ಬೆಂಗಳೂರು : ಭಾರತೀಯರಿಗೆ ಚಿನ್ನಾಭರಣಗಳೆಂದರೆ ಎಲ್ಲಿಲ್ಲದ ವ್ಯಾಮೋಹ. ಬಂಗಾರ ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ.

ಚಿನ್ನ ಮತ್ತು ಬೆಳ್ಳಿ ಬೆಲೆ ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಮತ್ತಷ್ಟು ಇಳಿಕೆಯಾಗಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ವಹಿವಾಟಿನಲ್ಲಿ ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ ರೂ. 124ರಷ್ಟು ಕಡಿಮೆಯಾಗಿ ರೂ. 31,608ರಷ್ಟಿತ್ತು. ಅದೇ ರೀತಿ ಬೆಳ್ಳಿ ಬೆಲೆ ಇಳಿಮುಖವಾಗಿ ಕೆ.ಜಿ ಬೆಲೆ ರೂ. 38,344ಗಳಷ್ಟಿದೆ.

RELATED ARTICLES  ಗಣೇಶ ಮೂರ್ತಿಯ ವಿಸರ್ಜನೆ ವೇಳೆ ಇರಲಿ ಎಚ್ಚರ : ಇದು ಸತ್ವಾಧಾರ ನ್ಯೂಸ್ ಕಳಕಳಿ

ಬೆಂಗಳೂರಿನಲ್ಲಿ ಶನಿವಾರ 10 ಗ್ರಾಂ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಕ್ರಮವಾಗಿ 29500 ರೂ. ಹಾಗೂ 31550.80ರಷ್ಟಿದೆ. ಗ್ರಾಂ ಲೆಕ್ಕಾಚಾರದಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಕ್ರಮವಾಗಿ ರೂ. 2950 ಹಾಗೂ ರೂ. 3155.08ರಷ್ಟಿದೆ. ಅದೇ ರೀತಿ ಒಂದು ಕೆ.ಜಿ ಬೆಳ್ಳಿ ಬೆಲೆ ರೂ. 40500ರಷ್ಟಿದೆ.

RELATED ARTICLES  ಅಬ್ಬರಿಸುತ್ತಿರುವ ಮಳೆರಾಯ ಅತಂತ್ರವಾಗುತ್ತಿರುವ ಅನ್ನದಾತ : ಕೊಯ್ದಿಟ್ಟ ಗದ್ದೆಯಲ್ಲಿ ತುಂಬಿದ ನೀರು : ಕೆಸರುಗದ್ದೆ ಸೇರಿದ ಭತ್ತದ ಕಾಳು.

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ ಎಂದು ತಿಳಿದುಬಂದಿದೆ.