ಪ್ರತಿಯೊಂದು ಕಂಪನಿಯು ತಮ್ಮ ತಮ್ಮ ಗ್ರಾಹಕರನ್ನು ಸೆಳೆಯಲು ಕಡಿಮೆ ಬೆಲೆಯ ಆಕರ್ಷಕ ಯೋಜನೆಗಳನ್ನು ಘೋಷಿಸುತ್ತಿವೆ. ಜಿಯೋ ಪ್ರವೇಶದ ನಂತರ ಟೆಲಿಕಾಂ ರಂಗದಲ್ಲಿ ದರ ಸಮರ ಜೋರಾಗಿದೆ.
ವೋಡಾಫೊನ್,ಏರ್ ಟೆಲ್, ಬಿ ಎಸ್ ಎನ್ ಎಲ್, ಜಿಯೋ ಸಂಸ್ಥೇಗಳು ಮೇಲಿಂದ ಮೇಲೆ ತನ್ನ ಯೋಜನೆಗಳನ್ನು ಪರಿಷ್ಕರಿಸುತ್ತಿವೆ. ಇದೀಗ ಬಿಎಸ್ಎನ್ಎಲ್ ತನ್ನ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ.
ಬಿಎಸ್ಎನ್ಎಲ್ ರೂ. 999 ಪ್ಲಾನ್ ನಲ್ಲಿ ಬದಲಾವಣೆ ಮಾಡಿದ್ದು, ಸೆಪ್ಟೆಂಬರ್ ನಲ್ಲಿ ಆರಂಭಿಸಿದ್ದ ರೂ. 999 ಪ್ರಿಪೇಯ್ಡ್ ಪ್ಲಾನ್ ನಲ್ಲಿ ಈಗ ಬದಲಾವಣೆ ಮಾಡಿದೆ. 6 ತಿಂಗಳ ವ್ಯಾಲಿಡಿಟಿಯೊಂದಿಗೆ ಈ ಹಿಂದೆ ಪ್ರತಿ ದಿನ 2.2 ಜಿಬಿ ಡೇಟಾ ಗ್ರಾಹಕರಿಗೆ ಲಭ್ಯವಿತ್ತು.
ಆದರೆ ಈಗ 3.1 ಜಿಬಿ ಡೇಟಾ ಪ್ರತಿದಿನ ಗ್ರಾಹಕರಿಗೆ ಸಿಗಲಿದೆ. ಡೇಟಾ ಜೊತೆ ಉಚಿತ ಕರೆ ಸೌಲಭ್ಯ ಇರಲಿದೆ. 6 ತಿಂಗಳಲ್ಲಿ ಗ್ರಾಹಕರಿಗೆ ಒಟ್ಟು 561.1 ಜಿಬಿ ಡೇಟಾ ಸಿಗಲಿದೆ. ಡೇಟಾ ಮುಗಿದರೆ 40 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಲಭ್ಯವಾಗಲಿದೆ. ದೆಹಲಿ ಮತ್ತು ಮುಂಬೈ ಹೊರತುಪಡಿಸಿದ ಎಲ್ಲ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ ಎಂದು ತಿಳಿದುಬಂದಿದೆ.
.