ಹೊನ್ನಾವರ : ಶ್ರೀ ಕುಮಾರ್ ರೋಡ್ ಲೈನ್ಸ ನ ಮಾಲಿಕರಾದ ಶ್ರೀ ವೆಂಕಟ್ರಮಣ ಹೆಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಶರಾವತಿ ಸಾಂಸ್ಕೃತಿಕ ವೇದಿಕೆಯಿಂದ “ಶರಾವತಿ ಉತ್ಸವ”ಕಾರ್ಯಕ್ರಮ ಪಟ್ಟಣದ ಸೇಂಟ್ ಅಂತೋನಿ ಪ್ರೌಢಶಾಲೆಯಲ್ಲಿ ನಡೆಯಿತು.
ಮೊದಲ ದಿನದ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ, ಗೌರವಾಧ್ಯಕ್ಷ ಪಿ. ಎಸ್. ಭಟ್ ಉಪ್ಪೋಣಿ ಇನ್ನಿತರರು ಹಾಜರಿದ್ದರು.