇರುವುದಿಲ್ಲ. ಆದರೆ ಇದರಿಂದ ದೊರೆಯುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಒಮ್ಮೆ ತಿಳಿದರೆ ಸಾಕು ಯಾರೂ ಸಹ ಈ ಹಣ್ಣನ್ನು ನಿರಾಕರಿಸುವುದಿಲ್ಲ. ಬದಲಿಗೆ ಈ ಹಣ್ಣು ಸಿಗುವ ಋತುವಿನಾದ್ಯಂತ ಈ ಹಣ್ಣನ್ನು ಸೇವಿಸಲು ಇಷ್ಟಪಡುತ್ತಾರೆ. ತಙ್ಞರ ಪ್ರಕಾರ ಈ ಹಣ್ಣನ್ನು ಸೇವಿಸುವುದರಿಂದ ಶೀಘ್ರವಾಗಿ ತೂಕವನ್ನು ಇಳಿಸಿಕೊಳ್ಳಬಹುದು. ಮಧುಮೇಹವನ್ನು ನಿಯಂತ್ರಿಸುವ ಸೀತಾಫಲವೆಂಬ ಅದ್ಭುತ ಫಲ!
ಹಿರಿಯರು ಹೇಳುವಂತೆ ಯಾವ ಕಾಲದಲ್ಲಿ ಯಾವ ಹಣ್ಣು ಬರುತ್ತೋ ಅದನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ.ಬನ್ನಿ ಹಾಗದರೆ ಈ ಸೀತಾಫಲದಿಂದ ನಮಗೆ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಒಮ್ಮೆ ತಿಳಿಯೋಣ.
ತೂಕ ಹೆಚ್ಚಿಸಿಕೊಳ್ಳಲು: ತೂಕ ಹೆಚ್ಚಿಸಿಕೊಳ್ಳಬೇಕೆನ್ನುವವರಿಗೆ ಸೀತಾಫಲವು ವರದಾನ. ಇದನ್ನು ರಸ ಬೇಕಾದರು ಮಾಡಿಕೊಂಡು ಕುಡಿಯಬಹುದು. ಇದಕ್ಕಾಗಿ ಸ್ವಲ್ಪ ಹಾಲಿನಲ್ಲಿ ಸಿಪ್ಪೆ, ಬೀಜಗಳನ್ನು ಬೇರ್ಪಡಿಸಿದ ಸೀತಾಫಲದ ಹಣ್ಣನ್ನು ಬೆರೆಸಿ, ಜೊತೆಗೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಪ್ರತಿನಿತ್ಯ ಸೇವಿಸಿ. ಇದರಿಂದ ನಿಮ್ಮ ಕ್ಯಾಲೋರಿಗಳ ಸೇವನೆಯು ಅಧಿಕವಾಗುತ್ತದೆ.
ಗರ್ಭಿಣಿಯಾಗಿರುವಾಗ: ಸೀತಾಫಲವು ಗರ್ಭದಲ್ಲಿರುವ ಶಿಶುವಿನ ಮೆದುಳು ವಿಕಾಸವಾಗಲು, ನರ ವ್ಯೂಹ ಮತ್ತು ರೋಗ ನಿರೋಧಕ ಶಕ್ತಿಯು ಸುಗಮವಾಗಲು ನೆರವಾಗುತ್ತದೆ. ಇದೆಲ್ಲದ್ದಕ್ಕಿಂತ ಮುಖ್ಯವಾಗಿ ಸೀತಾಫಲವು ಗರ್ಭಪಾತದ ಅಪಾಯವನ್ನು ತಡೆಯುವ ಸಾಮರ್ಥ್ಯವನ್ನು ಸಹ ಹೊಂದಿದೆ.
ಅಸ್ತಮಾ ರೋಗಿಗಳಿಗೆ ಸೀತಾಫಲದಲ್ಲಿ ವಿಟಮಿನ್ ಬಿ6 ಅಧಿಕ ಪ್ರಮಾಣದಲ್ಲಿರುತ್ತದೆ. ಈ ವಿಟಮಿನ್‍ನಿಂದಾಗಿ ಶ್ವಾಸಕೋಶದ ಉರಿಯೂತ ಕಡಿಮೆಯಾಗುತ್ತದೆ ಮತ್ತು ಇದು ಅಸ್ತಮಾ ಬರುವುದನ್ನು ತಡೆಯುತ್ತದೆ.
ಹೃದಯಾಘಾತ: ಸೀತಾಫಲದಲ್ಲಿರುವ ಮೆಗ್ನೀಶಿಯಂ ಅಂಶವು ಈ ಹಣ್ಣನ್ನು ಅತ್ಯುತ್ತಮವಾದ ಆರೋಗ್ಯಕಾರಿ ಹಣ್ಣನ್ನಾಗಿಸಿದೆ. ಇದು ಹೃದಯವನ್ನು ಹೃದ್ರೋಗಗಳಿಂದ ಕಾಪಾಡುತ್ತದೆ.
ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಹಣ್ಣು ಸೀತಾಫಲದಲ್ಲಿ ಯಥೇಚ್ಛವಾಗಿರುವ ಡಯಟೆರಿ ಫೈಬರ್‌ಗಳು ದೇಹವು ಸಕ್ಕರೆಯನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಇದನ್ನು ಸೇವಿಸುವುದರಿಂದ ಟೈಪ್-2 ಮಧುಮೇಹ ಬರದಂತೆ ತಡೆಯಬಹುದು.
ನಿಮ್ಮಲ್ಲಿ ರಕ್ತ ಹೀನತೆ ಇದೆಯೇ?: ಯಾಕೆ ಯೋಚನೆ ಮಾಡುತ್ತೀರಿ ಸೀತಾಫಲವನ್ನು ಸೇವಿಸಿ. ಇದು ಒಳ್ಳೆಯ ಪ್ರಚೋದಕ, ಎಕ್ಸ್‌ಪೆಕ್ಟೊರೆಂಟ್ ಮತ್ತು ಹಿಮಾಟ್ನಿಕ್ ಆಗಿರುವ ಹಣ್ಣಾಗಿದೆ. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಈ ಹಣ್ಣಿನಲ್ಲಿ ಕಬ್ಬಿಣಾಂಶವು ಅಧಿಕವಾಗಿರುವುದರಿಂದ ಅನಿಮಿಯಾ ಅಥವಾ ರಕ್ತ ಹೀನತೆಗೆ ಹೇಳಿ ಮಾಡಿಸಿದ ಹಣ್ಣಾಗಿದೆ.
ಸೀತಾಫಲವು ಕ್ಯಾನ್ಸರನ್ನು ದೂರವಿರಿಸುತ್ತದೆ: ಸೀತಾಫಲದಲ್ಲಿ ಕಂಡು ಬರುವ ಅಸಿಟೊಜೆನಿನ್ ಎಂಬ ರಾಸಾಯನಿಕ ಪದಾರ್ಥವು ಚರ್ಮದ ಕ್ಯಾನ್ಸರ್ ಬರದಂತೆ ಕಾಪಾಡುತ್ತದೆ. ಇದು ತ್ವಚೆಯ ಮೇಲೆ ಕ್ಯಾನ್ಸರ್ ಪೂರ್ವ ಕಂಡುಬರುವ ಪೊರೆಯನ್ನು ನಾಶ ಮಾಡುತ್ತದೆ.