ಗ್ವಾಂಗ್‌ಝೌ(ಚೀನಾ): ಬಿಡಬ್ಲುಎಫ್ ಟೂರ್ ಫೈನಲ್ಸ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ನೇರ ಗೇಮ್‌ಗಳಿಂದ ಜಯ ಸಾಧಿಸಿದ್ದಾರೆ. ಈ ಮೂಲಕ ವರ್ಷಾಂತ್ಯದಲ್ಲಿ ನಡೆಯುವ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಪ್ರಶಸ್ತಿ ಸುತ್ತಿಗೆ ತಲುಪಿದ್ದಾರೆ ಎಂದು ತಿಳಿದುಬಂದಿದೆ.
ವಿಶ್ವದ ನಂ.6ನೇ ಆಟಗಾರ್ತಿ ಸಿಂಧು ಕೇವಲ 56 ನಿಮಿಷಗಳ ಹೋರಾಟದಲ್ಲಿ ಥಾಯ್ಲೆಂಡ್‌ನ ವಿಶ್ವದ ನಂ.8ನೇ ಆಟಗಾರ್ತಿ ರಚನೊಕ್ ಇಂತನಾನ್‌ರನ್ನು 21-16, 25-23 ಗೇಮ್‌ಗಳಿಂದ ಮಣಿಸಿದ್ದಾರೆ.
ಸಿಂಧು ಕ್ಯಾಲೆಂಡರ್ ವರ್ಷದಲ್ಲಿ ವಿಶ್ವ ಚಾಂಪಿಯನ್‌ಶಿಪ್, ಕಾಮನ್‌ವೆಲ್ತ್ ಗೇಮ್ಸ್ ಹಾಗು ಏಶ್ಯನ್ ಗೇಮ್ಸ್ ಸಹಿತ ಐದು ಟೂರ್ನಿಗಳಲ್ಲಿ ಫೈನಲ್‌ಗೆ ತಲುಪಿದ್ದರೂ ಪ್ರಶಸ್ತಿ ಜಯಿಸಲು ವಿಫಲರಾಗಿದ್ದಾರೆ. ಈ ವರ್ಷದ ಪ್ರಶಸ್ತಿ ಬರ ನೀಗಿಸಿಕೊಳ್ಳಲು ಕೊನೆಯ ಅವಕಾಶ ಪಡೆದಿರುವ ಸಿಂಧು ರವಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜಪಾನ್‌ನ 2ನೇ ಶ್ರೇಯಾಂಕದ ನೊರೊಮಿ ಒಕುಹರಾರನ್ನು ಎದುರಿಸಲಿದ್ದಾರೆ ಎಂದು ವರದಿಯಾಗಿದೆ.