ಕುಮಟಾ:  ಅಲೆಲೆಲೆ!! ನೋಡ್ರಪ್ಪಾ ನೋಡಿ, ಇದು ರಸ್ತೆನಾ? ಇಲ್ಲಾ ದಾರಿಯ ಮದ್ಯೆನೇ ಕಲ್ಲುಕೋರೆ ಇದೆಯಾ ಅಂತನೇ ತಿಳಿತಾ ಇಲ್ಲಾ. ಅಕಸ್ಮಾತ್ ಈ ರಸ್ತೆಯಲ್ಲಿ ಗರ್ಭಿಣಿ ಸ್ತ್ರೀಯನ್ನೆನಾದ್ರೂ ವಾಹನದಲ್ಲಿ ಕರೆದುಕೊಂಡು ಹೋದರೆ, ಮುಗಿದೇ ಹೋಯಿತು. ದಾರಿಯ ಮಧ್ಯದಲ್ಲೇ ಹೆರಿಗೆ ಆಗುವುದು ಗ್ಯಾರಂಟಿ!!
ಹೌದು, ಇದು ಕುಮಟಾ ತಾಲೂಕಿನ ನೀಲಕೋಡ್ ನ ರಸ್ತೆಯ ದುರವಸ್ಥೆ. ಈ ರಸ್ತೆಗೆ ಡಾಂಬರು ಕಂಡು ದಶಕಗಳೇ ಕಳೆದಿವೆ. ಈ ಊರಿಗೆ ಜನಪ್ರತಿನಿದಿಗಳು ಬರುವುದು ಚುನಾವಣಾ ಸಮಯದಲ್ಲಿ ಮಾತ್ರ. ಅದನ್ನು ಬಿಟ್ಟರೆ ಇನ್ನಾವುದೇ ಸಮಯದಲ್ಲೂ ಯಾರೂ ಇತ್ತ ಕಡೆ ಮುಖಮಾಡುವುದಿಲ್ಲ. ಈ ರಸ್ತೆ ದ್ವಿಚಕ್ರ ಸವಾರರಿಗೆ ಒಡಾಡುವುದು ದೊಡ್ಡ ಸವಾಲಾಗೆ ಪರಿಣಮಿಸಿದೆ. ಎಷ್ಟು ಸಲ ಸಮಸ್ಯೆಯ ಬಗ್ಗೆ ದೂರು ನೀಡಿದರೂ, ಯಾರೂ ಕೂಡಾ ಇತ್ತ ಸುಳಿಯುತ್ತಿಲ್ಲ ಅಂತಿದ್ದಾರೆ ಗ್ರಾಮಸ್ಥರು. ಇದನ್ನೆಲ್ಲಾ ನೋಡಿ ನೋಡಿ ಬೇಸತ್ತ ಊರಿನವರು, ನಮಗೆ ಮೊದಲಿದ್ದ ಮಣ್ಣು ರಸ್ತೆನೇ ಓಡಾಡಲು ಅನುಕೂಲವಿತ್ತು ಎನ್ನುತ್ತಾರೆ.  ವಿಜ್ಞಾನ, ತಂತ್ರಜ್ಞಾನ ಇಷ್ಟು ಮುಂದುವರಿದಿದ್ದರೂ, ಈ ಊರಿಗೆ ಮೂಲಭೂತ ಸೌಕರ್ಯ ಮಾತ್ರ ಮರಿಚಿಕೆಯಾಗಿದೆ. ಮುಂದಿನ ವರ್ಷ ಚುನಾವಣೆ ಬರ್ತಿದೆ, ಆಗ ತಕ್ಕ ಪಾಠ ಕಲೀಸ್ತಿವಿ ಅಂತಿದ್ದಾರೆ ಅಲ್ಲಿನ ಸಾರ್ವಜನಿಕರು. ಇನ್ನಾದರೂ ಗಾಡ ನಿದ್ದೆಯಲ್ಲಿದ್ದ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿದಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ, ಎನ್ನುವುದನ್ನು ಕಾದು ನೋಡಬೇಕಾಗಿದೆ

RELATED ARTICLES  ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ