ಕುಮಟಾ: ಕೆಲವು ದಿನಗಳ ಹಿಂದೆ ಕುಮಟಾ ನೆಲ್ಲಿಕೇರಿ ಕಂಪೌಂಡ್ ಒಳಗೆ ನಿಲ್ಲಿಸಿಟ್ಟ ಸೈಕಲ್ ಕಳ್ಳತನವಾಗಿದ್ದು,ಸೈಕಲ್ ಕೊಂಡೊಯ್ಯುತ್ತಿರುವ ದ್ರಶ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿತ್ತು.ಈ ಪುಟೇಜ್ ಆದರಿಸಿ ಕುಮಟಾ ಪೋಲೀಸ್ ಠಾಣಾ ತಂಡ ಕಳ್ಳನನ್ನು ಹಿಡಿಯಲು ಸಾಮಾಜಿಕ ಜಾಲತಾಣಗಳಲ್ಲಿ ಸೈಕಲ್ ಕದ್ದೊಯ್ಯುತ್ತಿರುವ ದೃಶ್ಯವನ್ನು ವೈರಲ್ ಮಾಡಿದ್ದರು.
ವಾಟ್ಸಪ್ ಸಂದೇಶ ನೋಡಿ ಕುಮಟಾ ಪೋಲೀಸ್ ಠಾಣೆಗೆ ಕರೆ ಬಂದಿದ್ದು ದಾರೇಶ್ವರ ಮೂಲದ ವ್ಯಕ್ತಿ ಈ ಕೆಲಸ ಮಾಡಿರುವದಾಗಿ ತಿಳಿದುಬಂದಿದ್ದು ಸೈಕಲ್ ಸಮೇತ ಆರೋಪಿಯನ್ನು ಬಂದಿಸಿದ್ದಾರೆ.