ಕುಮಟಾ : ಮಕ್ಕಳಲ್ಲಿನ ಸಂಗೀತ ಕಲಾ ಆಸಕ್ತಿಯನ್ನು ಪೋಷಿಸಿ ಬೆಳೆಸುವ ಕಾರ್ಯವನ್ನು ಕಳೆದ ಹದಿನಾರು ವರ್ಷಗಳಿಂದಲೂ ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತ ನಾಡಿನ ವಿವಿಧೆಡೆಗಳಲ್ಲಿ ಈ ಉದಯೋನ್ಮುಖ ಕಲಾವಿದರಿಗೆ ಸೂಕ್ತ ವೇದಿಕೆಯನ್ನೊದಗಿಸುತ್ತ ಬಂದಿರುವ ಕುಮಟಾದ “ಮಕ್ಕಳಮನೆ ಕಲಾ ಮಿತ್ರ ವೇದಿಕೆ (ರಿ.)ಯು ಈ ಬಾರಿ ೧೮ ವರ್ಷ ಮೇಲ್ಪಟ್ಟವರಿಗೂ ಕೆಲ ಸ್ಪರ್ಧೆಗಳನ್ನು ಇಂದು ಕುಮಟಾದ ಶಾರದಾ ನಿಲಯ ಶಾಲಾ ಮೈದಾನದಲ್ಲಿ ಏರ್ಪಡಿಸಿತ್ತು.

RELATED ARTICLES  JEE ಹಾಗೂ KCET ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ

ವಿವೇಕನಗರ ಸುತ್ತಮುತ್ತಲಿನ ಮಹಿಳೆಯರು ಪಾಲ್ಗೊಂಡು ಸಂಗೀತ ಖುರ್ಚಿ ಮತ್ತು ಸಮತೋಲನ ಸ್ಪರ್ಧೆಗಳಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು.

IMG 20181216 WA0000 1
ಈ ವರ್ಷದ ವಾರ್ಷಿಕ ಕಾರ್ಯಕ್ರಮವಾಗಿ ಇದೇ ಬರುವ 29-12-2018 ಶನಿವಾರ ಸಂಜೆ 6.15 ಕ್ಕೆ ವಿವೇಕನಗರ ಶಾರದಾ ನಿಲಯ ಶಾಲಾ ಮೈದಾನದಲ್ಲಿ “ಚಿಣ್ಣರ ಚಿಲಿಪಿಲಿ” ಕಾರ್ಯಕ್ರಮ ಏರ್ಪಡಿಸಿದ್ದು , ಈ ಭವ್ಯ ವೇದಿಕೆಯಲ್ಲಿ ಇಂದಿನ ಕ್ರೀಡಾ ವಿಜೇತರುಗಳಿಗೆ ಬಹುಮಾನ ವಿತರಿಸಿ ಅಭಿನಂದಿಸುವುದಾಗಿ ತಿಳಿಸಿದ ಸಂಘಟಕರು ಭಾಗವಹಿಸಿದ ಸರ್ವರಿಗೂ ಕೃತಜ್ಙತೆ ಸಲ್ಲಿಸಿ, ಮುಂಬರುವ ದಿನಗಳಲ್ಲಿನ ಮಕ್ಕಳ ಮನೆ ಕಲಾ ಮಿತ್ರ ವೇದಿಕೆಯ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಕ್ಕಳನ್ನು ಪ್ರೋತ್ಸಾಹಿಸುತ್ತ ತಮ್ಮೀ ಸಂಘಟನೆಯೊಂದಿಗೆ ಸಹಕರಿಸಲು ವಿನಂತಿಸಿದರು.

RELATED ARTICLES  ವಿಜಯವೇದಾಂಗ ಸ್ವಾಮಿಗಳಿಗೆ ಗೋಕರ್ಣ ಗೌರವ

ಪುರುಷರಿಗಾಗಿ ಏರ್ಪಡಿಸಿದ್ದ ಗುಂಡು ಎಸೆತ ಮತ್ತು ೧೦೦ ಮೀ ಓಟ ಗಳಲ್ಲಿ ಸ್ಪರ್ಧಾಳುಗಳ ಸಂಖ್ಯೆ ತೀರಾ ಕಡಿಮೆ ಇದ್ದ ಕಾರಣ ಈ ಸ್ಪರ್ಧೆಗಳ ದಿನಾಂಕವನ್ನು ಮುಂದೂಡಿದ ಬಗ್ಗೆ ಸಂಘಟಕರು ಪ್ರಕಸಿದರು.