ಪೆಥಾಯ್ ಹೆಸರಿನ ಈ ಚಂಡಮಾರುತದ ಪರಿಣಾಮ ಆಂಧ್ರಪ್ರದೇಶದ ಕರಾವಳಿ ತೀರ ಹಾಗೂ ಉತ್ತರ ತಮಿಳನಾಡು ಮತ್ತು ಪುದುಚೇರಿ ಕರಾವಳಿ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

RELATED ARTICLES  ಬಹೂಪಯೋಗಿ ‘ಜೀರಿಗೆ’

ಅಲ್ಲದೆ, ಆಂಧ್ರಪ್ರದೇಶದ ಒಂಗೊಲೆ ಹಾಗೂ ಕಾಕಿನಾಡ ನಡುವಿನ ಪ್ರದೇಶಗಳಲ್ಲಿ ಭಾರೀ ಭೂಕುಸಿತವಾಗುವ ಭೀತಿ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸದ್ಯ ಪ್ರತೀ ಗಂಟೆಗೆ 45-65 ಕಿ.ಮೀ ವೇಗವಾಗಿ ಬೀಸುತ್ತಿರುವ ಈ ಚಂಡಮಾರುತವು ಮುಂದಿನ 24 ಗಂಟೆಯಲ್ಲಿ ಮತ್ತಷ್ಟುತೀವ್ರತೆ ಪಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

RELATED ARTICLES  ದಿ.13 ರಂದು ವಾಲ್ಮೀಕಿ ಮಹರ್ಷಿ ಕುರಿತು ಭಾಷಣ ಸ್ಪರ್ಧೆ

ಈಗಾಗಲೇ ಗಜ ಚಂಡಮಾರುತದಿಂದ ಸಾಕಷ್ಟುಸಂಕಷ್ಟಅನುಭವಿಸಿರುವ ತಮಿಳುನಾಡು ರಾಜ್ಯಕ್ಕೆ ಇದೀಗ ಮತ್ತೊಂದು ಚಂಡ ಮಾರುತದ ಭೀತಿ ಎದುರಾಗಿದೆ ಎನ್ನಲಾಗಿದೆ.