ಹೊನ್ನಾವರ: ತಾಲೂಕಿನ ಗೆರುಸೊಪ್ಪದಲ್ಲಿ ನೂತನವಾಗಿ ಆರಂಭವಾಗಿರುವ ಸಿಂಗಳಿಕ ಇಕೊ ಪಾರ್ಕನಲ್ಲಿ ಇಂದು ಶನಿವಾರ ರಾತ್ರಿ ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳದ ಉಮೇಶ ಮುಂಡಳ್ಳಿ ತಂಡದವರಿಂದ ‘’ಭಾವ ಗಾನ ಯಾನ” ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಕುಮಟಾ, ಕತಗಾಲ, ಹೊನ್ನಾವರ, ಮಂಕಿ ಹಾಗು ಭಟ್ಕಳ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿವರ್ಗದವರ ಸಹಯೋಗದಲ್ಲಿ ಆಯೋಜನೆಗೊಂಡ ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ಜಿಲ್ಲೆಯ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರು ನಡೆಸಿಕೊಟ್ಟ ನಿನಾದ ಭಾವ ಗಾನ ಯಾನ ಕಾರ್ಯಕ್ರಮ ಎಲ್ಲ ಅಧಿಕಾರಿ ವರ್ಗದವರು, ಸಿಬ್ಬಂದಿಗಳು ಸಂಗೀತ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಯಿತು.

RELATED ARTICLES  ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಾವು

ಪಕೃತಿಯ ಮಡಿಲಲ್ಲಿ ಹೊಸದಾಗಿ ನಿರ್ಮಾಣಗೊಂಡ ಬಯಲು ರಂಗ ವೇದಿಕೆಯಲ್ಲಿ ನಿನಾದದ ಕಾರ್ಯಕ್ರಮ ಅತ್ಯಂತ ಆಪ್ತವಾದ ಅನುಭವ ನೀಡಿತು.
ಉಮೇಶ ಮುಂಡಳ್ಳಿ ಗಣೇಶನ ಸ್ತುತಿಯೊಂದಿಗೆ ಕಾರ್ಯಕ್ರಮ ಗಾಯನ ಆರಂಭಿಸಿ ನಾಡಿನ ಹೆಸರಾಂತ ಕವಿಗಳ ಭಾವಗೀತೆಗಳು ಜೊತೆಗೆ ತಮ್ಮ ಸ್ವರಚಿತ ಭಾವಗೀತೆಗಳನ್ನು ಜಾನಪದ, ದೇಶಭಕ್ತಿಗೀತೆಗಳನ್ನು ಹಾಡಿದರು. ಸ್ವತಃ ಗಾಯಕರಾದ ಕುಮಟಾ ಎ.ಸಿ.ಎಫ್. ಪ್ರವೀಣ ಕುಮಾರ್ ಬಸ್ರುರ್ ಅವರು ನಿನಾದದಲ್ಲಿ ಕೆ.ಸ್.ನರಸಿಂಹ ಸ್ವಾಮಿ ಹಾಗೂ ಬೆಂದ್ರೆಯವರ ಭಾವಗೀತೆಗಳನ್ನು ಹಾಡಿದ್ದು ವಿಶೇಷವಾಗಿತ್ತು.

RELATED ARTICLES  ಸಿದ್ದಾಪುರದಲ್ಲಿ ಸಿಕ್ಕಿಬಿದ್ದರು ಶಾಲಾ ಸಿಲೆಂಡರ್ ಕಳ್ಳರು!

ಉಮೇಶ ಮುಂಡಳ್ಳಿಯವರೊಂದಿಗೆ ಕೊಳಲಿನಲ್ಲಿ ವಿನಾಯಕ ಭಂಡಾರಿ, ಕಿಬೋರ್ಡನಲ್ಲಿ ನವೀನ್ ಶೇಟ್ ಹಾಗೂ ತಬಲಾದಲ್ಲಿ ಹರೀಶ್ ಧಾರೇಶ್ವರ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಭಟ್ಕಳ,ಮಂಕಿ,ಹೊನ್ನಾವರ ,ಕುಮಟಾದ ಅರಣ್ಯ ಇಲಾಖೆಯ ಎಲ್ಲ ಹಿರಿಕಿರಿಯ ಅಧಿಕಾರಿವರ್ಗದವರು ಸಿಬ್ಬಂದಿ ವರ್ಗದವರು ಅವರ ಕುಟುಂಬಸ್ಥರು ಭಾಗವಹಿಸಿದ್ದರು.