ಹೊನ್ನಾವರ: ಕರ್ನಾಟಕದ ಜನಪ್ರಿಯ ಮುಖ್ಯ ಮಂತ್ರಿ ಗಳಾದ ಸನ್ಮಾನ್ಯ ಶ್ರೀ ಕುಮಾರಸ್ವಾಮಿ ಅವರ 59 ನೇ ವರ್ಷದ ಜನ್ಮ ದಿನಾಚರಣೆಯನ್ನು ಹೊನ್ನಾವರ ಪ್ರಭಾತ ನಗರದ ಶ್ರೀ ಮುಡಗಣಪತಿ ದೇವಾಲಯದ ಶಿವ,ಪಾರ್ವತಿ ಹಾಗೂ ಗಣಪತಿಗೆ ವಿಶೇಷ ಪೂಜೆ ನೆರವೇರಿಸಿ .ಕುಮಾರಸ್ವಾಮಿ ಅವರ ಆರೋಗ್ಯ , ಆಯಸ್ಸು, ಮತ್ತು ಇನ್ನೂ 5 ವರ್ಷಗಳ ಕಾಲ ಅವರೆ ಮುಖ್ಯ ಮಂತ್ರಿ ಅಗಿರಲೆಂದು ಮತ್ತು ಇದೆ ಸಮಯದಲ್ಲಿ ಶ್ರೀ ಏಚ್.ಡಿ ರೇವಣ್ಣಅವರಿಗು ಹುಟ್ಟಿದ ಹಬ್ಬದ ಸಲುವಾಗಿ ಮತ್ತು ಮಾನ್ಯ ಶ್ರೀ ಎಚ್ ಡಿ ದೇವೇಗೌಡ ಅವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಸುಮಾರು 150. ರಿಂದ 200 ಅಭಿಮಾನಿಗಳು ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು .
ನಂತರ ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ನೀಡಿ ಅವರೊಂದಿಗೆ ಆಚರಿಸಲಾಯಿತು.
ಇ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅವರಾದ ಶ್ರೀ ಜಿ ಎನ್ ಗೌಡ ಅವರ ನೇತ್ರತ್ವದಲ್ಲಿ ತಾಲ್ಲೂಕು ಪಂಚಾಯತ ಸದಸ್ಯರಾದ ಶ್ರೀ ತುಕಾರಾಂ ನಾಯ್ಕ,
ಜೆಡಿ ಎಸ್ ಮುಖಂಡರಾದ ಶ್ರೀಎಸ್ ಜಿ ಹೆಗಡೆ, ಟಿ.ಟಿ ನಾಯ್ಕ, ರಾಜು ನಾಯ್ಕ ಕೇರವಳ್ಳಿ , ಕೆ ಎಸ್ ಗೌಡ, ಇಬ್ರಾಹಿಂ ಸಾಬ್ ವಲ್ಕಿ, ಡಾ,ಎಸ್ ಡಿ ಹೆಗಡೆ, ಪಾರ್ತನ್ ಕಡತೋಕ , ಗಣೇಶ ಗೌಡ ಮುಗ್ವಾ, ಗೋವಿಂದ ಗೌಡ ವಂದುರ ,ಮೈದಿನ್ ಸಾಬ್ ಕರ್ಕಿ, ಗಣಪತಿ ಗೌಡ ಕಳಸಿನಮುಟೆ, ನಾಗರಾಜ ಗೌಡ ಹಳದೀಪುರ, ಭಾಸ್ಕರ ಭಂಡಾರಿ ವಕೀಲರು,ಜೈವಿನ್ ಮೆಂಡೊಂನ್ಸಾ
ಯುವ ಬಳಗದ ಅಧ್ಯಕ್ಷರಾದ ವಾಸು ಗೌಡ ,ಸುಬ್ರಾಯ ಗೌಡ ಕಳಸಿನಮೂಟೆ, ಸುರೇಶ್ ಗೌಡ ಅಪ್ಸರಕೂಂಡ, ಸತೀಶ್ ಗೌಡ ಮಾವಿನಕುರ್ವ ,ನಾಗೇಶ್ ಗೌಡ ಕಳಸಿನಮುಟೆ ಮತ್ತು ಸರ್ಕಾರಿ ಆಸ್ಪತ್ರೆಯ ವೈಧ್ಯಾಧೀಕಾರಿಗಳಾದ ಡಾ.ಕೃಷ್ಣಾನಂದ ಮತ್ತು ಡಾ. ಪ್ರಕಾಶ್ ನಾಯ್ಕ ಉಪಸ್ಥಿತಿತರಿದ್ದರು. ಮತ್ತು ಹಲವಾರು ಪ್ರಮುಖರು ಹಾಜರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಪ್ರಮುಖರಿಗು ಅಭಿಮಾನಿಗಳಿಗು ಜಿ ಎನ್ ಗೌಡ ಅವರು ಅಭಿನಂದಿಸಿದರು..